ನಸ್ರುದ್ದೀನ್ ದೃಷ್ಟಾಂತದ ಮೂಲಕ hopelessness ವಿವರಣೆ : ಓಶೋ ವ್ಯಾಖ್ಯಾನ

“ Hopeless ” ಎನ್ನುವ ಪದದ ಅರ್ಥ ತುಂಬ ಆಳವಾದದ್ದು, ತುಂಬಾ ಘನವಾದದ್ದು, ತುಂಬ ಮಹತ್ವದ್ದು. ಇದರ ಅರ್ಥ, ಯಾವಾಗ ಒಬ್ಬ ತನ್ನ hope ಗಳನ್ನು ಕಳೆದುಕೊಳ್ಳುತ್ತಾನೋ ಆಗ ಅವನು ತನ್ನ “hopelessness” ಸ್ಥಿತಿಯನ್ನೂ ಕಳೆದುಕೊಳ್ಳುತ್ತಾನೆ. Hope ಇಲ್ಲದಿರುವಾಗ, Hopelessness ಕೂಡ ಇಲ್ಲ; ಇದು hopeless ಸ್ಥಿತಿ… | ಓಶೋ ರಜನೀಶ್, ಕನ್ನಡಕ್ಕೆ : ಚಿದಂಬರ ನರೇಂದ್ರ

ಒಂದು ದಿನ ಮುಲ್ಲಾ ನಸ್ರುದ್ದೀನ್ ಮನೆಯ ಎದುರಿಗಿನ ಕಟ್ಟೆಯ ಮೇಲೆ ತುಂಬಾ ನಿರಾಶನಾಗಿ ಕುಳಿತುಕೊಂಡಿದ್ದ. ನಸ್ರುದ್ದೀನ್ ನ ಈ ಸ್ಥಿತಿಯನ್ನ ಗಮನಿಸಿದ ನೆರೆಮನೆಯವ ಪ್ರಶ್ನೆ ಮಾಡಿದ,

“ ಯಾಕೆ ನಸ್ರುದ್ದೀನ್ ಇಷ್ಟು ಬೇಸರದಲ್ಲಿ ಕುಳಿತಿದ್ದೀ? ಕಳೆದ ವಾರವಷ್ಟೇ ನಿನ್ನ ಸೋದರ ಮಾವ 50 ಸಾವಿರ ಡಾಲರ್ ದಷ್ಟು ಆಸ್ತಿ ನಿನ್ನ ಹೆಸರಿಗೆ ಬರೆದು ತೀರಿಕೊಂಡ, ನೀನೀಗ ಶ್ರೀಮಂತ. ಆದರೂ ಇಷ್ಟು ಬೇಸರದಲ್ಲಿದ್ದೀಯಲ್ಲಾ ಏನು ವಿಷಯ ? “

“ ನೀನು ಹೇಳೋದು ಸರಿ, ಕಳೆದ ವಾರ ನನ್ನ ಮಾವ ನನಗಾಗಿ 50 ಸಾವಿರ ಡಾಲರ್ ನಷ್ಟು ಆಸ್ತಿ ಬಿಟ್ಟು ಹೋದದ್ದು ನಿಜ. ಅದರ ಹಿಂದಿನ ವಾರ ನನ್ನ ದೊಡ್ಡಪ್ಪ ತೀರಿಕೊಂಡ. ಅವನು ನನ್ನ ಹೆಸರಿಗೆ ತನ್ನ 100 ಸಾವಿರ ಡಾಲರ್ ನ ಆಸ್ತಿ ಬಿಟ್ಟುಹೋಗಿದ್ದ. ಆದರೆ ಈ ವಾರ ಇನ್ನೂ ಯಾರೂ ತೀರಿಕೊಂಡಿಲ್ಲ. ಇವತ್ತು ಶನಿವಾರ, ನಾಳೆ ವಾರ ಮುಗಿದುಹೋಗುತ್ತದೆ, ಇನ್ನೂ ನನ್ನ ಕುಟುಂಬದಲ್ಲಿ ಯಾರೂ ತೀರಿಕೊಂಡಿಲ್ಲ, ತೀರಿಕೊಳ್ಳುವ ಸೂಚನೆಗಳು ಕಾಣಿಸುತ್ತಿಲ್ಲ. ಇದು ನನ್ನನ್ನು ನಿರಾಶೆಗೆ ದೂಡಿದೆ. ನಾನು ಭರವಸೆ ಕಳೆದುಕೊಂಡಿದ್ದೇನೆ. “

ನಸ್ರುದ್ದೀನ್ ತನ್ನ ಬೇಸರಕ್ಕೆ ಕಾರಣ ಹೇಳಿದ.

ನಗಬೇಡಿ. ಇದು ನಗುವ ವಿಷಯ ಅಲ್ಲ. ಮನಸ್ಸು ಕೆಲಸ ಮಾಡೋದು ಹೀಗೆ. ಹೆಚ್ಚು ಹೆಚ್ಚು ಪಡೆದಷ್ಟು ಮನಸ್ಸು ಹೆಚ್ಚು ಹೆಚ್ಚು ಭಿಕ್ಷುಕನಾಗುತ್ತ ಹೋಗುತ್ತದೆ. ಹೆಚ್ಚು ಹೆಚ್ಚು ಬಡವನಾಗುತ್ತ ಹೋಗುತ್ತದೆ. ಮಹಾ ಮಹಾ ಚಕ್ರವರ್ತಿಗಳು ಕೈ ಚಾಚಿಕೊಂಡು ಇನ್ನೂ ಬೇಕು ಇನ್ನೂ ಬೇಕು ಎನ್ನುತ್ತ ಯುದ್ಧಗಳ ಮೇಲೆ ಯುದ್ಧಗಳನ್ನು ಮಾಡಿದ್ದನ್ನ ನಾವು ನೋಡಿದ್ದೇವೆ.

“ Hopeless ” ಎನ್ನುವ ಪದದ ಅರ್ಥ ತುಂಬ ಆಳವಾದದ್ದು, ತುಂಬಾ ಘನವಾದದ್ದು, ತುಂಬ ಮಹತ್ವದ್ದು. ಇದರ ಅರ್ಥ, ಯಾವಾಗ ಒಬ್ಬ ತನ್ನ hope ಗಳನ್ನು ಕಳೆದುಕೊಳ್ಳುತ್ತಾನೋ ಆಗ ಅವನು ತನ್ನ “hopelessness” ಸ್ಥಿತಿಯನ್ನೂ ಕಳೆದುಕೊಳ್ಳುತ್ತಾನೆ. Hope ಇಲ್ಲದಿರುವಾಗ, Hopelessness ಕೂಡ ಇಲ್ಲ; ಇದು hopeless ಸ್ಥಿತಿ. Hope – less ಎಂದರೆ No hope ನ ಸ್ಥಿತಿ. ಯಾವ ಬಯಕೆಯೂ ಇಲ್ಲದ ಮನುಷ್ಯ ನಿರಾಶನಾಗುವುದು ಹೇಗೆ ಸಾಧ್ಯ? ಯಾರಿಗೆ ಯಾವ Hopes ಇಲ್ಲವೋ ಅವರಿಗೆ ನೋವು ಹೇಗೆ ಕೊಡುತ್ತೀರಿ?

ಲಾವೋತ್ಸೇ ಹೇಳುತ್ತಾನೆ, “ ನನ್ನನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ನನ್ನ ಮನಸ್ಸಿನಲ್ಲಿ ಗೆಲ್ಲುವ ಬಯಕೆಯೇ ಇಲ್ಲ.” ನೀವು ಲಾವೋತ್ಸೇಯ ಮೇಲೆ ಆಕ್ರಮಣ ಮಾಡಿದ್ದಾದರೆ, ಅವನು ನೆಲದ ಮೇಲೆ ನಿರಾಯುಧನಾಗಿ ಮಲಗಿಕೊಂಡುಬಿಡುತ್ತಾನೆ, “ ಬಾ ತಮ್ಮ, ನನ್ನನ್ನು ಗೆಲ್ಲು, ನಿನ್ನ ವಿಜಯವನ್ನ ಘೋಷಿಸು “ ಎಂದು ಆಹ್ವಾನ ನೀಡುತ್ತಾನೆ. ಅವನಿಗೆ ಗೆಲ್ಲುವ ಬಯಕೆಯೇ ಇಲ್ಲ ಎಂದ ಮೇಲೆ ಅವನನ್ನು ಹೇಗೆ ಸೋಲಿಸುತ್ತಿರಿ? ಯಾರು ಗೆಲ್ಲುವ ಹುಕಿ ಹೊಂದಿದ್ದಾರೋ ಅವರ ಜೊತೆ ಮಾತ್ರ ಸ್ಪರ್ಧೆ, ಯುದ್ಧ ಸಾಧ್ಯ. ಅವರನ್ನು ಮಾತ್ರ ನೀವು ಗೆಲ್ಲುವ ಅವಕಾಶಗಳುಂಟು. ಯಾರಿಗೆ hope ಇದೆಯೋ ಅವನು ಮಾತ್ರ hopelessness ಸ್ಥಿತಿಯನ್ನ ತಲುಪಬಲ್ಲ. ಇದು ಬಹಳ ಸಂಕಟದ ಸ್ಥಿತಿ.

Hopeless ಪದದ ಮೂಲ ಅರ್ಥ ತುಂಬ ಮೌಲಿಕವಾದದ್ದು. Hope ಮತ್ತು hopelessness ಗಳು ಇಲ್ಲದ ಖಾಲೀ ಸ್ಥಿತಿಯೇ hopeless ಸ್ಥಿತಿ. ಸಕಲ ಸಂಕಟಗಳಿಂದ ಹೊರತಾದ ದಿವ್ಯ ಸಮಾಧಾನದ ಸ್ಥಿತಿ.

Leave a Reply