ಇದಕ್ಕಿಂತ ಅಚ್ಚರಿ ಏನಿದೆ!? : ಇಂದಿನ ಸುಭಾಷಿತ

ಇಂದಿನ ಸುಭಾಷಿತ ಮಹಾಭಾರತದಿಂದ…

ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಂ |
ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || ಮಹಾಭಾರತ, ವನಪರ್ವ ||

“ಪ್ರತಿದಿನವೂ ಅಸಂಖ್ಯ ಪ್ರಾಣಿಗಳು ಯಮಪುರಿಗೆ ತೆರಳುತ್ತಲೇ ಇರುತ್ತವೆ. ಇದನ್ನು ನೋಡಿಯೂ ಉಳಿದವರು ತಾವು ಶಾಶ್ವತವಾಗಿರಬೇಕೆಂದು ಇಚ್ಛಿಸುತ್ತಾರೆ. ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ಆಶ್ಚರ್ಯ ಯಾವುದಿದೆ?”

ಲೋಕದಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಯಾವುದು ಎಂದು ಯಕ್ಷ ಧರ್ಮರಾಯನ್ನ ಕೇಳಿದಾಗ ಅವನು ಕೊಡುವ ಉತ್ತರವಿದು.

Leave a Reply