ಮನುಷ್ಯರೆಂಬ ಈಡಿಯಟ್ ಗಳು: ಓಶೋ

ಯಾರು ಹಣದ ಹಿಂದೆ ಬಿದ್ದಿರುವನೋ ಅವನು ಇಡಿಯಟ್. ಏಕೆಂದರೆ ಸೂರ್ಯ ಹಣದ ಹಿಂದೆ ಬಿದ್ದಲ್ಲ, ಚಂದ್ರ ಹಣದ ಹಿಂದೆ ಬಿದ್ದಲ್ಲ, ನದಿ, ಸಾಗರ , ಪರ್ವತಗಳು ಹಣದ ಹಿಂದೆ ಬಿದ್ದಲ್ಲ, ಅವು ಇಡಿಯಾಟಿಕ್ ಅಲ್ಲ, ಅವುಗಳದು ಅಸ್ತಿತ್ವದ ದಾರಿ, ಮನುಷ್ಯ ಹಣದ ಹಿಂದೆ ಬಿದ್ದಿದ್ದಾನೆ ಅವನು ಇಡಿಯಟ್… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಧರ್ಮದ (religion) ದಾರಿ, ಸತ್ಯದ ದಾರಿ, ಪ್ರಕೃತಿಯ ದಾರಿ. ರಿಲೀಜನ್ ಎನ್ನುವ ಪದದ ಮೂಲ RELIGARE, ಹಾಗೆಂದರೆ to re-bind, ನಿಮ್ಮನ್ನ ಮತ್ತೆ ಕೂಡಿಸುವುದು.  ನೀವು ಅಸ್ತಿತ್ವದಿಂದ ಬೇರೆಯಾಗಿಬಿಟ್ಟಿದ್ದೀರಿ, ರಿಲೀಜನ್ ಮತ್ತೆ ನಿಮ್ಮನ್ನ ಅಸ್ತಿತ್ವದೊಂದಿಗೆ ಬೆಸೆಯುವ ಪ್ರಯತ್ನ ಮಾಡುತ್ತದೆ.

ನೀವು ಅಸ್ತಿತ್ವದ ರಿದಂ ನ ಜೊತೆ ಇಲ್ಲ ಎನ್ನುವುದನ್ನ ನೀವು ಮರೆತುಬಿಟ್ಟಿದ್ದೀರಿ. ನೀವು ನೀವೇ ಕಂಡುಕೊಂಡ ದಾರಿಯಲ್ಲಿ ಮುನ್ನಡೆಯುತ್ತಿದ್ದೀರಿ, ಅಸ್ತಿತ್ವ ಒಂದು ದಿಕ್ಕಿನಲ್ಲಿ ನಡೆಯುತ್ತಿದ್ದರೆ ನೀವು ಇನ್ನೊಂದು ದಿಕ್ಕಿನಲ್ಲಿ.

ನೀವು ನಿಜದೊಂದಿಗಿನ ನಿಮ್ಮ ಸಂಪರ್ಕವನ್ನು ಕಳೆದುಕೊಂಡುಬಿಟ್ಟಿದ್ದೀರಿ. ನೀವು ನಿಮ್ಮದೇ ಆದ ಕಲ್ಪನಾಲೋಕದಲ್ಲಿ ಬದುಕುತ್ತಿದ್ದೀರಿ. ನೀವು ಅಸ್ತಿತ್ವ ದ ಬದುಕಿನಲ್ಲಿ ಬದುಕುತ್ತಿಲ್ಲ ನಿಮ್ಮದೇ ಆದ ಖಾಸಗೀ ಬದುಕೊಂದನ್ನ ಕಟ್ಟಿಕೊಂಡಿದ್ದೀರಿ. ನೀವು “idiot” ಗಳಾಗಿದ್ದೀರಿ.  ಇಡಿಯಟ್ ಎನ್ನುವ ಪದ ಬಹಳ ಸುಂದರವಾದದ್ದು. Idiot ಪದದ ಮೂಲ, ಗ್ರೀಕ್ ಭಾಷೆಯ idiotes. ಹಾಗೆಂದರೆ ಖಾಸಗಿ ವ್ಯಕ್ತಿ, private person. One who has his own idiom of life, that is the idiot. ಜಗತ್ತು ಒಂದು ದಿಕ್ಕಿನಲ್ಲಿ ಹೋಗುತ್ತಿದ್ದಾಗ ನೀವು ಇನ್ನೊಂದು ದಿಕ್ಕಿನಲ್ಲಿ ಹೋಗುತ್ತಿದ್ದರೆ ನೀವು ಇಡಿಯಟ್. ಜಗತ್ತಿನಿಂದ ಹೊರತಾಗಿ ತನ್ನದೇ ಆದ ಖಾಸಗೀ ಗುರಿಗಳನ್ನು ಹೊಂದಿರುವವ ಇಡಿಯಟ್.

ಯಾರು ಹಣದ ಹಿಂದೆ ಬಿದ್ದಿರುವನೋ ಅವನು ಇಡಿಯಟ್. ಏಕೆಂದರೆ ಸೂರ್ಯ ಹಣದ ಹಿಂದೆ ಬಿದ್ದಲ್ಲ, ಚಂದ್ರ ಹಣದ ಹಿಂದೆ ಬಿದ್ದಲ್ಲ, ನದಿ, ಸಾಗರ , ಪರ್ವತಗಳು ಹಣದ ಹಿಂದೆ ಬಿದ್ದಲ್ಲ, ಅವು ಇಡಿಯಾಟಿಕ್ ಅಲ್ಲ, ಅವುಗಳದು ಅಸ್ತಿತ್ವದ ದಾರಿ, ಮನುಷ್ಯ ಹಣದ ಹಿಂದೆ ಬಿದ್ದಿದ್ದಾನೆ ಅವನು ಇಡಿಯಟ್. ಹಣದ ಹಿಂದೆ ಬೀಳುವುದು ಎಂದರೆ ಅವಶ್ಯಕತೆಗಿಂತ ಹೆಚ್ಚಿನ ಹಣದ ಹಿಂದೆ ಬೀಳುವುದು ಎನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಡೀ ಅಸ್ತಿತ್ವ ಹಣದ ಅವಶ್ಯಕತೆ  ಇಲ್ಲದೆ ಬದುಕುತ್ತಿದೆ ಆದರೆ,  ಮನುಷ್ಯ ಹಣದ ಹಿಂದೆ ಹುಚ್ಚನಾಗಿದ್ದಾನೆ. ಮನುಷ್ಯ ಪ್ರಕೃತಿಯಿಂದ ಬೇರೆಯದಾಗ ಆದ ಅನಾಹುತವಿದು. ಅವನು idiocy ಇಂದ ಬಳಲುತ್ತಿದ್ದಾನೆ, ಇದು ಜಗತ್ತಿನ ಮಹಾರೋಗ. ಅವನು ತನ್ನದೇ ಆದ ಖಾಸಗೀ ಗುರಿಗಳನ್ನು ಹೊಂದಲು ಶುರು ಮಾಡಿದ್ದಾನೆ.

ಒಂದು ದಿನ ಮನುಷ್ಯ, ದೇವರಿಗೆ ಮುಖಾಮುಖಿಯಾದಾಗ, “ನೀನು ಏನು ಹುಡುಕುತ್ತಿದ್ದೀ?” ಎಂದು ದೇವರು ಕೇಳಿದರೆ, ಮನುಷ್ಯ “ಹಣ” ಎಂದು ಉತ್ತರಿಸುತ್ತಾನೆ. ಆದರೆ ದೇವರಿಗೆ ಹಣ ಎಂದರೇನು ಎನ್ನುವುದು ಅರ್ಥವಾಗುವುದಿಲ್ಲ. ಹಣ ಎಂದರೇನು ಎನ್ನುವುದನ್ನ ದೇವರಿಗೆ ವಿವರಿಸುವುದು ಬಹಳ ಕಷ್ಟ. ಆ್ಯಡಮ್ ಸ್ಮಿಥ್ ಅಥವಾ ರಿಕಾರ್ಡೋ ಅಥವಾ ಗ್ಯಾಲ್ಬರ್ಥ ನಂಥ ಮಹಾ ಅರ್ಥಶಾಸ್ತ್ರಿಗಳು ಹಣದ ಬಗ್ಗೆ ತಿಳಿಸಿ ಹೇಳಿದರೂ ನನಗೆ ಖಂಡಿತವಾಗಿ ಗೊತ್ತು, ದೇವರಿಗೆ ಅದು ಅರ್ಥವಾಗುವುದಿಲ್ಲ. ಇಡೀ ಅಸ್ತಿತ್ವ, ಹಣ ಇಲ್ಲದೆ ಬದುಕುತ್ತಿದೆ ಆದರೆ ಮನುಷ್ಯ ಈ ಇಡಿಯಸೀ (idiocy) ನ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾನೆ



Öshô : Ecstasy # The Forgotten Language #
Chapter:4

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.