ನೆನಪಿರಲಿ, ಲೋಲಕ ಬಲಕ್ಕೆ ಚಲಿಸುತ್ತಿರುವ ಹೊತ್ತಿನಲ್ಲಿಯೇ, ಎಡಕ್ಕೆ ಚಲಿಸಲು ಬೇಕಾಗುವ ಶಕ್ತಿಯನ್ನು ಒಟ್ಟುಗೊಡಿಸಿಕೊಳ್ಳುತ್ತಿದೆ ಮತ್ತು vice versa ಕೂಡ ನಿಜ. ಅದು ಎಡಕ್ಕೆ ಚಲಿಸುತ್ತಿರುವಂತೆ ಕಾಣಿಸುತ್ತದೆಯೇನೋ ನಿಜ, ಆದರೆ ಬಲಕ್ಕೆ ಚಲಿಸಲು ತನ್ನೆಲ್ಲ ಶಕ್ತಿಯನ್ನು ಒಟ್ಟು ಮಾಡಿಕೊಳ್ಳುತ್ತಿದೆ, it’s moving towards left but it’s gaining momentum, energy to move towards right. ~ ಓಶೋ ರಜನೀಶ್ । ಸಂಗ್ರಹ – ನಿರೂಪಣೆ ಚಿದಂಬರ ನರೇಂದ್ರ
ಯಾರು ಅವರು
ನನ್ನ ಆಟ ಕೆಡಿಸುತ್ತಿರುವವರು?
ನಾನು ಬಲಕ್ಕೆ ಬಿಟ್ಟ ಬಾಣ
ಎಡಕ್ಕೆ ಹೇಗೆ ಬಂತು?
ಜಿಂಕೆಯ ಬೆನ್ನುಹತ್ತಿದವನ
ಹಂದಿ ಯಾಕೆ ಅಟ್ಟಿಸಿಕೊಂಡು ಬಂತು?
ಅಂಗಡಿಗೆ ಹೊರಟವನ ಕಾಲುಗಳನ್ನ
ಜೈಲಿನತ್ತ ಹೊರಳಿಸಿದವರು ಯಾರು?
ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ
ನಾನೇ ಜಾರಿ ಬಿದ್ದದ್ದು ಹೇಗೆ?
ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ.
ಅದಕ್ಕಾಗಿಯೇ, ನಮಗೆ ಇರಬೇಕು
ನಮ್ಮ ಬೇಕುಗಳ ಬಗ್ಗೆ ಒಂದು
ಪುಟ್ಟ ಸಂಶಯ.
- ರೂಮಿ
ಪಾಶ್ಚಿಮಾತ್ಯರು ಸೆಕ್ಸ್ ನ ಬಹುತೇಕ ಗೀಳು ಮಾಡಿಕೊಂಡಿದ್ದಾರೆ. ಜನ ಸೆಕ್ಸ್ ನ ಹಲವಾರು ಟೆಕ್ನಿಕ್ ಗಳಲ್ಲಿ ಮತ್ತು ಪೋರ್ನ್ ಇಮೇಜ್ ಗಳಲ್ಲಿ ಮುಳುಗಿ ಹೋಗಿದ್ದಾರೆ. ಯಾಕೆ ಜನ ಇಲ್ಲಿಯವರೆಗೆ ಕೇವಲ ಸೆಕ್ಸ್ ಗೆ ಗಂಟು ಬಿದ್ದಿದ್ದಾರೆ? ಯಾಕೆ ಅವರು ಸೆಕ್ಸ್ ನ, ಪ್ರೀತಿಯ ಮತ್ತು ಬದುಕಿನ ಯೋಗಿಕ್ (tantrik) ಅನುಭವಗಳಿಗೆ ತೆರೆದುಕೊಳ್ಳುತ್ತಿಲ್ಲ?
ಈ ಸಮಸ್ಯೆ ಕೇವಲ ಪಾಶ್ಚಿಮಾತ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಪೌರ್ವಾತ್ಯರು ಕೂಡ ಸೆಕ್ಸ್ ನ ಗೀಳು ಮಾಡಿಕೊಂಡಿದ್ದಾರೆ, ಆದರೆ ಇಬ್ಬರೂ ಬೇರೆ ಬೇರೆ ರೀತಿಯಲ್ಲಿ. ಪಶ್ಚಿಮಕ್ಕೆ ಸೆಕ್ಸ್ ಲೋಲುಪತೆಯ, ಅತ್ಯಾಸಕ್ತಿಯ ಸಂಗತಿಯಾದರೆ, ಪೂರ್ವಕ್ಕೆ ಸೆಕ್ಸ್ ಹತ್ತಿಕ್ಕುವ, ನಿಯಂತ್ರಿಸುವ ವಿಷಯವಾಗಿದೆ. ಆದರೆ ಸೆಕ್ಸ್, ಪೂರ್ವ ಮತ್ತು ಪಶ್ಚಿಮ ಎರಡಕ್ಕೂ ಗೀಳು ಆಗಿರುವುದಂತೂ ನಿಜ. ಮುಖ್ಯ ಪ್ರಶ್ನೆಯೆಂದರೆ ಯಾಕೆ ಪಶ್ಚಿಮಕ್ಕೆ ಸೆಕ್ಸ್ ಕುರಿತಾಗಿ ಇಷ್ಟು ಅಪರಿಮಿತ ಆಸಕ್ತಿ, ಗೀಳು? ಎರಡು ಸಾವಿರ ವರ್ಷಗಳ ಕ್ರಿಶ್ಚಿಯಾನಿಟಿ ಮತ್ತು ಸೆಕ್ಸ್ ನ ಹತ್ತಿಕುವ ಅದರ ವಿಧಾನಗಳು ಈ ಬಗೆಯ indulgence ಗೆ (ಲೋಲುಪತೆ, ಅತ್ಯಾಸಕ್ತಿ) ಕಾರಣವಾಗಿರಬಹುದೆ?
ಪೂರ್ವ ಕೂಡ ಸೆಕ್ಸ್ ನ ಹತ್ತಿಕುವಲ್ಲಿ ಹಿಂದೆ ಬಿದ್ದಿಲ್ಲ, ಆದಷ್ಟು ಬೇಗ ಪೌರಸ್ತ್ಯರೂ ಸೆಕ್ಸ್ ನ ಲೋಲುಪತೆಗೆ ಅಂಟಿಕೊಳ್ಳುವುದರಲ್ಲಿ ತಡ ಮಾಡುವುದಿಲ್ಲ. ಮನುಷ್ಯನ ಮೈಂಡ್ ಲೋಲಕದ ರೀತಿಯಲ್ಲಿ ಚಲಿಸುತ್ತದೆ, ಎಡದಿಂದ – ಬಲಕ್ಕೆ, ಬಲದಿಂದ – ಎಡಕ್ಕೆ.
ನೆನಪಿರಲಿ, ಲೋಲಕ ಬಲಕ್ಕೆ ಚಲಿಸುತ್ತಿರುವ ಹೊತ್ತಿನಲ್ಲಿಯೇ, ಎಡಕ್ಕೆ ಚಲಿಸಲು ಬೇಕಾಗುವ ಶಕ್ತಿಯನ್ನು ಒಟ್ಟುಗೊಡಿಸಿಕೊಳ್ಳುತ್ತಿದೆ ಮತ್ತು vice versa ಕೂಡ ನಿಜ. ಅದು ಎಡಕ್ಕೆ ಚಲಿಸುತ್ತಿರುವಂತೆ ಕಾಣಿಸುತ್ತದೆಯೇನೋ ನಿಜ, ಆದರೆ ಬಲಕ್ಕೆ ಚಲಿಸಲು ತನ್ನೆಲ್ಲ ಶಕ್ತಿಯನ್ನು ಒಟ್ಟು ಮಾಡಿಕೊಳ್ಳುತ್ತಿದೆ, it’s moving towards left but it’s gaining momentum, energy to move towards right.
ಸಮಾಜ ದಮನಕಾರಿಯಾಗಿರುವಾಗ ಅದು ಲೋಲುಪತೆಯ ಕಡೆಗೆ ಸಾಗಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಒಟ್ಟು ಮಾಡಿಕೊಳ್ಳುತ್ತಿಯೆಂದೂ, ಮತ್ತು ಸಮಾಜ ಲೋಲುಪತೆಯಲ್ಲಿ ಮುಳುಗಿರುವಾಗ, ಅದು ದಮನಕಾರಿಯಾಗಲು ಬೇಕಾಗಿರುವ ಎಲ್ಲವನ್ನೂ ಗಟ್ಟಿಗೊಳಿಸಿಕೊಳ್ಳುತ್ತಿದೆಯೆಂದೂ ಇದರ ಅರ್ಥ. ಹಾಗಾಗಿ ಒಂದು ವಿಚಿತ್ರವಾದ ಸಂಗತಿಯೊಂದು ಸಂಭವಿಸಲೇ ಬೇಕಿದೆ, ಹಾಗೆ ನೋಡಿದರೆ ಈ ವಿಚಿತ್ರ ಸಂಗತಿಗೆ ನಾವು ಈಗಾಗಲೇ ಸಾಕ್ಷಿಯಾಗುತ್ತಿದ್ದೇವೆ : ಲೋಲುಪತೆಯಲ್ಲಿ ಮುಳುಗಿ ಹೋಗಿದ್ದ ಪಶ್ಚಿಮ ಈಗ ದಮನದ ಕಡೆ ವಾಲುತ್ತಿದೆ, ಅಲ್ಲಿನ ಹಲವಾರು ಪಂಥಗಳು ಈಗ ಬ್ರಹ್ಮಚರ್ಯವನ್ನು ಬೋಧಿಸುತ್ತಿವೆ.
ಹರೇಕೃಷ್ಣ ಪಂಥ ಬ್ರಹ್ಮಚರ್ಯವನ್ನು ಅನುಮೋದಿಸುತ್ತಿದೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನ ಈ ವಿಧಾನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಮತ್ತು ಇನ್ನೂ ಹಲವಾರು ವಿಚಾರಧಾರೆಯ ಪಂಥಗಳು ಹುಟ್ಟಿಕೊಳ್ಳುತ್ತಿವೆ ಮತ್ತು ಈ ಎಲ್ಲ ಪಂಥಗಳು ಒಪ್ಪಿಕೊಂಡುರುವ ಸಮಾನ ಅಂಶವೆಂದರೆ ಸೆಕ್ಸ್ ನ ಹತ್ತಿಕ್ಕ ಬೇಕು ಎನ್ನುವುದು.
ಯೋಗದ ಹೆಸರಿನಲ್ಲಿ, ಝೆನ್ ನ ಹೆಸರಿನಲ್ಲಿ, ಕ್ರಿಶ್ಚಿಯಾನಿಟಿಯ ಹೆಸರಿನಲ್ಲಿ ಹುಟ್ಟಿಕೊಳ್ಳುತ್ತಿರುವ ಹಲವಾರು ಪಂಥಗಳು ಸೆಕ್ಸ್ ನ ಹತ್ತಿಕ್ಕಿಕೊಳ್ಳುವುದರಲ್ಲಿ ಆಸಕ್ತಿ ತೋರಿಸುತ್ತಿವೆ. ಆದಷ್ಟು ಬೇಗ ಪಶ್ಚಿಮ, ಸೆಕ್ಸ್ ಕುರಿತಂತೆ ದಮನಕಾರಿ ನಿಲುವು ತೆಗೆದುಕೊಳ್ಳುವತ್ತ ಮುನ್ನಡೆಯಲಿದೆ. ಅದೇ ರೀತಿ ಪೂರ್ವದಲ್ಲಿ, ಪೋರ್ನ್ ಮ್ಯಾಗಜೀನ್ ಗಳು ವಿಡಿಯೋಗಳು ಹೆಚ್ಚಾಗುತ್ತಿವೆ, ಜನ ಸೆಕ್ಸ್ ನ, ಲೋಲುಪತೆ ಎನ್ನುವಂತೆ ಅನುಭವಿಸುತ್ತಿದ್ದಾರೆ. ಆದರೆ ಪೂರ್ವ ಸ್ವಲ್ಪ ಎಲ್ಲದರಲ್ಲೂ ಸೋಮಾರಿ ಆದ್ದರಿಂದ ಅದು ಲೋಲುಪತೆಯತ್ತ ಪೂರ್ಣವಾಗಿ ಹೊರಳುವುದು ಸ್ವಲ್ಪ ತಡ ಆಗಬಹುದು.
ಪಶ್ಚಿಮ ಅತ್ಯಂತ ವೇಗದಿಂದ ಮುನ್ನಡೆಯುವ ಸಮಾಜ. ಆದರೆ ಪೂರ್ವ ಪಶ್ಚಿಮದಂತೆ ಆಗುತ್ತಿದ್ದರೆ, ಪಶ್ಚಿಮ ಪೂರ್ವದಂತೆ ಆಗುತ್ತಿದೆ. ಇದು ಬಹಳ ದೊಡ್ಡ ಸಮಸ್ಯೆ. ಈ ರೀತಿ ಆಗಿ ಬಿಟ್ಟರೆ ಸಮಸ್ಯೆ ಬಗೆಹರಿಯುವುದಿಲ್ಲ ಹಾಗೇ ಉಳಿದುಕೊಂಡು ಬಿಡುತ್ತದೆ. ಲೋಲಕ ಇನ್ನೊಂದು ಬದಿಗೆ ಚಲಿಸಿದೆಯಷ್ಟೇ ಆದರೆ ನೀವು ಮಾಡುತ್ತಿರುವುದರಲ್ಲಿ ಯಾವ ವ್ಯತ್ಯಾಸ ಆಗಿಲ್ಲ.
ಹಿಂದೆ ಈ ರೀತಿಯ ಪಲ್ಲಟಗಳು ಹಲವಾರುಬಾರಿ ಆಗಿ ಹೋಗಿವೆ. ದಮನಕಾರಿ ಸಮಾಜ ಸ್ವಲ್ಪ ತಡವಾದರೂ ಖಂಡಿತವಾಗಿ ಲೋಲುಪತೆಯತ್ತ ಹೊರಳಿದೆ. ಯಾವಾಗ ಇನ್ನು ಹತ್ತಿಕ್ಕುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ತಲುಪಿದಾಗ ಸ್ಫೋಟ ಸಂಭವಿಸುತ್ತದೆ. ಆಗ ಜನ ರೊಚ್ಚಿಗೇಳುತ್ತಾರೆ. ಅಥವಾ ಸಮಾಜ ಭೋಗ ಮತ್ತು ಲೋಲುಪತೆಯ ಶಿಖರವನ್ನು ತಲುಪಿದಾಗ ಅದರ ವ್ಯರ್ಥತೆ ಮನಗಂಡು ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಆರಂಭವಾಗುತ್ತದೆ.
ನಸ್ರುದ್ದೀನ್ ನ ಗರ್ಲಫ್ರೆಂಡ್ ನಾಸ್ತಿಕಳಾದ್ದರಿಂದ, ಅವನ ಮನೆಯಲ್ಲಿ ಎಲ್ಲರಿಗೂ ನಸ್ರುದ್ದೀನ್ ಆ ಹುಡುಗಿಯನ್ನ ಮದುವೆಯಾಗುವುದರ ಬಗ್ಗೆ ಹಿಂಜರಿಕೆಯಿತ್ತು. ಒಂದು ದಿನ ನಸ್ರುದ್ದೀನ್ ನ ತಾಯಿ ನಸ್ರುದ್ದೀನ್ ಜೊತೆ ಮಾತನಾಡಿದಳು,
“ ನಮ್ಮದು ದೇವರನ್ನು ನಂಬುವ ಕುಟುಂಬ ಹಾಗಾಗಿ ಆ ಹುಡುಗಿ ನಮ್ಮ ಕುಟುಂಬದಲ್ಲಿ ಸೇರಿದಾಗ ಅವಳಿಗೆ ತೊಂದರೆ ಆಗಬಹುದು. ನೀನು ಅವಳಿಗೆ ದೇವರ ಬಗ್ಗೆ, ಧರ್ಮದ ಬಗ್ಗೆ ಪಾಠ ಮಾಡಿ ಮನ ಬದಲಿಸು “
ತಾಯಿಯ ಮಾತಿನಂತೆ ನಸ್ರುದ್ದೀನ್ ತನ್ನ ಗೆಳತಿಗೆ ದೇವರು-ಧರ್ಮದ ಬಗ್ಗೆ ತಲೆ ತುಂಬತೊಡಗಿದ, ವಿವಿಧ ಧಾರ್ಮಿಕ ಗ್ರಂಥಗಳ ಪರಿಚಯ ಮಾಡಿಕೊಟ್ಟ, ಹಿರಿಯ ಧಾರ್ಮಿಕ ವಿದ್ವಾಂಸರ ಪರಿಚಯ ಮಾಡಿಕೊಟ್ಟ.
ಕೆಲ ದಿನಗಳ ನಂತರ ನಸ್ರುದ್ದೀನ್ ನ ತಾಯಿ ವಿಚಾರಿಸಿದಳು, “ ನಸ್ರುದ್ದೀನ್ , ನಿನ್ನ ಗೆಳತಿಯನ್ನ ಆಸ್ತಿಕಳನ್ನಾಗಿ ಬದಲಾಯಿಸಲು ನೀನು ಮಾಡುತ್ತಿರುವ ಪ್ರಯತ್ನಗಳನ್ನ ನೋಡುತ್ತಿರುವೆ, ಖಂಡಿತ ನಿನ್ನ ಪ್ರಯತ್ನದಲ್ಲಿ ಸಫಲನಾಗುತ್ತೀಯ, ಯಾವಾಗ ಮದುವೆ ಇಟ್ಟುಕೊಳ್ಳುವುದು ? “
“ ಆಕೆಯೊಡನೆ ಮದುವೆ ಈಗ ಸಾಧ್ಯವಿಲ್ಲ , ಆಕೆಯನ್ನ ಧಾರ್ಮಿಕ ವ್ಯಕ್ತಿಯಾಗಿಸಲು ನಾನು ಮಾಡಿದ ಪ್ರಯತ್ನ ಸ್ವಲ್ಪ ಜಾಸ್ತಿ ಆಯಿತು ಅನಿಸುತ್ತದೆ. ಈಗ ಆಕೆ ನನ್ (ಕ್ರೈಸ್ತ ಸನ್ಯಾಸಿನಿ ) ಆಗುವ ನಿರ್ಧಾರ ಮಾಡಿದ್ದಾಳೆ “
ನಸ್ರುದ್ದೀನ್ ನಿರಾಶೆಯಿಂದ ತಾಯಿಗೆ ಎಲ್ಲ ವಿವರಿಸಿದ.

