ಇಂದಿನ ಸುಭಾಷಿತ…
ಶರದಿ ನ ವರ್ಷತಿ, ಗರ್ಜತಿ, ವರ್ಷತಿ ವಾರ್ಷಾಸು ನಿಃಸ್ವನಃ ಮೇಘಃ |
ನೀಚಃ ವದತಿ, ನ ಕುರುತೇ, ವದತಿ ನ ಸಾಧುಃ ಕರೋತಿ ಏವ ||
ಅರ್ಥ: ಶರತ್ಕಾಲದಲ್ಲಿ, ಮೋಡಗಳು ಗುಡುಗುತ್ತವೆ ಆದರೆ ಮಳೆಯಾಗುವುದಿಲ್ಲ;
ಅದೇ ಮಳೆಗಾಲದಲ್ಲಿ ಅವು ಗುಡುಗದೆ ಮಳೆ ಸುರಿಸುತ್ತವೆ.
ಅದೇ ರೀತಿ ಸಾಮರ್ಥ್ಯವಿಲ್ಲದ ಜನರು ಬರೀ ಮಾತಾಡುತ್ತಾರೆ, ಏನೂ ಮಾಡುವುದಿಲ್ಲ.
ಆದರೆ ಸಜ್ಜನರು ಮಾತನ್ನೇ ಆಡದೆ ಕೆಲಸ ಮಾಡಿ ತೋರಿಸುತ್ತಾರೆ.