ಬುದ್ಧನೊಳಗೂ ‘ಸ್ವ’ (self) ಇಲ್ಲ, ನಾಯಿಯೊಳಗೂ ಸೆಲ್ಫ್ ಇಲ್ಲ. ಈ ಇಬ್ಬರೊಳಗಿರುವ ಇಲ್ಲದಿರುವಿಕೆಯ ರೂಪ ಬೇರೆ, ಅವರ ಕನಸುಗಳ ವಿಸ್ತಾರ ಬೇರೆ. ಆದರೆ ಇಬ್ಬರ ಒಳಗೂ ನೆಲೆಯಾಗಿರುವ ಮೌನ ಒಂದೇ. ಇದು ಶುದ್ಧ ಮೌನ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಸನ್ಯಾಸಿ, ಝೆನ್ ಮಾಸ್ಟರ್ ಜೋಶೋ ನ ಪ್ರಶ್ನೆ ಮಾಡಿದ, “ ನಾಯಿಯೂ ಬುದ್ಧನ ಪ್ರಕೃತಿಯನ್ನು ಹೊಂದಿದೆಯಾ ?”
ಸನ್ಯಾಸಿಯ ಈ ಪ್ರಶ್ನೆಗೆ ಮಾಸ್ಟರ್ ಕೊಟ್ಟ ಉತ್ತರ ಅತ್ಯಂತ ವಿಚಿತ್ರವಾದದ್ದು, ಒಗಟಿನಂಥದು. ಶತಮಾನಗಳಿಂದ ಸಾಧಕರು ಈ ಉತ್ತರದ ಬಗ್ಗೆ ಆಲೋಚಿಸುತ್ತಿದ್ದಾರೆ ( ಇದು ಆಲೋಚನೆಯ ಉತ್ತರ ಅಲ್ಲ ಮನನ ಮಾಡಿಕೊಳ್ಳಬೇಕಾದ ಉತ್ತರ ಎಂದೂ ವಾದಿಸುತ್ತಾರೆ). ಈ ಉತ್ತರ ಝೆನ್ ವಿದ್ಯಾರ್ಥಿಗಳ ದೀಕ್ಷಾ ಪ್ರಶ್ನೆಯಾಗಿದೆ. ವರ್ಷಗಟ್ಟಲೇ ಈ ಉತ್ತರವನ್ನು ಅಭ್ಯಾಸ ಮಾಡಿದ ಮೇಲಷ್ಟೇ ಅವರನ್ನು ಝೆನ್ ವಿದ್ಯಾರ್ಥಿ ಎಂದು ಮಾನ್ಯ ಮಾಡಲಾಗುತ್ತಿತ್ತು.
ಸನ್ಯಾಸಿಯ ಪ್ರಶ್ನೆಗೆ ಮಾಸ್ಟರ್ ಜೋಶೋ “Mu” ಎಂದು ಎಂದು ಉತ್ತರಿಸಿದ. Mu ಎಂದರೆ ಇಲ್ಲದಿರುವಿಕೆ (nothingness). ಇದರ ಇನ್ನೊಂದು ಅರ್ಥ NO ಕೂಡ. Mu ಎಂದರೆ nothing ಹಾಗು No ಕೂಡ. ಹಾಗಾದರೆ ಮಾಸ್ಟರ್ ಜೋಶೋ ನ ಉತ್ತರದ ಅರ್ಥ ಏನು ? ನಾಯಿ, ಬುದ್ಧನ ಪ್ರಕೃತಿಯನ್ನು ಹೊಂದಿಲ್ಲ ಎಂದು ಹೇಳುತ್ತಿದ್ದಾನೆಯೇ ಮಾಸ್ಟರ್ ? ಇಂಥ ಅರ್ಥವನ್ನ ಒಬ್ಬ ಝೆನ್ ಮಾಸ್ಟರ್ ನಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ. ಹಾಗಾದರೆ ಜೋಶೋ ನ ಪ್ರಕಾರ Mu ಎಂದರೇನು ? ಜೋಶೋ No ಎಂದು ಹೇಳುತ್ತಿಲ್ಲ, nothing ಎಂದು ಉತ್ತರಿಸುತ್ತಿದ್ದಾನೆ. ಅವನ ಮಾತಿನ ಅರ್ಥ ಬುದ್ಧನಲ್ಲಿ ಇರುವುದೂ nothing ಹಾಗೆಯೇ ನಾಯಿಯಲ್ಲಿ ಇರುವುದೂ nothing. ಹೀಗೆ ಮಾಸ್ಟರ್, ಬುದ್ಧ ಮತ್ತು ನಾಯಿಯಲ್ಲಿ ಇರುವ ಪ್ರಕೃತಿ ಒಂದೇ ಎಂದು ಹೇಳುತ್ತಿದ್ದಾನೆ. ಬುದ್ಧ ಮತ್ತು ನಾಯಿ ಇಬ್ಬರ ಪ್ರಕೃತಿಯೂ nothingness. ಹಾಗಾಗಿ ಜೋಶೋ No (nothing) ಎಂದು ಉತ್ತರಿಸುತ್ತ ಅದಕ್ಕೆ Yes ಎನ್ನುವ ಅರ್ಥ ಹೊರಡಿಸುತ್ತಿದ್ದಾನೆ.
ಮಾಸ್ಟರ್ ಜೋಶೋ, “ ಹೌದು, ನಾಯಿ ಬುದ್ಧನ ಪ್ರಕೃತಿಯನ್ನು ಹೊಂದಿದೆ” ಎಂದು ಹೇಳುತ್ತಿದ್ದಾನೆ. ಆದರೆ ಬುದ್ಧನ ಒಳಗೆ ಏನೂ ಇಲ್ಲ ಹಾಗು ನಾಯಿಯ ಒಳಗೂ ಏನೂ ಇಲ್ಲ. ಈ ಇಲ್ಲದಿರುವಿಕೆ (nothingness) ಇಬ್ಬರಲ್ಲಿಯೂ ಇದೆ (ಝೆನ್ ಪ್ರಕಾರ ಇಲ್ಲದಿರುವಿಕೆಯನ್ನ ಇದೆ ಎನ್ನುವ ಹಾಗಿಲ್ಲ). ಬುದ್ಧನೊಳಗೂ ‘ಸ್ವ’ (self) ಇಲ್ಲ, ನಾಯಿಯೊಳಗೂ ಸೆಲ್ಫ್ ಇಲ್ಲ. ಈ ಇಬ್ಬರೊಳಗಿರುವ ಇಲ್ಲದಿರುವಿಕೆಯ ರೂಪ ಬೇರೆ, ಅವರ ಕನಸುಗಳ ವಿಸ್ತಾರ ಬೇರೆ. ಆದರೆ ಇಬ್ಬರ ಒಳಗೂ ನೆಲೆಯಾಗಿರುವ ಮೌನ ಒಂದೇ. ಇದು ಶುದ್ಧ ಮೌನ.
ಈ ಶುದ್ಧ ಮೌನವೇ ಸಮಾಧಿ. ಯಾವಾಗ ನಿಮಗೆ ಈ ಸಮಾಧಿಯ ಮಿಂಚು ನೋಟಗಳು ಕಾಣಲು ಶುರುವಾಗುತ್ತದೆಯೋ ಆಗ ನಿಮ್ಮ ಬದುಕು ಬದಲಾಗಾಲು ಮೊದಲುಮಾಡುತ್ತದೆ. ಆಗ ನೀವು ಮೊದಲಬಾರಿಗೆ ಕವಿತೆಯ ಹಾಗೆ ಬದುಕಲು ಶುರು ಮಾಡುತ್ತೀರಿ. ಸಾವು ನಿಮ್ಮೊಳಗೆ ಯಾವ ಭಯವನ್ನೂ ಹುಟ್ಟಿಸುವುದಿಲ್ಲ. ಆಗ ಯಾವುದೂ ನಿಮ್ಮನ್ನು ಗೊಂದಲಕ್ಕೆ ದೂಡುವುದಿಲ್ಲ, ಯಾವುದೂ ನಿಮ್ಮನ್ನು ತಬ್ಬಿಬ್ಬುಗೊಳಿಸುವುದಿಲ್ಲ. ಒಂದು ಬೆರಗು ಮಾತ್ರ ತುಂಬಿಕೊಂಡಿರುತ್ತದೆ ನಿಮ್ಮನ್ನು ಸದಾ.
ಮಾಸ್ಟರ್ ಜೋಶೋ ನ Mu ಎನ್ನುವ ಉತ್ತರದ ಅರ್ಥ Yes. ಹಾಗಾದರೆ ಅವನು Yes ಎಂದೇ ಉತ್ತರಿಸಬಹುದಿತ್ತಲ್ಲ ? ಅವನು ಹಾಗೆ ಉತ್ತರಿಸದಿರುವುದಕ್ಕೆ ಕಾರಣ, Yes ಎನ್ನುವ ಉತ್ತರ ಹಲವಾರು ತಪ್ಪುತಿಳುವಳಿಕೆಗಳಿಗೆ ಕಾರಣವಾಗುತ್ತದೆ ಎನ್ನುವುದು. ಆಗ ಜನ, ಬುದ್ಧನಲ್ಲಿರುವ self ನಾಯಿಯಲ್ಲಿಯೂ ಇದೆ ಎಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಜೋಶೋ Yes ಎಂದು ಉತ್ತರಿಸಲಿಲ್ಲ. ಜೋಶೋ ಹೇಳಬೇಕಾಗಿದ್ದು, ಬುದ್ದನಲ್ಲಿ ಇರುವ ಇಲ್ಲದಿರುವಿಕೆ ನಾಯಿಯಲ್ಲೂ ಇದೆ ಎನ್ನುವುದು, ಹಾಗಾಗಿಯೇ ಅವನು ಉತ್ತರಿಸಿದ್ದು Mu (nothing) ಎಂದು.
ಬೌದ್ಧರಿಗೆ ವಿಶೇಷವಾಗಿ ಝೆನ್ ಬೌದ್ಧರಿಗೆ ಯಾವುದೂ ಪವಿತ್ರವಲ್ಲ ಯಾವುದೂ ಅಪವಿತ್ರವೂ.