ನೆರೂಡನ Book of Questions, ಕನ್ನಡದಲ್ಲಿ… #3

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 3ನೇ ಕಂತು ಇಲ್ಲಿದೆ…

2ನೇ ಕಂತು ಇಲ್ಲಿ ನೋಡಿ : https://aralimara.com/2024/06/01/neruda/

** ಭಾಗ 3 **

ಗೋಧಿ ಹೊಲದಲ್ಲಿರೋ ಚಿನ್ನಾನೆಲ್ಲ 
ಯಾರಾದರೂ ಎಣಿಸಿದ್ದಾರಾ?

ಸಮುದ್ರದ ಸೆಂಟರ್‌ ಎಲ್ಲಿದೆ?
ಸಮುದ್ರದ ಅಲೆ ಅಲ್ಲಿಗೆ ಯಾವತ್ತೂ ಹೋಗಲ್ಲ,
ಯಾಕೆ?

ಉಲ್ಕೆ ಅನ್ನೋದು
ಕೆಂಪು ಹರಳಿನ ಪಾರಿವಾಳ,
ಹೌದಾ?
ನಿನ್ನನ್ನ ನಿಜವಾಗಲೂ ನಾನೇ ಬರೆದೆನಾ
ಅಂತ ನನ್ನ ಪುಸ್ತಕಾನ ನಾನು ಕೇಳಬಹುದಾ?
*
ನಾವು ಮತ್ತೆ ನೋಡೋದು ಯಾವಾಗ?
-ಅಂತ ನಿನ್ನೆ, ನಿನ್ನೆ, ನನ್ನ ಕಣ್ಣುಗಳನ್ನ ಕೇಳಿದೆ.
*
ನೀರಿನ ನೀಲಿ ಹಾಡಿದಾಗ
ಬಾನಲ್ಲಿ ಹುಟ್ಟಿದ ಗಾಳಿಮಾತಿಗೆ/ಪುಕಾರಿಗೆ ಎಂಥ ವಾಸನೆ ಇತ್ತು?
ಸತ್ತವರಿಗೆ ಏಪ್ರಿಲ್‌ ತಿಂಗಳು 
ಯಾವ ಬಣ್ಣದಲ್ಲಿ ಕಾಣತ್ತೆ?
*
ಕತ್ತಲು ಕೋಣೆಯಲ್ಲಿರೋ ಖೈದಿ ಬೆಳಕಿನ ಧ್ಯಾನ ಮಾಡಿದರೆ
ಆ ಬೆಳಕು ನಮ್ಮ ಮೇಲೆ ಬೀಳೋ ಬೆಳಕಿನ ಹಾಗೇ ಇರತ್ತಾ?
*
ಎಲ್ಲಾ ರೇಶಿಮೆ ಹುಳೂ ಬದುಕೂ
ಯಾಕೆ ಅಷ್ಟೊಂದು ತರಕಲು ತರಕಲು?
ಚಂದ್ರಲೋಕದಲ್ಲಿ ದೇವತೆಗಳು ಇದಾರೆ ಅನ್ನೋದು 
ನಿಜ ಅಲ್ಲ, ಅಲ್ಲವಾ?
*
ಒಂದು ದಿನದಲ್ಲಿ ಎಷ್ಟು ವಾರ?
ಒಂದು ತಿಂಗಳಲ್ಲಿ ಎಷ್ಟು ವರ್ಷ?
*
ನಾಲಕ್ಕು ಅನ್ನೋದು ಎಲ್ಲಾರಿಗೂ ನಾಲಕ್ಕೇನಾ?
ಎಲ್ಲಾರ ಏಳು ಕೂಡ ಒಂದೇ ಸಮ ಇರತ್ತಾ?



Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.