10 ವಿಧದ ಸಮಾಧಿ ಕೌಶಲ್ಯಗಳು

ಸಮಾಧಿಯನ್ನು ಅಭ್ಯಾಸಿಸುವಾಗ 10 ವಿಧದ ಕೌಶಲ್ಯಗಳಲ್ಲಿ ನುರಿತನಾಗಬೇಕಾಗುತ್ತದೆ. ಆಗಮಾತ್ರ ಸಮಾಧಿ ಸಿದ್ಧಿಸಲು ಸಾಧ್ಯವಾಗುತ್ತದೆ. ಅವುಗಳ ವಿವರಣೆ ಹೀಗಿದೆ… | ಅನೀಶ್ ಬೋಧ್


1. ಶುದ್ಧತೆ (ಸ್ವಚ್ಛತೆ):
ಅಂದರೆ ಇಲ್ಲಿ ಆತನು ಬಾಹ್ಯ ಶುಭ್ರತೆ ಹಾಗು ಆಂತರಿಕ ಶುಭ್ರತೆ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಾಹ್ಯ ಶುಭ್ರತೆ ಎಂದರೆ ವಸ್ತ್ರಗಳು, ಚರ್ಮ (ದೇಹ). ಆಂತರಿಕ ಶುಭ್ರತೆ ಎಂದರೆ ಶರೀರದ ಒಳ ಆರೋಗ್ಯ ಅಥವಾ ಮನಸ್ಸಿನ ಉತ್ತಮ ಆಲೋಚನೆಗಳು. ಹೀಗೆ ಯಾವಾಗ ಬಾಹ್ಯ ಮತ್ತು ಆಂತರಿಕ ಆಧಾರಗಳು ಶುಭ್ರವಾಗಿರುವವೋ ಆಗ ವಿಞ್ಞಾನದಲ್ಲಿ ಮತ್ತು ವಿಞ್ಞಾನದ ಸಹಗಾಮಿ ಎಲ್ಲವೂ ಸ್ವಚ್ಛವಾಗಿ ಶುದ್ಧವಾಗಿ ಉದಯಿಸುತ್ತವೆ.

2. ಪಂಚೇಂದ್ರಿಯಗಳ (ಅದಿಪತ್ಯ) ಸಮತೋಲನ:
ಹೇಗೆ ಶರೀರಕ್ಕೆ ಐದು ಇಂದ್ರಿಯಗಳಿವೆಯೋ ಹಾಗೇ ಧ್ಯಾನ ಮನಸ್ಸಿಗೂ ಐದು ಇಂದ್ರಿಯಗಳಿವೆ (ಅದಿಪತ್ಯ). ಅವೆಂದರೆ: ಶ್ರದ್ಧಾ, ವಿರಿಯಾ, ಸ್ಮೃತಿ, ಸಮಾಧಿ ಮತ್ತು ಪಞ್ಞಾ. ಇವುಗಳ ಸಮತೋಲನ ಅತ್ಯಗತ್ಯ. ಇಲ್ಲದಿದ್ದರೆ ಜೀವನದಲ್ಲಿ ಏರುಪೇರುಗಳಾಗುವ ಸಾಧ್ಯತೆಯಿರುತ್ತದೆ. ಧ್ಯಾನದಲ್ಲಿ ಇವುಗಳ ಸಮತೋಲನ ಮಹತ್ತರವಾದ ಫಲ ನೀಡುತ್ತದೆ.
ಶ್ರದ್ಧೆಯು ಪ್ರಬಲವಾಗಿದ್ದು, ಉಳಿದವು ದುರ್ಬಲವಾಗಿದ್ದರೆ ವಿರಿಯ (ಪ್ರಯತ್ನ) ಕಾರ್ಯಶೀಲವಾಗದು, ಸ್ಮೃತಿಯು ಜಾಗರೂಕವಾಗದು, ಏಕಾಗ್ರತೆಯು ಚದುರಿ ಹೋಗುವುದು ಹಾಗು ಅರಿಯುವಿಕೆಯು ಮಸುಕಾಗುವುದು. ಹೀಗೆಯೇ ಉಳಿದವುಗಳು ಆಗುತ್ತವೆ.
ವಿವರವಾಗಿ ಈಗ ಶ್ರದ್ಧೆ ಹಾಗು ಪಞ್ಞಾವನ್ನು (ಅರಿವಿಕೆ) ತೆಗೆದುಕೊಳ್ಳೋಣ. ಒಬ್ಬನು ಶ್ರದ್ಧೆ (ನಂಬಿಕೆ)ಯಲ್ಲಿ ಬಲಿಷ್ಠನಾಗಿ, ಅರಿಯುವಿಕೆಯಲ್ಲಿ (ಪಞ್ಞಾ) ದುರ್ಬಲವಾಗಿದ್ದಾಗ ಆತನ ಶ್ರದ್ಧೆಯು ಟೀಕಾತೀತವಾದುದು. ಆದರೆ ಆಧಾವವಿಲ್ಲದ್ದು (ಅಂತಹವನಲ್ಲಿ ಅಂಧಶ್ರದ್ಧೆ, ಮೌಢ್ಯವು ಹೆಚ್ಚಾಗುವ ಸಾಧ್ಯತೆ ಇರುವುದು).
ಹಾಗೆಯೇ ಒಬ್ಬನು ಅರಿಯುವಿಕೆಯಲ್ಲಿ (ಪಞ್ಞಾ) ಬಲಿಷ್ಠನಾಗಿದ್ದು, ಶ್ರದ್ಧೆಯಲ್ಲಿ ದುರ್ಬಲವಾಗಿದ್ದಾಗ ಆತನು ಹಠಮಾರಿತನವುಳ್ಳನಾಗುತ್ತಾನೆ. (ಸ್ವಾವಲಂಬನೆ ಮಾಡಿಕೊಳ್ಳುತ್ತಾನೆ) ಮತ್ತು ಅಂತಹವನನ್ನು ಚಿಕಿತ್ಸೆಯಿಂದ ಗುಣಪಡಿಸಲಾಗದ ರೋಗಿ ಎಂದು ಪರಿಗಣಿಸುತ್ತಾರೆ. ಯಾರಲ್ಲಿ ಶ್ರದ್ಧೆ ಹಾಗು ಪಞ್ಞಾ ಸಮತೋಲನವಾಗಿರುತ್ತವೆಯೋ ಆಗ ಅಂತಹವನು ಶ್ರದ್ಧೆಯುಳ್ಳವನಾಗಿದ್ದು, ಆದರೆ ಹಿಂದೆ ಆಧಾರಯುತ ಅರಿಯುವಿಕೆಯಿರುತ್ತದೆ, ಅಂತಹವನು ಚೆನ್ನಾಗಿ ಸತ್ಯ ಅರಿಯುತ್ತಾನೆ.
ಹಾಗೆಯೇ ಒಬ್ಬನಲ್ಲಿ ಪ್ರಯತ್ನಶೀಲತೆ (ವೀರಿಯಾ) ಅಲ್ಪ (ದುರ್ಬಲ)ವಾಗಿದ್ದು, ಏಕಾಗ್ರತೆ ಬಲಿಷ್ಠವಾಗಿದ್ದಾಗ ಅವನ ಮನಸ್ಸು ನಿದ್ರೆಗೆ ಹಾಗು ಸೋಮಾರಿತನಕ್ಕೆ ಜಾರುತ್ತದೆ. ಹಾಗಿಲ್ಲದೆ ಒಬ್ಬನಲ್ಲಿ ಪ್ರಯತ್ನಶೀಲತೆ ಅಧಿಕವಾಗಿದ್ದು (ಬಲಿಷ್ಠವಾಗಿದ್ದು), ಏಕಾಗ್ರತೆ ದುಬರ್ಲಲವಾಗಿದ್ದಾಗ ಆತನಲ್ಲಿ ಉದ್ವೇಗ (ಕ್ಷೊಭೆ) ಉಂಟಾಗುತ್ತದೆ. ಅದೇ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಇವೆರಡರ (ಪ್ರಯತ್ನ ಮತ್ತು ಏಕಾಗ್ರತೆ) ಸಮತೋಲನ ಅತ್ಯವಶ್ಯಕವಾಗಿದೆ. ಆಗ ಇತ್ತ ಸೋಮಾರಿತನವಕ್ಕೂ ಅವಕಾಶವಿಲ್ಲದೆ ಹಾಗೆಯೇ ಉದ್ವೇಗಗಳಿಗೂ ಅವಕಾಶವಿಲ್ಲದೆ ಏಕಾಗ್ರತೆ ಹಾಗು ಪ್ರಯತ್ನವು ಬಲಿಷ್ಠವಾಗುತ್ತದೆ.
ಮತ್ತೆ ಶ್ರದ್ಧೆ ಹಾಗು ಸಮಾಧಿಯು ಸಹಾ ಸಮತೋಲನವಾಗಿರಬೇಕು. ಏಕೆಂದರೆ, ಸಮಾದಿ ವಿಕಾಸಕ್ಕೆ ಶ್ರದ್ಧೆಯು ಅತ್ಯವಶ್ಯಕವಾಗಿದೆ. ಹಾಗೆಯೇ ಸಮಾಧಿ ಮತ್ತು ಪಞ್ಞಾವು ಸಹಾ ಸಮತೋಲನವಾಗಿರಬೇಕು. ಸಮಾಧಿಯ ಸ್ಥಾಪನೆಗೆ ಪ್ರಬಲವಾದ ಏಕಾಗ್ರತೆ, ಏಕೀಕರಣ ಬೇಕಾಗುತ್ತದೆ ಇದಕ್ಕಾಗಿ ಅರಿವಿನ (ಪಞ್ಞಾ) ಸಾಕ್ಷಾತ್ಕಾರಕ್ಕಾಗಿ ಸಮಾಧಿಯ ಅತ್ಯವಶ್ಯತೆಯಿದ್ದು ಜೊತೆಗೆ ತೀಕ್ಷ್ಣ ಅರಿವು ಬೇಕಾಗುತ್ತದೆ. ಹೀಗಾಗಿ ಇವೆರಡರ ಸಮತೋಲನ ಅತ್ಯಗತ್ಯವಾಗಿದೆ.
ಇನ್ನು ಉಳಿದಿದ್ದು ಸ್ಮೃತಿಯೊಂದೇ. ಇದು ಎಲ್ಲ ಪರಿಸ್ಥಿತಿಯಲ್ಲೂ ಬೇಕಾಗಿದ್ದು, ಎಲ್ಲದರ ಸಮತೋಲನೆಯಲ್ಲಿ ಪಾತ್ರ ವಹಿಸಿ ಅತಿರೇಕಕ್ಕೆ ಕೊಂಡೊಯ್ಯದೆ ಪ್ರಮುಖ ಪಾತ್ರವಹಿಸುತ್ತದೆ. ಹೇಗೆ ಎಲ್ಲಾ ಸಾರುಗಳಿಗೆ ಉಪ್ಪು ಅಗತ್ಯವೋ, ರಾಜನ ಎಲ್ಲಾ ಕಾರ್ಯಕ್ಕೆ ಪ್ರಧಾನಮಂತ್ರಿ ಎಷ್ಟು ಅವಶ್ಯಕವೋ ಹಾಗೆಯೇ ಸಮಾಧಿಪ್ರಾಪ್ತಿಗೆ ಸ್ಮೃತಿಯು ಅತ್ಯವಶ್ಯಕವಾಗಿದೆ. ಆದ್ದರಿಂದಲೇ ಭಗವಾನರು ಸ್ಮೃತಿಯನ್ನು ಶರಣು, ರಕ್ಷಕ ಎಂದು ಶ್ಲéಾಘಿಸಿದ್ದಾರೆ, ಸ್ಮೃತಿ ಇಲ್ಲದೆ ಯಾವ ಯತ್ನಶೀಲತೆಯೂ ಇಲ್ಲ; ಯಾವ ನಿಗ್ರಹವೂ ಇಲ್ಲ.

3. ನಿಮಿತ್ತಗಳಲ್ಲಿ ಕೌಶಲ್ಯ ಹೊಂದುವಿಕೆ:
ಅಂದರೆ ಇಲ್ಲದಿದ್ದ ನಿಮಿತ್ತವನ್ನು ಉಂಟಾಗಿಸುವಿಕೆ (ಉದಾ: ಪಠವಿ ಕಸಿಣಾ) ಉದಯಿಸಿದ ನಿಮಿತ್ತವನ್ನು ವಿಕಾಸಗೊಳಿಸುವಿಕೆ, ವಿಕಾಸಿಸಲ್ಪಟ್ಟ ನಿಮಿತ್ತವನ್ನು ರಕ್ಷಿಸುವಿಕೆ. ಈ ಮೂರು ಹಂತಗಳ ಕೌಶಲ್ಯಕ್ಕೆ ನಿಮಿತ್ತಗಳಲ್ಲಿ ಕೌಶಲ್ಯ ಹೊಂದಿರುವಿಕೆ ಎನ್ನುವರು.

4. ಯತ್ನಶೀಲನಾಗಬೇಕಾದ ಸಮಯದಲ್ಲಿ ಪ್ರಯತ್ನಶೀಲನಾಗುವಿಕೆ:
ಹೇಗೆಂದರೆ: ಭಿಕ್ಖುಗಳೇ, ಯಾವಾಗ ಮನಸ್ಸು ಜಡತ್ವದಲ್ಲಿರುವುದೋ, ಸೋಮಾರಿತನ ಹೊಂದಿರುತ್ತದೋ ಆ ಸಮಯದಲ್ಲಿ ಧಮ್ಮವಿಷಯ ಸಂಭೋಜ್ಝಂಗ (ಸ್ಥಿತಿಗಳ (ಸತ್ಯಗಳ) ಶೋಧನಾ ಸಂಭೋದಿ ಅಂಗ) ವನ್ನು ವಿರಿಯಾ ಸಂಭೋಜ್ಝಂಗ ಮತ್ತು ಪೀತಿ (ಉತ್ಸಾಹ, ಆನಂದ) ಸಂಬೋಧಿಯ ಅಂಗಗಳನ್ನು ವೃದ್ಧಿಗೊಳಿಸಬೇಕು. ಏಕೆ? ಏಕೆಂದರೆ: ಕುಶಲ ಸ್ಥಿತಿಗಳು ಹಾಗು ಅಕುಶಲ ಸ್ಥಿತಿಗಳು ಒಂದಕ್ಕೊಂದು ಪ್ರತಿರೂಪವಾಗಿದೆ. ಯೋಗ್ಯ ಗಮನಹರಿಸುವಿಕೆಯಿಂದಾಗಿ ಜಡತ್ವದ ಅರಿವು ಉಂಟಾಗುತ್ತದೆ. ಆಗ ಅದಕ್ಕೆ ಪ್ರತಿಯಾಗಿ ಇಲ್ಲದಿದ್ದಂತಹ ಸ್ಥಿತಿ ಶೋಧನ ಸಂಭೋಜ್ಝಂಗ, ಪ್ರಯತ್ನಶೀಲತೆ (ವಿರಿಯಾ) ಸಂಭೋಧಿ ಅಂಗ ಹಾಗು ಉತ್ಸಾಹ (ಆನಂದ ಪೀತಿ) ಸಂಭೋದಿ ಅಂಗವನ್ನು ಉಂಟುಮಾಡಬೇಕು. ಆಗ ಜಡತ್ವವು ಇನ್ನಿಲ್ಲವಾಗುತ್ತದೆ. ಹೀಗೆ ಅತನು ಯತ್ನಶೀಲನಾಗಬೇಕಾದ ಸಮಯದಲ್ಲಿ ಯತ್ನಶೀಲನಾಗುತ್ತಾನೆ.
ಸತ್ಯಶೋಧನೆ ಸಂಭೋಜ್ಝಂಗ (ಧಮ್ಮ ವಿಷಯ ಸಂಬೋಜ್ಝಂಗದ) ಉದಯಕ್ಕೆ ಕಾರಣವಾಗುವ ಏಳು ವಿಷಯಗಳು:
1. ಪ್ರಶ್ನೆಗಳನ್ನು ಕೇಳುವಿಕೆ
2. ಶುಭ್ರತೆ,
3. ಪಂಚೇಂದ್ರಿಯಗಳ ಸಮತೋಲನೆ
4. ಅಪ್ರಜ್ಞಾವಂತರ ನಿರೋಧ
5. ಪ್ರಜ್ಞಾವಂತರ ಸ್ನೇಹ
6. ಗಂಭೀರ ಜ್ಞಾನಕ್ಷೇತ್ರದ ಅವಲೋಕನೆ
7. ಸ್ಥಿತಿಗಳ ಪರೀಕ್ಷೆಗಳಲ್ಲಿ ದೃಢತೆ.
ಪ್ರಯತ್ನಶೀಲತೆ ಸಂಬೋಧಿ ಅಂಗಕ್ಕೆ (ವಿರಿಯಾ ಸಂಬೋಜ್ಝಂಗ) ಸಹಾಯವಾಗುವ 11 ಅಂಶಗಳು:
1. ಯತ್ನಶೀಲನಾಗಿಲ್ಲದಿದ್ದರೆ ಆಗುವ ನಷ್ಟದ, ನಿಂದೆಯ, ಸೋಲಿನ ದುಃಖಗಳ ಭಯಾನಕತೆಯನ್ನು ಅಂದಾಜು ಮಾಡುವಿಕೆ.
2. ಯತ್ನಶೀಲನಾಗಿದ್ದರೆ ಆಗುವ ಲೌಕಿಕ ಲಾಭ ಹಾಗು ಲೋಕೋತ್ತರ ಲಾಭಗಳ ಲೆಕ್ಕಾಚಾರ.
3. ಈ ಮಾರ್ಗವು ಬುದ್ಧರಂತಹರದ್ದು, ಆರ್ಯರದ್ದು, ಯತ್ನಶೀಲರದ್ದು ಹೊರತು ಸೋಮಾರಿಗಳದ್ದಲ್ಲ ಎಂಬ ಗಂಭಿರ ಚಿಂತನೆ ಮಾಡುವುದು.
4. ಯತ್ನಶೀಲರಾಗಿದ್ದರೆ ತಮಗೆ ದಾನ ನೀಡುವವರಿಗೆ ಸಹಾಯವಾಗುತ್ತದೆ.
5. ಪ್ರಯತ್ನದಿಂದಾಗಿಯೇ ಮಹಾನ್ ಸ್ಥಿತಿಗೇರಿದ ಬುದ್ಧರನ್ನು ಕುರಿತು ಹೀಗೆ ಚಿಂತನೆ ಮಾಡುವುದು: ನಮ್ಮ ಶಾಸ್ತರು ಯತ್ನಶೀಲರು, ಈ ಅನನ್ಯ ಧಮ್ಮವು ಅಭ್ಯಾಸದಿಂದಾಗಿಯೇ ಗೌರವಿಸಲ್ಪಡುವುದೇ ಹೊರತು ಬೇರೆ ರೀತಿಯಲ್ಲಿ ಅಲ್ಲ.
6. ಈ ಶ್ರೇಷ್ಠವಾದ ಧಮ್ಮದ ಆಸ್ತಿಯನ್ನು ಕುರಿತು ಪರಿಶೀಲನೆ ಮಾಡಿ ಇದು ಸೋಮಾರಿಗಳಿಗೆ ಸಿಗುವಂತಹದ್ದಲ್ಲ ಎಂದು ಪ್ರೇರಣೆ ಪಡೆಯುವುದು.
7. ಸೋಮಾರಿತನ ಹಾಗು ಜಡತ್ವಗಳನ್ನು ತೊರೆದುಹಾಕುವುದು. ಅದಕ್ಕಾಗಿ ಅಲೋಕಸಞ್ಞೆ, ಆಸನದ ಬದಲಾವಣೆ, ತೆರೆದ ಗಾಳಿಯಲ್ಲಿ ತಿರುಗಾಡುವಿಕೆ ಮಾಡುವುದು.
8. ಸೋಮಾರಿಗಳ ವರ್ಜನೆ
9. ವಿರಿಯವಂತರ ಸ್ನೇಹ
10. ಯತ್ನಶೀಲತೆಯ ಅವಲೋಕನ
11. ಯತ್ನಶೀಲತೆಯಲ್ಲಿ ದೃಢತೆ.
ಆನಂದ ಉತ್ಸಾಹ (ಪೀತಿ ಸಂಭೋಜ್ಝಂಗ) ಸಂಬೋಧಿ ಅಂಗದ ಉದಯಕ್ಕೆ ಕಾರಣವಾದ ನಾಲ್ಕು ಅಂಶಗಳು.
1. ಬುದ್ಧಾನುಸ್ಸತಿ
2. ಧಮ್ಮಾನುಸ್ಸತಿ
3. ಸಂಘಾನುಸ್ಸತಿ
4. ಶೀಲಾನುಸ್ಸತಿ
5. ತ್ಯಾಗಾನುಸ್ಸತಿ
6. ದೇವತಾನುಸ್ಸತಿ
7. ಉಪಸಮಾನುಸ್ಸತಿ
8. ಉತ್ಸಾಹ (ಆನಂದ) ರಹಿತರಾದವರ ವರ್ಜನೆ
9. ಉತ್ಸಾಹಿ (ಆನಂದಿತರ)ಗಳ ಸ್ನೆಹ
10. ಸ್ಫೂತರ್ಿಯುತ ಪ್ರವಚನಗಳ ನೆನಪು ವೃದ್ಧಿಸುವಿಕೆ
11. ಉತ್ಸಾಹದಲ್ಲೇ ತೊಡಗಿರುವಿಕೆ.

5. ನಿಗ್ರಹಿಸಬೇಕಾದ ಸಮಯದಲ್ಲಿ ನಿಗ್ರಹಿಸುವಿಕೆ:
ಇದರ ಬಗ್ಗೆ ಭಗವಾನರು ಹೀಗೆ ನುಡಿದಿದ್ದಾರೆ: ಭಿಕ್ಷುಗಳೇ, ಯಾವಾಗ ಮನಸ್ಸು ಕ್ಷೊಭೆಗೆ, ಉದ್ವೇಗಗಳಿಗೆ ಸಿಲುಕಿ ಹೋಗಿರುವುದೋ ಅಂತಹ ಸಮಯದಲ್ಲಿ ಪಸ್ಸದ್ದಿ ಸಂಬೋಜ್ಜಂಗ (ಪ್ರಸನ್ನತೆಯ/ಪ್ರಶಾಂತತೆಯ ಸಂಬೋಧಿ ಅಂಗ) ವನ್ನು ಸಮಾಧಿ ಸಂಭೋಧಿ ಅಂಗವನ್ನು ಮತ್ತು ಉಪೇಕ್ಷೆಯ ಸಂಬೋಧಿ ಅಂಗವನ್ನು ವೃದ್ಧಿಗೊಳಿಸಬೇಕು. ಏಕೆಂದರೆ ಈ ಸ್ಥಿತಿಗಳಿಂದ ಆ ಅಕುಶಲ ಕ್ಷೊಭೆಗಳು ಶಾಂತವಾಗಿಬಿಡುತ್ತವೆ.
ಪ್ರಸನ್ನತೆ (ಪ್ರಶಾಂತತೆ) ಸಂಬೋಧಿ ಅಂಗದ ಉದಯಿಸುವಿಕೆಗೆ ಕಾರಣವಾದ ಏಳು ಅಂಗಗಳು:
1. ಉತ್ತಮ ಆಹಾರ ಸೇವನೆ,
2. ಉತ್ತಮ ವಾತಾವರಣದಲ್ಲಿ ಜೀವಿಸುವಿಕೆ,
3. ಸುಖಕರವಾದ ಆಸನದ ಅಭ್ಯಾಸ,
4. ಕೋಪಿಗಳ ವರ್ಜನೆ,
5. ಪ್ರಶಾಂತ ಸ್ವರೂಪಿಗಳ ಸ್ನೇಹ
6. ಪ್ರಶಾಂತತೆಯಲ್ಲಿ ದೃಢತೆ.
ಸಮಾಧಿ ಸಂಬೋಧಿ ಅಂಗಕ್ಕೆ ಕಾರಣವಾದ 11 ಅಂಶಗಳು:
1. ಶುಭ್ರತೆ,
2. ನಿಮಿತ್ತ (ಚಿಹ್ನೆ)ಗಳ ಕೌಶಲ್ಯ
3. ಧ್ಯಾನ ಪಚೇಂದ್ರಿಯಗಳ ಸಮತೋಲನ
4. ಸಕಾಲ ನಿಗ್ರಹ
5. ಸಕಾಲ ಶ್ರಮ
6. ಸಕಾಲ ಪ್ರೇರಣೆ
7. ಉಪೇಕ್ಖಾವೃದ್ಧಿ
8. ಸಮಾಧಿರಹಿತರ ವರ್ಜನೆ
9. ಸಮಾಧಿವಂತರ ಸ್ನೇಹ
10. ಸಮಾಧಿಯ ಅವಲೋಕನ
11. ಸಮಾಧಿಯಲ್ಲಿ ದೃಢಸಂಕಲ್ಪ.
ಉಪೇಕ್ಖಾ ಸಂಬೋಜ್ಝಂಗಕ್ಕೆ ಕಾರಣವಾದ ಐದು ಅಂಶಗಳು:
1. ಜೀವಿಗಳ ಬಗ್ಗೆ ನಿರ್ಲಿಪ್ತತೆ (ಉಪೇಕ್ಖಾ ಭಾವನೆ ಅಂಟದಿರುವಿಕೆ)
2. ಸಂಖಾರಗಳ (ಮನೋನಿರ್ಮಿತಿ) ಬಗ್ಗೆ ಉಪೇಕ್ಷೆ
3. ಸ್ನೇಹಪರರ ಹಾಗು ಭಾವಾವೇಷಿಗಳ ವರ್ಜನೆ
4. ನಿರ್ಲಿಪ್ತರ ಮಿತ್ರತ್ವ
5. ಉಪೇಕ್ಷೆಯಲ್ಲಿ ದೃಢತೆ.

6. ಪ್ರೋತ್ಸಾಹಿಸಬೇಕಾದ ಸಂದರ್ಭದಲ್ಲಿ ಮನಸ್ಸನ್ನು ಪ್ರೇರೇಪಿಸುವುದು:
ಯಾವಾಗ ಮನಸ್ಸು ನಿರುತ್ಸಾಹದಿಂದ ಕೂಡಿರುವುದೋ ಜೊತೆ ಜಡತೆಯಿಂದ ಆಕ್ರಮಿತವಾಗಿರುವುದೋ ಉತ್ಸಾಹಗೊಳಿಸಲು ಅಥವಾ ಆನಂದಿತವಾಗಲು ವಿಫಲವಾಗಿರುವುದೋ ಆಗ ಆಷ್ಟಬಗೆಯ ಸಂವೇಗ ಚಿಂತನೆಯಿಂದ ಮನಸ್ಸನ್ನು ಸ್ಫೂತರ್ಿಗೊಳಿಸುವುದು. ಅವೆಂದರೆ: ಜನ್ಮ ಮುಪ್ಪು, ರೋಗ, ಮರಣ, ಅಪಾಯ ಲೋಕಗಳ ದುಃಖ, ಹಿಂದಿನ ಜನ್ಮಗಳ ಕರ್ಮಫಲಗಳಿಂದ ಈ ಜನ್ಮದಲ್ಲಿ ಬರುವ ದುಃಖ, ಭವಿಷ್ಯದಲ್ಲಿ ಜನ್ಮ ತಪ್ಪಿಸಲಾಗದೆ ಅನುಭವಿಸಬೇಕಾಗಿರುವ ದುಃಖ, ವರ್ತಮಾನದಲ್ಲಿ ಆಹಾರಕ್ಕಾಗಿ ಅಲೆಯುತ್ತ ಸಿಗುತ್ತಿರುವ ದುಃಖ. ಹೀಗೆ ಈ ದುಃಖಗಳನ್ನು ತಪ್ಪಿಸಲೇಬೇಕಂದು ಪುನಃ ಜಾಗೃತಿ ಹೊಂದುವುದು, ಚಾಲನಾಶಕ್ತಿಯನ್ನು ನೀಡುವುದು. ಹಾಗೆಯೇ ಬುದ್ಧ, ಧಮ್ಮ ಮತ್ತು ಸಂಘದ ಅನುಸ್ಮೃತಿ ಮಾಡಿ ಅವುಗಳಲ್ಲಿ ಅಪಾರ ಶ್ರದ್ಧೆ ತಾಳುವುದು. ಹೀಗೆ ಭಿಕ್ಖುವು ಮನಸ್ಸನ್ನು ಪ್ರೋತ್ಸಾಹಿಸಿಕೊಳ್ಳುತ್ತಾನೆ.

7. ಉಪೇಕ್ಷಾ (ಸಮಚಿತ್ತತೆಯಿಂದ) ದಿಂದ ನೋಡಬೇಕಾದ (ಇರಬೇಕಾದ) ಸಂದರ್ಭದಲ್ಲಿ ಉಪೇಕ್ಷಯಿಂದ ಇರುವಿಕೆ.
ಯಾವಾಗ ಭಿಕ್ಖುವು ಈ ರೀತಿಯಾಗಿ ಪ್ರಶಾಂತತೆಯ ಹಾದಿಯಲ್ಲಿ ಸಾಗುತ್ತಿರುವನೋ, ವಿಷಯಗಳಲ್ಲಿ ಸಮನಾಗಿರುವನೋ, ಸೋಮಾರಿಯಾಗಿರದೆ, ಕ್ಷೊಭೆಯಿಲ್ಲದೆ, ಅಲಕ್ಷವಿಲ್ಲದೆ ಇರುವನೋ ಆಗ ಆತನು ಶ್ರಮಿಸುವುದರಲ್ಲಿಯಾಗಲಿ, ನಿಗ್ರಹಿಸುವುದರಲ್ಲಿಯಾಗಲಿ ಅಥವಾ ಪ್ರೋತ್ಸಾಹಿಸುವುದರಲ್ಲಿಯಾಗಲಿ ಆಸಕ್ತನಾಗಿರುವುದಿಲ್ಲ. ಯಾರ ಕುದುರೆಗಳು ಸಮವಾಗಿ ಸಾಗುತ್ತಿರುವವೋ ಅಂತಹ ಕುದುರೆಗಳ ಸಾರಥಿಯಂತೆ ಆ ಭಿಕ್ಖುವು ಉಪೇಕ್ಷೆಯಿಂದ ವಿಹರಿಸುತ್ತಾನೆ.

8. ಸಮಾಧಿರಹಿತರ ವರ್ಜನೆ:
ಯಾವ ಜನರು ತ್ಯಾಗದ ಹಾದಿಯನ್ನೇ ತುಳಿದಿಲ್ಲವೋ, ಸದಾ ಪ್ರಾಪಂಚಿಕ ವ್ಯವಹಾರಗಲ್ಲಿ ಚಟುವಟಿಕೆಯಿಂದಿರುವರೋ ಹಾಗು ಯಾರ ಮನಸ್ಸು ಚದುರಿಹೋಗಿವೆಯೋ ಅಂತಹವರಿಂದ ತುಂಬ ದೂರವಿರಿ.

9. ಸಮಾಧಿ ಪ್ರಾಪ್ತರೊಡನೆ ಮಾತ್ರ ಇರುವಿಕೆ:
ಯಾರು ತ್ಯಾಗದ ಹಾದಿಯಲ್ಲಿ ಇರುವರೋ ಮತ್ತು ಸಮಾಧಿಸಿದ್ಧರೋ ಅಂತಹವರ ಸಾನಿಧ್ಯದಲ್ಲಿ ಆಗಾಗ್ಗೆ ಇರುವಿಕೆ.

10. ಸಮಾಧಿಯೊಂದಿಗೆ ದೃಢನಿಷ್ಠನಾಗಿರುವುದು:
ಸಮಾಧಿಯ ಬಗ್ಗೆ ಮಹತ್ವತೆ ವಹಿಸುವುದು, ಧ್ಯಾನದ ಬಗ್ಗೆ ಬಾಗಿರುವುದು, ಕಲಿಯುವುದು. ಆ ದಿಕ್ಕಿನಲ್ಲಿ ಸಾಗಿ ಸಮಾಧಿಪ್ರಾಪ್ತಿ ಮಾಡುವಿಕೆ. ಎಲ್ಲ ಹಂತಗಳ ಪ್ರಾಪ್ತಿಯಾಗುವವರೆಗೂ ನಿರಂತರ ಸಾಗುತ್ತಿರುವುದು.
ಹೀಗೆ 10 ವಿಧದ ಸಮಾಧಿ ಕೌಶಲ್ಯ ಸಾಧಿಸುವುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.