ಅವಳು ಪರಿಪೂರ್ಣಳೆನಲ್ಲ ನೀನೂ ಸಹ. ಮತ್ತು ನಿಮ್ಮಿಬ್ಬರ ಜೋಡಿ ಯಾವತ್ತೂ ಪರಿಪೂರ್ಣ ಆಗಿರುವುದು ಸಾಧ್ಯವಿಲ್ಲ… | ಬಾಬ್ ಮಾರ್ಲೆ; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀನು ಅವಳಿಗೆ ಮೊದಲನೇಯವನಾಗಿರಲಿಕ್ಕಿಲ್ಲ ಕೊನೆಯವನೂ ಅಥವಾ ಅವಳಿಗೆ ಮಾತ್ರದವನು ಕೂಡ. ಅವಳು ಮೊದಲೂ ಪ್ರೀತಿಸಿದ್ದಳು, ಮತ್ತೆ ಪ್ರೀತಿಸಬಹುದು ಕೂಡ. ಆದರೆ ಅವಳು ಈಗ ನಿನ್ನ ಪ್ರೀತಿಸುತ್ತಿದ್ದಾಳೆ ಎಂದ ಮೇಲೆ, ಬೇರೆ ಏನು ನಿನ್ನ ಸಮಸ್ಯೆ? ಅವಳು ಪರಿಪೂರ್ಣಳೆನಲ್ಲ ನೀನೂ ಸಹ. ಮತ್ತು ನಿಮ್ಮಿಬ್ಬರ ಜೋಡಿ ಯಾವತ್ತೂ ಪರಿಪೂರ್ಣ ಆಗಿರುವುದು ಸಾಧ್ಯವಿಲ್ಲ. ಆದರೆ ಅವಳು ನಿನ್ನ ಖುಶಿಗೆ ಕಾರಣಳಾಗಿದ್ದಾಳೆಂದರೆ, ಇನ್ನೊಮ್ಮೆ ಯೋಚನೆ ಮಾಡಲು ನಿನ್ನ ಪ್ರೇರೇಪಿಸುತ್ತಾಳೆಂದರೆ, ಮತ್ತು ನಿನ್ನ ಜೊತೆ ಮನುಷ್ಯರ ರೀತಿಯಲ್ಲಿ ಇರುತ್ತ, ತಪ್ಪುಗಳನ್ನು ಮಾಡುತ್ತಾಳೆ ಮತ್ತು ನಿನ್ನ ತಪ್ಪುಗಳನ್ನೂ ಸಹಾನುಭೂತಿಯಿಂದ ಒಪ್ಪಿಕೊಳ್ಳುತ್ತಾಳೆಂದರೆ, ಬಿಡಬೇಡ ಅವಳನ್ನು, ನಿನಗೆ ಸಾಧ್ಯವಾದದ್ದನ್ನೆಲ್ಲ ಕೊಡು ಅವಳಿಗೆ.
ಅವಳು ನಿನ್ನ ಬಗ್ಗೆ ದಿನದ ಪ್ರತಿಕ್ಷಣ ಯೋಚನೆ ಮಾಡುವುದಿಲ್ಲವಾದರೂ ಅವಳು ನಿನಗೆ ತನ್ನ ಒಡೆಯಬಹುದಾದ ಒಂದು ಭಾಗವನ್ನು ಕೊಟ್ಟಿದ್ದಾಳೆ, ಅವಳ ಹೃದಯ. ಹಾಗಾಗಿ ಅವಳನ್ನು ಹರ್ಟ್ ಮಾಡಬೇಡ, ಬದಲಾಯಿಸುವ ಪ್ರಯತ್ನ ಮಾಡಬೇಡ, ಅನಲೈಸ್ ಮಾಡುವ ಗೋಜಿಗೆ ಹೋಗಬೇಡ ಹಾಗು ಅವಳಿಗೆ ಸಾಧ್ಯವಿರುವದಕ್ಕಿಂತ ಹೆಚ್ಚಿನದನ್ನ ಅವಳಿಂದ ನಿರೀಕ್ಷೆ ಮಾಡಬೇಡ.
ಅವಳು ನಿನ್ನ ಖುಶಿಗೆ ಕಾರಣಳಾದಾಗ ಮುಗುಳ್ನಗುತ್ತ
ಅವಳನ್ನು ಬೆಂಬಲಿಸು. ಅವಳು ಯಾವಾಗ ನಿನ್ನ ಸಿಟ್ಟಿಗೆ ಕಾರಣಳಾಗುತ್ತಾಳೆ ಎನ್ನುವುದು ಗೊತ್ತಿರಲಿ ಅವಳಿಗೆ. ಮತ್ತು ನಿನ್ನ ಜೊತೆ ಇಲ್ಲದಿರುವಾಗ ಅವಳನ್ನು ಮಿಸ್ ಮಾಡಿಕೋ.

