Self Respect V/s Ego : ಓಶೋ ವ್ಯಾಖ್ಯಾನ

ನಿಮ್ಮ ಯಾವ ಪ್ರಯತ್ನವೂ ಇಲ್ಲದೇ, Ego ಸ್ವತಃ ಸೋಲೊಪ್ಪಿಕೊಳ್ಳದೇ ಹೋದರೆ, ಅದು ನಿಮ್ಮನ್ನ ಬಿಟ್ಟು ಹೋಗುವ ಸಾಧ್ಯತೆಯೇ ಇಲ್ಲ. ನೀವು ego ಬಿಟ್ಟು ಬಿಡಲು ಪ್ರಯತ್ನ ಮಾಡುವಿರಾದರೆ, and that is what surrender is… | ಓಶೋ; ಕನ್ನಡಕ್ಕೆ : ಚಿದಂಬರ ನರೇಂದ್ರ

ನೀವು ನೈಜ, ಸಮಗ್ರ ವ್ಯಕ್ತಿತ್ವದ , ಅಪಾರ ಸೆಲ್ಫ್ ರೆಸ್ಪೆಕ್ಟ್ ನ ವ್ಯಕ್ತಿಗಳಾಗಬೇಕು ಎನ್ನುವುದು ನನ್ನ ಆಶಯ.

ಸೆಲ್ಫ್ ರೆಸ್ಪೆಕ್ಟ್ ಎನ್ನುವ ಪದ ನಿಮ್ಮಲ್ಲಿ ಗೊಂದಲ ಉಂಟು ಮಾಡಬಹುದು, ಏಕೆಂದರೆ ಬಹಳಷ್ಟು ಜನ ಸೆಲ್ಫ್ ರೆಸ್ಪೆಕ್ಟ್ ನ ಅಹಂಕಾರ (ego) ಕ್ಕೆ ಸಮೀಕರಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ನೀವು ಸೆಲ್ಫ್ ರೆಸ್ಪೆಕ್ಟ್ ನಲ್ಲಿರುವ (ಸೆಲ್ಫ್ ಮತ್ತು ರೆಸ್ಪೆಕ್ಟ್ ) ಎರಡೂ ಪದಗಳನ್ನ, ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿದೆ. ಈ ಎರಡೂ ಪದಗಳು ಬಹಳ ಮಹತ್ವದ ಪದಗಳು.

ಸೆಲ್ಫ್, ನಿಮ್ಮ ಜೊತೆಯೇ ಹುಟ್ಟಿರುವಂಥದು.

ಆದರೆ Ego, ನೀವು ನಿಮ್ಮ ಬದುಕಿನುದ್ದಕ್ಕೂ ಸಂಗ್ರಹಿಸಿರುವಂಥದು ; Ego ಒಂದು ರೀತಿಯಲ್ಲಿ ನಿಮ್ಮ ಸಾಧನೆ, ನಿಮ್ಮ ಆಸ್ತಿ.

ಸೆಲ್ಫ್, ಅಸ್ತಿತ್ವ ನಿಮಗೆ ಕೊಟ್ಟ ಉಡುಗೊರೆ. ಈ ಉಡುಗೊರೆಯನ್ನು ಪಡೆಯಲು ನೀವು ಯಾವ ಪ್ರಯತ್ನವನ್ನೂ ಮಾಡಿಲ್ಲ, ಇದು ನಿಮ್ಮ ಸಾಧನೆಯ ಫಲ ಅಲ್ಲ ; ಆದ್ದರಿಂದ ಯಾರೂ ಇದನ್ನ ನಿಮ್ಮಿಂದ ಕಸಿದುಕೊಳ್ಳುವಂತಿಲ್ಲ. ಏಕೆಂದರೆ ಇದು ನಿಮ್ಮ ಪ್ರಕೃತಿಯ ಭಾಗ, ನಿಮ್ಮ ಇರುವಿಕೆಯ ಕಾರಣ.

ಆದರೆ Ego, ನ್ನ ನಿಮ್ಮ ಬದುಕಿನ ಹಾದಿಯಲ್ಲಿ ನೀವು ಸಂಗ್ರಹಿಸುತ್ತ ಹೋಗುತ್ತೀರಿ; ಶಿಕ್ಷಣದ ಮೂಲಕ, ನಾಗರೀಕತೆಯ ಮೂಲಕ, ಸಂಸ್ಕೃತಿಯ ಮೂಲಕ, ಶಾಲೆ ಕಾಲೇಜು ಯೂನಿವರ್ಸಿಟಿಗಳ ಮೂಲಕ, ಹಣದ ಮೂಲಕ, ರೂಪ ಯೌವನದ ಮೂಲಕ ….. ನೀವು ego ನ್ನ ಸಂಗ್ರಹಿಸುತ್ತ ಹೋಗುತ್ತೀರಿ.

ಇದು ನಿಮ್ಮ ಪ್ರಯತ್ನದ ಮೂಲಕ ಸಾಧ್ಯವಾಗಿರುವುದು, ಮತ್ತು ಈ ದಿಕ್ಕಿನಲ್ಲಿ ನೀವು ಎಷ್ಟು ಸಾಧನೆ ಮಾಡಿದ್ದೀರೆಂದರೆ, ಪೂರ್ಣವಾಗಿ ನಿಮ್ಮ ನೈಜ ಸೆಲ್ಫ ನ್ನ ಮರೆತುಬಿಟ್ಟಿದ್ದೀರಿ ನೀವು.

ಬದುಕಲು ನಿಮ್ಮ ನೈಜ ಸೆಲ್ಫ್ ಬಗ್ಗೆ ಗೊತ್ತಿದ್ದರೆ ಸಾಕು; ನೀವು ಶರಣಾಗದೇ ಹೋದರೆ ego ಪೂರ್ತಿಯಾಗಿ ಸೋತು ಹೋಗುತ್ತದೆ.

ನಿಮ್ಮ ಯಾವ ಪ್ರಯತ್ನವೂ ಇಲ್ಲದೇ, Ego ಸ್ವತಃ ಸೋಲೊಪ್ಪಿಕೊಳ್ಳದೇ ಹೋದರೆ, ಅದು ನಿಮ್ಮನ್ನ ಬಿಟ್ಟು ಹೋಗುವ ಸಾಧ್ಯತೆಯೇ ಇಲ್ಲ. ನೀವು ego ಬಿಟ್ಟು ಬಿಡಲು ಪ್ರಯತ್ನ ಮಾಡುವಿರಾದರೆ, and that is what surrender is…… ಎಲ್ಲ ಧರ್ಮಗಳೂ ಶರಣಾಗತಿಯನ್ನ ಬೋಧಿಸುತ್ತವೆ, ಅವರ್ಯಾರಿಗೂ ಸೈಕಾಲಜಿಯ ಬೆಸಿಕ್ಸ್ ಕೂಡ ಗೊತ್ತಿಲ್ಲ. Ego ನ್ನ ಹಾಗೆಲ್ಲ ಸರೆಂಡರ್ ಮಾಡುವುದು ಸಾಧ್ಯವಿಲ್ಲ, ಅದನ್ನ ಕೂಲಂಕಷವಾಗಿ ಗಮನಿಸಬೇಕು, ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು.

ಈಗ respect ಎನ್ನುವ ಪದವನ್ನ ಗಮನಿಸೋಣ. Respect ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿಯೇ ಅತ್ಯಂತ ಸುಂದರವಾದದ್ದು. ಈ ಪದದ ಅರ್ಥ ಅದು ಹೇಳಲು ಬಂದಿರುವ ಅರ್ಥವಲ್ಲ, respect ಎಂದರೆ ಕೇವಲ ಗೌರವ ಅಲ್ಲ. Respect ಎಂದರೆ ಸರಳವಾಗಿ re-spect, ಇನ್ನೊಮ್ಮೆ ಗಮನಿಸು ಎಂದು. Respect ಎಂದರೆ, ಇನ್ನೊಮ್ಮೆ ನೋಡು, ಹಿಂತಿರುಗಿ ನೋಡು, ಆಳವಾಗಿ ಗಮನಿಸು ಎಂದರ್ಥ, ಇಲ್ಲಿ ಗೌರವದ ಪ್ರಶ್ನೆಯೇ ಇಲ್ಲ. re ಎಂದರೆ ಮತ್ತೊಮ್ಮೆ, spect ಎಂದರೆ ಗಮನಿಸು.

ನೀವು ಈ ಸಮಾಜವನ್ನ, ಸಂಸ್ಕೃತಿಯನ್ನ, ಈ ನಾಗರೀಕತೆಯನ್ನ ಪ್ರವೇಶಿಸಿ ಅದರ ಭಾಗವಾಗುವ ಮೊದಲೂ ನಿಮಗೆ ಗೊತ್ತು. ಜನ ತಮ್ಮ ಬಾಲ್ಯವನ್ನು ಸಂಭ್ರಮಿಸಿ ಮಾತನಾಡುವುದು ಕಾಕತಾಳೀಯವೆನಲ್ಲ. ಬಹುತೇಕ ಬಾಲ್ಯದ ಬಗ್ಗೆ ನಿಮಗೆ ಪೂರ್ತಿಯಾಗಿ ಯಾವುದೂ ನೆನಪಿಲ್ಲ, ನಿಮಗೆ ನೆನಪಿರುವುದೆಲ್ಲ ಅಸ್ಪಷ್ಟ ಪರಿಮಳ, ಒಂದು ನೆರಳಿನ ಚಿತ್ರ.

ನೀವು ನಿಮ್ಮ ಬದುಕನ್ನ re-spect ಮಾಡಿದಾಗ, ಮತ್ತೆ ಹಿಂತಿರುಗಿ ಗಮನಿಸಿದಾಗ, ನಿಮ್ಮ ಅಸ್ತಿತ್ವವನ್ನು ಆಳವಾಗಿ ಪ್ರವೇಶ ಮಾಡಿದಾಗ, ನಿಮಗೆ ಆ ಜಾಗ ಗೊತ್ತಾಗುತ್ತದೆ, ಎಲ್ಲಿ ನೀವು ನಿಮ್ಮತನವನ್ನ ಕಳೆದುಕೊಳ್ಳಲು ಶುರು ಮಾಡಿದ್ದು ಮತ್ತು ego ನ್ನ ಕೂಡಿಡಲು ಆರಂಭಿಸಿದ್ದು ಎನ್ನುವುದು. ಆ ಕ್ಷಣವೇ ನಿಮ್ಮ ಬೆಳಕಿನ ಕ್ಷಣ, ಏಕೆಂದರೆ ಒಮ್ಮೆ ನೀವು ego ಎಂದರೆ ಏನು ಎನ್ನುವುದನ್ನ ನೋಡಿಬಿಟ್ಟರೆ, ego ದ ಆಟ ಮುಗಿದಂತೆಯೇ.

ಆದ್ದರಿಂದಲೇ ego ನ ಡ್ರಾಪ್ ಮಾಡಿ ಎಂದು ಯಾವಾಗಲೂ ನಾನು ಹೇಳುವುದಿಲ್ಲ, ಹಾಗೇನಾದರೂ ನಾನು ಹೇಳಿದ್ದಾರೆ ನಿಮ್ಮೊಳಗಿರುವ ego ದ ವಾಸ್ತವವನ್ನ ನಾನು ಒಪ್ಪಿಕೊಂಡಂತೆ, ಮತ್ತು ನೀವು ಅದನ್ನ ನೀವು ಹೇಗೆ ಡ್ರಾಪ್ ಮಾಡುತ್ತೀರಾ? Ego ನಿಮ್ಮ ಸರ್ವಸ್ವವನ್ನ ತುಂಬಿಕೊಂಡಿದೆ.

ಈ ಕ್ಷಣ, ನೀವು ಅದೇ ಆಗಿದ್ದೀರಿ. ಬಹಳ ಹಿಂದೆಯೇ ನಿಮ್ಮ ಅಸ್ತಿತ್ವದ ತಳಹದಿಯಾದ ಸೆಲ್ಫ್ ನ ನೀವು ಕಳೆದುಕೊಂಡುಬಿಟ್ಟಿದ್ದೀರಿ, ನಿಮ್ಮ ಹಾಗು ನಿಮ್ಮ ಸೆಲ್ಫ್ ನ ನಡುವೆ ಈಗ ಅಪಾರ ಅಂತರವಿದೆ.

ಈಗ ನೀವು ಬದುಕುತ್ತಿರುವುದು ನಿಮ್ಮ ಸೆಲ್ಫ್ ನ ಪರಿಧಿಯ ಮೇಲೆ. ಆ ಪರಿಧಿ ತಾನೇ ನಿಮ್ಮ ಸೆಲ್ಫ್ ಎಂದು ನಾಟಕ ಮಾಡುತ್ತಿದೆ. ಆ ನಾಟಕವನ್ನೇ ನಾನು ego ಎಂದು ಹೇಳುವುದು. ಪರಿಸ್ಥಿತಿ ಹೀಗಿರುವಾಗ, ನಾನು ego ನ “ ಡ್ರಾಪ್” ಮಾಡಿ ಎಂದು ಸಲಹೆ ನೀಡುವುದು, ಸರೆಂಡರ್ ಮಾಡಿ ಎಂದು ಹೇಳುವುದು, ವಿನೀತರಾಗಿರಿ ಎಂದು ಹೇಳುವುದು ಶುದ್ಧ ಮೂರ್ಖತನ.

Source ~ Osho / From Ignorance to Innocence | Surrender: The ego upside down

Leave a Reply