ಬುದ್ಧ ಇದ್ದಾನೆಯೆ ? : ಒಂದು ಜೆನ್ ಪ್ರಶ್ನೋತ್ತರ

ಬುದ್ಧ ಇದ್ದಾನೆಯೇ? ಬುದ್ಧ ಅಂದರೇನು!? ಒಂದು ಜೆನ್ ಪ್ರಶ್ನೋತ್ತರ | ಮೂಲ © Boo Ahm, ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರಶ್ನೆ : ಬುದ್ಧ ಇದ್ದಾನೆಯೇ?

ಮಾಸ್ಟರ್ : ಬುದ್ಧ ಇರುವನೋ ಇಲ್ಲವೋ ಎನ್ನುವುದನ್ನ ವಿವರಿಸಿ ಹೇಳಲಿಕ್ಕಾಗುವುದಿಲ್ಲ, ಏಕೆಂದರೆ ಇಂಥದೊಂದು ಸ್ಥಿತಿ ಪರಿಪೂರ್ಣವಾಗಿ ತಾರತಮ್ಯದಿಂದ ಮತ್ತು ಅದರಿಂದ ಹೊರಡುವ ಮಾತುಗಳಿಂದ ಹೊರತಾದದ್ದು. ಇದ್ದಾನೆ ಅಥವಾ ಇಲ್ಲ ಎನ್ನುವ ಮಾತುಗಳೂ ಪಕ್ಷಪಾತದಿಂದ ಹುಟ್ಟಿದಂಥವು. ಬುದ್ಧ ಎನ್ನುವುದು, ‘ಇದ್ದಾನೆ’ ಅಥವಾ ‘ಇಲ್ಲ’ ಈ ಎರಡನ್ನೂ ಮೀರುವಂಥ ಸ್ಥಿತಿ. ಈ ಸ್ಥಿತಿಯಲ್ಲಿ ಪ್ರಶ್ನೆ ಕೇಳುವುದು ಅಥವಾ ಉತ್ತರಿಸುವುದು ಎರಡೂ ಸಾಧ್ಯವಾಗುವುದಿಲ್ಲ. ತನ್ನ ಹಿಂಬಾಲಕರು ತನ್ನ ಮಾತುಗಳಿಗೆ ಅಂಟಿಕೊಳ್ಳುತ್ತಾರೆ ಎನ್ನುವ ಕಾರಣದಿಂದಲೇ ಐತಿಹಾಸಿಕ ಬುದ್ಧ ತನ್ನ ಸಾವಿನ ಹಾಸಿಗೆಯಿಂದ ಘೋಷಿಸಿದ್ದು, “ ನಾನು ಒಂದು ಮಾತನ್ನೂ ಹೇಳಿಲ್ಲ “

ಆದ್ದರಿಂದಲೇ ಪುರಾತನ ಸೂರಿಗಳು ಹೇಳಿದರು, “ ಕೆಲವು ಜನರು ಬುದ್ಧ ಇಲ್ಲ ಎಂದು ಹೇಳುತ್ತಾರೆ ಆದರೆ ಯಾವ ಭಿನ್ನಾಭಿಪ್ರಾಯಕ್ಕೂ ಆಸ್ಪದವಿಲ್ಲದಂತೆ ಇಡೀ ಬ್ರಹ್ಮಾಂಡ ಬುದ್ಧನಿಂದ ತುಂಬಿಕೊಂಡಿದೆ. ಕೆಲವರು ಬುದ್ಧ ಇದ್ದಾನೆ ಎಂದು ಹೇಳುತ್ತಾರೆ ಆದರೆ ಎಲ್ಲ ಸಾಧಕರೂ ಬುದ್ಧನನ್ನು ಹುಡುಕಲು ಹೋದಾಗ ದಾರಿ ತಪ್ಪಿಸಿಕೊಂಡಿದ್ದಾರೆ.

ಶಿಷ್ಯ : ಬುದ್ಧ ಎಂದರೇನು ?

ಮಾಸ್ಟರ್ : ನೀನು ತಪ್ಪು ಮಾಡುತ್ತಿದ್ದೀಯ, ನಿನ್ನ ಪ್ರಶ್ನೆಗೆ ಉತ್ತರಿಸುವುದೆಂದರೆ ನಾನೂ ತಪ್ರು ಮಾಡಿದಂತೆ.

Leave a Reply