ಮನುಷ್ಯ ಸ್ವಭಾವದ ಕುರಿತ ಮೂರು ಒಳನೋಟಗಳು

ಮನೋವಿಶ್ಲೇಷಣೆಯ (psychoanalysis) ಮೂಲಪುರುಷ ಸಿಗ್ಮಂಡ್ ಫ್ರಾಯ್ಡ್ ನ ಪ್ರಕಾರ ಮನುಷ್ಯನ ಸ್ವಭಾವ ಮತ್ತು ವರ್ತನೆಗಳಿಗೆ ಕಾರಣ ಅವನ ಸುಪ್ತ ಬಯಕೆ ಹಾಗು ಬಿಕ್ಕಟ್ಟುಗಳು. ಅವನ ವಾದದ ಪ್ರಕಾರ ಹ್ಯೂಮನ್ ಸೈಕಿ ಯನ್ನ ಮೂರು ಭಾಗಗಳಾಗಿ ವಿಂಗಡಿಸಬಹುದು… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ಥಾಮಸ್ ಹಾಬ್ಸ್ (Thomas Hobbes) , ಜೀನ್ ಜ್ಯಾಕ್ ರುಸೌ ( Jean-Jacques Rousseau) ಮತ್ತು ಸಿಗ್ಮಂಡ್ ಫ್ರಾಯ್ಡ್ (Sigmund Freud) ಮೂವರೂ ಜಗತ್ತಿನ ಅತ್ಯಂತ ಪ್ರಭಾವಿ ತತ್ವಜ್ಞಾನಿಗಳು, ವಿಚಾರವಾದಿಗಳು. ಮೂವರಿಗೂ ಮನುಷ್ಯ ಸ್ವಭಾವದ ಕುರಿತು ವಿಭಿನ್ನ ಒಳನೋಟಗಳಿದ್ದವು. ಅವರ ಒಳನೋಟಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಥಾಮಸ್ ಹಾಬ್ಸ್ ನ ಪ್ರಕಾರ ಮನುಷ್ಯರು ಸ್ವಾಭಾವಿಕವಾಗಿ ಸ್ವಾರ್ಥಿಗಳು ಮತ್ತು ಆಕ್ರಮಣಶೀಲರು. ಮತ್ತು ಮನುಷ್ಯನ ಈ ಸ್ವಾಭಾವಿಕ ಪ್ರವೃತ್ತಿಗಳನ್ನು ನಿಯಂತ್ರಣದಲ್ಲಿಡಲು ಸಮಾಜದ ಅವಶ್ಯಕತೆಯಿದೆ. ಅವನ ವಾದ ಏನೆಂದರೆ ಸಮಾಜ ಮತ್ತು ವ್ಯಕ್ತಿಯ ನಡುವೆ ಒಂದು ಸಾಮಾಜಿಕ ಒಪ್ಪಂದ (Social contract) ಇರಬೇಕು. ಈ ಒಪ್ಪಂದದ ಪ್ರಕಾರ ವ್ಯಕ್ತಿ ತನ್ನ
ಕೆಲವು ಸ್ವಾತಂತ್ರ್ಯಗಳನ್ನ ಬಿಟ್ಟುಕೊಡಬೇಕಾಗುತ್ತದೆ, ಮತ್ತು ಇದಕ್ಕೆ ಬದಲಾಗಿ ಸಮಾಜ ಅವನಿಗೆ ರಕ್ಷಣೆಯನ್ನು ಖಾತ್ರಿ ಮಾಡುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ನಿರಂತರ ಕಾದಾಟ ಮತ್ತು ಕೊಲ್ಲುವಿಕೆ ಈ ಒಪ್ಪಂದದಿಂದ ಕಡಿಮೆಯಾಗುತ್ತದೆ.

ಆದರೆ ಜೀನ್ ಜ್ಯಾಕ್ ರುಸೌ ನ ನಂಬಿಕೆ ಏನೆಂದರೆ, ಮನುಷ್ಯ ಮೂಲತಃ ಒಳ್ಳೆಯ ವ್ಯಕ್ತಿ ಆದರೆ ಸಮಾಜ ಅವನನ್ನು ಭೃಷ್ಟನನ್ನಾಗಿಸುತ್ತದೆ. ಅವನ ಪ್ರಕಾರ ವ್ಯಕ್ತಿಗಳನ್ನ ಅಧಿಕಾರದಲ್ಲಿರುವ ಜನರಿಂದ ರಕ್ಷಿಸಲು ಸಾಮಾಜಿಕ ಒಪ್ಪಂದದ ಅವಶ್ಯಕತೆಯಿದೆ.

ಮನೋವಿಶ್ಲೇಷಣೆಯ (psychoanalysis) ಮೂಲಪುರುಷ ಸಿಗ್ಮಂಡ್ ಫ್ರಾಯ್ಡ್ ನ ಪ್ರಕಾರ ಮನುಷ್ಯನ ಸ್ವಭಾವ ಮತ್ತು ವರ್ತನೆಗಳಿಗೆ ಕಾರಣ ಅವನ ಸುಪ್ತ ಬಯಕೆ ಹಾಗು ಬಿಕ್ಕಟ್ಟುಗಳು. ಅವನ ವಾದದ ಪ್ರಕಾರ ಹ್ಯೂಮನ್ ಸೈಕಿ ಯನ್ನ ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೇಯದು Ego, ಇದು id (the part of the mind in which inate instinctive impulses and primary processes manifest.) ಯ ಬಯಕೆಗಳು ( ಪ್ರಜ್ಞಾರಹಿತ ಮತ್ತ ಮೂಲಭೂತ) ಮತ್ತು ಹೊರ ಜಗತ್ತಿನ ಡಿಮಾಂಡ್ ಗಳ ನಡುವೆ ಮಧ್ಯಸ್ತಿಕೆ ವಹಿಸುತ್ತದೆ. ಎರಡನೇಯದು Super ego, ಇದು ನಮ್ಮ ಒಳಗೆ ಆಂತರಿಕಗೊಂಡ ನೈತಿಕತೆ ಮತ್ತು ಸಾಮಾಜಿಕ ನಿಯಮಗಳನ್ನು ಪ್ರತಿನಿಧಿಸುತ್ತದೆ. ಹಾಗು ಮೂರನೇಯದು id, ಇದು ನಮ್ಮ ಸುಖ ಹಾಗು ಆಕ್ರಮಣಶೀಲತೆಯ ಕುರಿತಾದ ಪ್ರಾಥಮಿಕ ಬಯಕೆಗಳನ್ನು ಪ್ರತಿನಿಧಿಸುತ್ತದೆ. ಫ್ರಾಯ್ಡನ ಪ್ರಕಾರ ಹ್ಯೂಮನ್ ಸೈಕಿಯ ಈ ಮೂರು ಭಾಗಗಳ ನಡುವಿನ ಬಿಕ್ಕಟ್ಟು ಮನುಷ್ಯ ಸ್ವಭಾವವನ್ನು ನಿರ್ದೇಶಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಹಾಬ್ಸ್ ಮತ್ತು ಫ್ರಾಯ್ಡ್ ರ ಪ್ರಕಾರ ಮನುಷ್ಯನ ಪ್ರಕೃತಿ ಅವಶ್ಯಕವಾಗಿ ಸ್ವಾರ್ಥಿ ಮತ್ತು ಆಕ್ರಮಣಶೀಲವಾದರೆ ಜೀನ್ ಜ್ಯಾಕ್ ರುಸೌ ಮನುಷ್ಯ ಮೂಲಭೂತವಾಗಿ ಒಳ್ಳೆಯವನು ಎಂದು ಹೇಳುತ್ತಾನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.