ಅಹಂ ಎನ್ನುವುದು, ನಾವು ಇತರರಿಗಿಂತ ಉತ್ತಮರು ಮತ್ತು ನಮ್ಮ ಅವಶ್ಯಕತೆಗಳು ಎಲ್ಲರಿಗಿಂತ ಮುಖ್ಯ ಎಂದು ಕಿವಿಯಲ್ಲಿ ಹೇಳುವ ಪಿಸುಮಾತು. ಇದು ನಮ್ಮಲ್ಲಿ ಅನಿಯಮಿತ ಸಾಮರ್ಥ್ಯ ಇದೆ ಮತ್ತು ಯಾವ ಕೊರತೆಯೂ ಇಲ್ಲ ಎನ್ನುವ ಭಂಡ ವಿಶ್ವಾಸ! ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ತಮ್ಮ ಪುಸ್ತಕ “Ego is the Enemy” ಯಲ್ಲಿ Ryan Holiday ಅಹಂ ಎನ್ನುವುದು ನಮ್ಮ ಸ್ವಂತದ ಮಹತ್ವದ ಕುರಿತ ಅನಾರೋಗ್ಯಕರ ನಂಬಿಕೆ (Unhealthy belief in once’s own importance) ಎಂದು ವ್ಯಾಖ್ಯಾನ ಮಾಡುತ್ತಾರೆ. ಇದು ನಮ್ಮಲ್ಲಿ ಅನಿಯಮಿತ ಸಾಮರ್ಥ್ಯ ಇದೆ ಮತ್ತು ಯಾವ ಕೊರತೆಯೂ ಇಲ್ಲ ಎನ್ನುವ ಭಂಡ ವಿಶ್ವಾಸ.
ಅಹಂ ಎನ್ನುವುದು, ನಾವು ಇತರರಿಗಿಂತ ಉತ್ತಮರು ಮತ್ತು ನಮ್ಮ ಅವಶ್ಯಕತೆಗಳು ಎಲ್ಲರಿಗಿಂತ ಮುಖ್ಯ ಎಂದು ಕಿವಿಯಲ್ಲಿ ಹೇಳುವ ಪಿಸುಮಾತು. ಮತ್ತು ಇತರರಿಗೆ ಅಪ್ಲೈ ಆಗುವ ನಿಯಮಗಳು ನಮಗೆ ಅಪ್ಲೈ ಆಗುವುದಿಲ್ಲ ಏಕೆಂದರೆ ನಾವು ಅಷ್ಟು ವಿಶಿಷ್ಟರು. ಇದು ಒಂದು ಬಗೆಯ ವಿಶ್ವಾಸ ಮತ್ತು ಟ್ಯಾಲೆಂಟ್ ನ ಪರಿಧಿಯನ್ನು ಮೀರಿದ ಶ್ರೇಷ್ಠತೆಯ ಪರಿಕಲ್ಪನೆ.
ಅಹಂ ಯಾವಾಗಲೂ ಫೀಡಬ್ಯಾಕ್ ನ ದೂರ ತಳ್ಳುತ್ತದೆ.
ಅಹಂ ಸದಾ ವಾಸ್ತವದಿಂದ ದೂರ ಇರುತ್ತದೆ.
ಅಹಂ, ಸಂಭವನೀಯ ಗೆಳೆಯರಿಂದ, ಸಂಗಾತಿಗಳಿಂದ ನಿಮ್ಮನ್ನ ದೂರ ಇಡುತ್ತದೆ.
ಅಹಂ, ಉಡುಗೊರೆಯಂತೆ ಗಿಫ್ಟ್ ಪ್ಯಾಕ್ ನಲ್ಲಿ ಬರದ ಅವಕಾಶಗಳನ್ನು ದೂರ ಇಡುತ್ತದೆ.
ಅಹಂ, ತಿಳುವಳಿಕೆ ಮತ್ತು ಸೆಲ್ಫ್ ರಿಫ್ಲೆಕ್ಷನ್ ಇಂದ ನಿಮ್ಮನ್ನ ದೂರ ಇಡುತ್ತದೆ.
ಅಹಂ ನಿಮ್ಮ ನಿಜವಾದ ಶತ್ರು, ಅಹಂ ಸೋಲಿಸಿ, ಗೆಲುವು ಸಾಧಿಸಲು ಈ ಕೆಲವು ಸ್ಟೆಪ್ಸ್ ಫಾಲೋ ಮಾಡಬಹುದು.
- ನಿಮ್ಮ ಅಹಂ ಕುರಿತು ನಿಮಗೆ ಅರಿವು ಇರಲಿ.
ಅಹಂ ವಿರುದ್ಧದ ಹೋರಾಟದಲ್ಲಿ ಮೊದಲ ಹೆಜ್ಜೆ ಎಂದರೆ ಅದರ ಅಸ್ತಿತ್ವವನ್ನು ಗುರುತಿಸುವುದು. ನಿಮ್ಮ ಅಹಂನಿಂದಾಗಿ ಹೊರಹೊಮ್ನುವ ವಿಚಾರಗಳ ಬಗ್ಗೆ ಭಾವನೆಗಳ ಬಗ್ಗೆ ಗಮನ ಕೊಡುವುದು.
- ನಿಮ್ಮನ್ನು ನೀವು ತುಂಬ ಸೀರಿಯಸ್ ಆಗಿ ಪರಿಗಣಿಸದಿರುವುದು.
ಅಹಂ ಎಲ್ಲವನ್ನೂ ಪರ್ಸನಲ್ ಆಗಿ ತೆಗೆದುಕೊಳ್ಳುತ್ತದೆ ಆದರೆ ನೀವು ಈ ಜಗತ್ತಿನ ಕೇಂದ್ರ ಅಲ್ಲ ಎನ್ನುವುದನ್ನ ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
- ವಿನಯಶೀಲರಾಗಿ.
ನಮ್ರತೆ, ದುರಹಂಕಾರಕ್ಕೆ ವಿರುದ್ಧವಾದದ್ದು. ಇದು, ನೀವು ತಪ್ಪಾಗಿರಬಹುದು ಎನ್ನುವುದನ್ನ ಒಪ್ಪಿಕೊಳ್ಳುವ, ಇತರರಿಂದ ಕಲಿಯುವ ಮತ್ತು ಇತರರನ್ನು ಸಲಹುವ ಇಚ್ಛಾಶಕ್ತಿ.
- ಧೃಡತೆಯನ್ನು ಹೊಂದಿ.
ಸೋಲು ಬದುಕಿನ ಒಂದು ಭಾಗ. ಸೋಲಿಗೆ ಮುಜುಗರ ಪಟ್ಟುಕೊಳ್ಳುತ್ತ, ಕಲಿಯುವುದನ್ನ ನಿಲ್ಲಿಸುವ, ಹೊಸ ಪ್ರಯತ್ನಗಳಿಗೆ ಹಿಂದೇಟು ಹಾಕುವ ನಿಮ್ಮ ಅಹಂಗೆ ಕಡಿವಾಣ ಹಾಕಿ.

