“ನಿಜವಾದ ಬಡತನ ದುಡ್ಡು ಇಲ್ಲದೆ ಇರುವುದರಿಂದ ಬರುವುದಿಲ್ಲ, ಯಾರಿಗೆ ಜೀವನದಲ್ಲಿ ತೃಪ್ತಿ ಇಲ್ಲವೋ, ಯಾರ
ಮನಸ್ಸಿಗೆ ನೆಮ್ಮದಿ ಇಲ್ಲವೋ ಅವರು ನಿಜವಾದ ಬಡವರು” ಅನ್ನುವುದನ್ನು ಮನದಟ್ಟು ಮಾಡಿಸಲು ಸ್ವಾಮಿ ರಾಮತೀರ್ಥರು ಹೇಳಿದ ದೃಷ್ಟಾಂತ ಕತೆ ಇದು. । ಸಂಗ್ರಹ ಮತ್ತು ಅನುವಾದ: ಪ್ರಣವ ಚೈತನ್ಯ
ಒಮ್ಮೆ ಒಬ್ಬ ಸನ್ಯಾಸಿಗೆ ತನ್ನ ಬಳಿ ಇದ್ದ ತಾಮ್ರದ ನಾಣ್ಯಗಳನ್ನು ಯಾರಿಗಾದರೂ ಕೊಡಬೇಕೆನಿಸಿತು. ಈ ಊರಿನಲ್ಲಿ ಯಾರಾದರೂ ಅತ್ಯಂತ ಬಡವಿದ್ದರೆ ಬನ್ನಿ, ನಾಣ್ಯಗಳನ್ನು ಕೊಡುತ್ತೇನೆ ಎಂದು ಅವನು ಘೋಷಿಸಿದ.
ಹಲವು ಬಡ ಮನುಷ್ಯರು ಆ ತಾಮ್ರದ ನಾಣ್ಯಗಳನ್ನು ಪಡೆಯಲು ಸನ್ಯಾಸಿಯ ಬಳಿಗೆ ಬಂದರು. ಆದರೆ ಆ ಸನ್ಯಾಸಿಯು ಯಾರಿಗೂ ಆ
ನಾಣ್ಯಗಳನ್ನು ಕೊಡಲಿಲ್ಲ.
ಕಡೆಗೆ, ಆ ಸನ್ಯಾಸಿ ಇದ್ದ ಬೀದಿಯಲ್ಲಿ ಬಳಿ ಆನೆಯ ಮೇಲೆ ಸವಾರಿ ಮಾಡುತ್ತ ಆ ರಾಜ್ಯದ ರಾಜ ಬಂದನು. ಅದನ್ನು ನೋಡಿದ
ಸನ್ಯಾಸಿಯು ರಾಜನ ಆನೆಯ ಮುಂದೆ ಆ ತಾಮ್ರದ ನಾಣ್ಯಗಳನ್ನು ಎಸೆದನು.
ಇದರಿಂದ ಅಚ್ಚರಿಗೊಂಡ ರಾಜನು ಸನ್ಯಾಸಿಯನ್ನು ಪ್ರಶ್ನಿಸಿದನು. ಆಗ ಆ ಸನ್ಯಾಸಿಯು “ಈ ತಾಮ್ರದ ನಾಣ್ಯಗಳು ಅತ್ಯಂತ ಬಡ ಮನುಷ್ಯನಾದ ರಾಜನಿಗೆ ಸೇರಬೇಕು” ಎಂದು ಹೇಳಿದನು.
“ನಾನು ರಾಜ, ನಾನು ಹೇಗೆ ಅತ್ಯಂತ ಬಡ ಮನುಷ್ಯ?” ಎಂದು ರಾಜ ಪ್ರಶ್ನಿಸಿದಾಗ ಸನ್ಯಾಸಿಯು, “ ಎಷ್ಟು ರಾಜ್ಯಗಳನ್ನು ವಶ ಪಡಿಸಿಕೊಂಡರೂ ನಿನ್ನ ದಾಹ ತೀರುವುದಿಲ್ಲ, ನಿನಗೆ ಜೀವನದಲ್ಲಿ ತೃಪ್ತಿಯಾಗಲೀ ನೆಮ್ಮದಿಯಾಗಲೀ ಇಲ್ಲ. ಆದ್ದರಿಂದ ರಾಜನೇ, ನೀನೇ ಈ ರಾಜ್ಯದ ಅತ್ಯಂತ ಬಡ ಮನುಷ್ಯ” ಎಂದು ಹೇಳಿದನು!
ನೀತಿ: ನಿಜವಾದ ಬಡತನ ದುಡ್ಡು ಇಲ್ಲದೆ ಇರುವುದರಿಂದ ಬರುವುದಿಲ್ಲ, ಯಾರಿಗೆ ಜೀವನದಲ್ಲಿ ತೃಪ್ತಿ ಇಲ್ಲವೋ, ಯಾರ
ಮನಸ್ಸಿಗೆ ನೆಮ್ಮದಿ ಇಲ್ಲವೋ ಅವರು ನಿಜವಾದ ಬಡವರು”

