ತೀರ್ಪು ಕೊಡಲು ಅವಸರ ಬೇಡ… : Tea time story

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಬ್ಬಳು ಮುದ್ದು ಪುಟ್ಟ ಹುಡುಗಿ ತನ್ನ ಕೈಗಳಲ್ಲಿ ಎರಡು ಸೇಬು ಹಣ್ಣುಗಳನ್ನು ಹಿಡಿದುಕೊಂಡಿದ್ದಳು. ಅಲ್ಲಿಗೆ ಬಂದ ಅವಳ ಅಮ್ಮ, “ಪುಟ್ಟಿ ನಿನ್ನ ಹತ್ತಿರ ಇರುವ ಎರಡು ಸೇಬುಹಣ್ಣುಗಳಲ್ಲಿ ಒಂದನ್ನ ನಿನ್ನ ಪ್ರೀತಿಯ ಅಮ್ಮನಿಗೆ ಕೊಡುವೆಯಾ?” ಎಂದು ಮುಗುಳ್ನಗುತ್ತ ಪ್ರಶ್ನೆ ಮಾಡಿದಳು.

ಕೆಲವು ಕ್ಷಣ ಅಮ್ಮನನ್ನು ತಲೆಯೆತ್ತಿ ನೋಡಿದ ಹುಡುಗಿ ನಂತರ ಒಂದಾದ ಮೇಲೊಂದರಂತೆ ಎರಡೂ ಹಣ್ಣುಗಳನ್ನು ಕಚ್ಚಿ ಎಂಜಲು ಮಾಡಿದಳು.

ಇದನ್ನ ನೋಡುತ್ತಿದ್ದಂತೆಯೇ ಅಮ್ಮನ ಮುಖದಲ್ಲಿದ್ದ ಮುಗುಳ್ನಗು ಬತ್ತಿ ಹೋಯಿತು ಆದರೂ ಅಮ್ಮ ಕಷ್ಟಪಟ್ಟು ತನ್ನ ನಿರಾಸೆಯನ್ನ ಮುಚ್ಚಿಟ್ಟುಕೊಂಡಳು.

ಆಗಲೇ ಆ ಪುಟ್ಟ ಹುಡಗಿ ಅಮ್ಮನ ಕೈಗೆ ಒಂದು ಹಣ್ಣು ಕೊಟ್ಟಳು, “ ಅಮ್ಮಾ ಈ ಹಣ್ಣು ತೊಗೋ ಇದು ಇನ್ನೊಂದು ಹಣ್ಣಿಗಿಂತ ರುಚಿಯಾಗಿದೆ.”

ನೀವು ಯಾರೇ ಇರಬಹುದು, ನಿಮ್ಮ ತಿಳುವಳಿಕೆ ಎಷ್ಟೇ ಇರಬಹುದು, ನಿಮ್ಮ ಅನುಭವ ಏನೇ ಇರಬಹುದು. ಸಾಧ್ಯವಾದಷ್ಟು ನಿಮ್ಮ ಜಡ್ಜಮೆಂಟ್ ನ ಸ್ವಲ್ಪ ಮುಂದೆ ಹಾಕಿ. ಆ ಇನ್ನೊಬ್ಬರಿಗೆ ವಿವರಣೆ ನೀಡುವ ಅವಕಾಶ ಮಾಡಿಕೊಡಿ. ನೀವು ನೋಡಿದ್ದು ಯಾವಾಗಲೂ ನಿಜ ಇರುವುದಿಲ್ಲ, ಇನ್ನೊಬ್ಬರ ಕುರಿತಾಗಿ ಹಟಾತ್ ನೇ ನಿರ್ಣಯ ತೆಗೆದುಕೊಳ್ಳಬೇಡಿ.


(Source: Anand Zen page)

Leave a Reply