ನಾನು ಎಂಬ ಚಿಂತನೆ : ರಮಣ ವಿಚಾರ ಧಾರೆ

ಪ್ರಶ್ನೆ : ನಾನು ಎಂಬ ಚಿಂತನೆ ಹುಟ್ಟದಂತೆ ತಡೆಯುವುದು ಹೇಗೆ?
ರಮಣ ಮಹರ್ಷಿ : ಆತ್ಮವಿಚಾರದಿಂದ
ಪ್ರಶ್ನೆ : ಜಪದ ಮೂಲಕ ಆತ್ಮವನ್ನು ಅರಿಯಬಲ್ಲೆನೆ?
ರಮಣ ಮಹರ್ಷಿ : ಯಾವ ಜಪ? ಕೃತಕ ಜಪವನ್ನೇಕೆ ಮಾಡಬೇಕು? ನಿಮ್ಮೊಳಗೇ ನಡೆಯುತ್ತಿರುವ ಅನಂತ – ಸಹಜ ಜಪವನ್ನು ಕಂಡುಕೊಳ್ಳಿ.
ಪ್ರಶ್ನೆ : ಯಾವುದಾದರೂ ಉಪದೇಶ ನನಗೆ ಸಹಾಯಕವಾಗಬಹುದು.
ರಮಣ ಮಹರ್ಷಿ : ‘ರಾಮ…ರಾಮ…’ ಎನ್ನಿ ಎಂದು ನಾನು ಹೇಳಿದರೆ, ನಿಮ್ಮ ಹಾಗೆ ಗ್ರಂಥಗಳ ಅಭ್ಯಾಸ ಮಾಡದವರು ಅದಕ್ಕೇ ಅಂಟಿಕೊಂಡುಬಿಡುತ್ತಾರೆ. ಆದರೆ, ಬಹುಶ್ರುತರಾಗಿ, ಸಾಧನೆಯ ಮಾರ್ಗಗಳನ್ನು ಶೋಧಿಸುತ್ತಿರುವವರಿಗೆ ಹಾಗೆ ಹೇಳಿದರೆ, ಬಹುಕಾಲ ಅದನ್ನು ಮಾಡಲಾರಿರಿ. ಏಕೆಂದರೆ, “ನಾನು ಏಕೆ ಹೀಗೆ ಮಾಡಬೇಕು? ಈ ಮಂತ್ರವನ್ನು ಸತತವಾಗಿ ಜಪಿಸುತ್ತಿರುವ ನಾನು ಯಾರು? ಮುಂದುವರೆಯುವ ಮೊದಲು ಈ ನಾನು ಯಾರು ಎಂಬುದನ್ನು ತಿಳಿಯೋಣ” ಎಂದು ಚಿಂತಿಸತೊಡಗುತ್ತೀರಿ. ಕೊನೆಗೆ ಜಪವನ್ನು ನಿಲ್ಲಿಸಿ ಆತ್ನಶೋಧನೆ ಮುಂದುವರೆಸುತ್ತೀರಿ.
ಆದ್ದರಿಂದಲೇ ನಾನು ಅದನ್ನು ಮೊದಲಿಗೆ ಹೇಳಿದೆ. ‘ಆತ್ಮವಿಚಾರದಿಂದ’ ಎಂದು.

Leave a Reply