ಇನ್ನೊಬ್ಬರಿಂದ ಬಳಕೆಯಾಗುವುದು ನಮ್ಮ ಔದಾರ್ಯವಾಗಲೀ ಮುಗ್ಧತೆಯಾಗಲೀ ಅಲ್ಲ. ಅದು ನಮ್ಮ ಅಮಾಯಕತೆ. ಬಹುತೇಕ ನಮ್ಮ ಮೂರ್ಖತನವೂ ಹೌದು. ಮತ್ತೊಬ್ಬರು ನಮ್ಮನ್ನು ಬಳಸಿಕೊಳ್ಳುತ್ತಿದ್ದರೆ, ನಾವು ಕೂಡಲೇ ಎಚ್ಚೆತ್ತು ಅಂಥವರಿಂದ ದೂರ ಸರಿಯಬೇಕು. ಆಡರೆ ಅದು ನಮಗೆ ಗೊತ್ತಾಗೋದು ಹೇಗೆ? ಇಲ್ಲಿವೆ 15 ಲಕ್ಷಣಗಳು… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಇನ್ನೊಬ್ಬರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ (manipulate) ಎನ್ನುವುದನ್ನ ಸೂಚಿಸುವ ಹದಿನೈದು ಲಕ್ಷಣಗಳು.
- ಅವರು ಯಾವತ್ತೂ ನಿಮ್ಮ ಕ್ಷಮೆ ಕೇಳುವುದಿಲ್ಲ, ತಪ್ಪು ಅವರದೇ ಆದಿದ್ದರೂ ಕೂಡ.
- ಅವರು ಯಾವಾಗಲೂ ಬರೀ ನೆಪ ಹೇಳುತ್ತಾರೆ ಅಥವಾ ಸುಳ್ಳು ಪ್ರಾಮಿಸ್ ಮಾಡುತ್ತಾರೆ.
- ಅವರು ನಿಮ್ಮ ದುರ್ಬಲತೆಯನ್ನ ನಿಮ್ಮ ವಿರುದ್ಧ ಬಳಸುತ್ತಾರೆ.
- ಅವರು ಇನ್ನೊಬ್ಬರಿಗೆ ಮನ್ನಣೆ ನೀಡುತ್ತ ನಿಮ್ಮನ್ನ ಕೇವಲ ಒಂದು ಆಪ್ಷನ್ ಆಗಿ ಇಟ್ಟುಕೊಳ್ಳುತ್ತಾರೆ.
- ಅವರು ನಿಮ್ಮನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾರೆ.
- ಅವರು ನಿಮ್ಮ ಗಿಲ್ಟ್ ನ (ಅಪರಾಧಿ ಭಾವ) ದುರ್ಬಳಕೆ ಮಾಡಿಕೊಳ್ಳುತ್ತಾರೆ.
- ಅವರು ನಿಮ್ಮ ಮಾತುಗಳನ್ನ ಟ್ವಿಸ್ಟ್ ಮಾಡಿ ಲಾಭ ಪಡೆಯಲು ಪ್ರಯತ್ನ ಮಾಡುತ್ತಾರೆ
- ಅವರು ನಿಮ್ಮ ಜೊತೆ ಮಾತು ನಿಲ್ಲಿಸಿ ಡಿಫೆನ್ಸಿವ್ ಆಗಿ ವರ್ತಿಸಲು ಶುರು ಮಾಡುತ್ತಾರೆ
- ಅವರು ತಮ್ಮ ಭಾವನೆಗಳನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಾರೆ.
- ಅವರು ನಿಮ್ಮ ಭಾವನೆಗಳ ಬಗ್ಗೆ, ತಿಳುವಳಿಕೆಯ ಬಗ್ಗೆ ನಿಮ್ಮೊಳಗೆ ಅಪನಂಬಿಕೆ ಹುಟ್ಟಿಸುತ್ತಾರೆ.
- ಅವರು ನಿಮ್ಮನ್ನು ಮೌನ ಶಿಕ್ಷೆಗೆ (silent treatment) ಗುರಿ ಮಾಡುತ್ತಾರೆ.
- ಅವರು ನಿಮಗೆ ನಿರಂತರವಾಗಿ ಸುಳ್ಳು ಹೇಳುತ್ತಿರುತ್ತಾರೆ.
- ನೀವು ತಬ್ಬಿಬ್ಬಾಗುವಂತೆ, ಕನ್ಫ್ಯೂಜ್ ಆಗಿರುವಂತೆ ನೋಡಿಕೊಳ್ಳುತ್ತಾರೆ.
- ನೀವು ಸದಾ ಹಗ್ಗದ ಮೇಲೆ ನಡೆಯುತ್ತಿರುವ ಭಾವವನ್ನು ನಿಮ್ಮಲ್ಲಿ ಹುಟ್ಟಿಸುತ್ತಾರೆ.
- ತಾವು ಪರಿಸ್ಥಿತಿಯ ಬಲಿಪಶು ಎನ್ನುವ ಸಂಗತಿಯನ್ನು ಸದಾ ನಿಮ್ಮ ತಲೆಯಲ್ಲಿ ತುಂಬುತ್ತಿರುತ್ತಾರೆ.
ಈ ಲಕ್ಷಣಗಳನ್ನು ಗುರುತಿಸುವುದು ಮತ್ತೆ ನೀವು ನಿಯಂತ್ರಣ ಸಾಧಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆ. ನೀವು ಇನ್ನೊಬ್ಬರಿಂದ ಗೌರವವನ್ನ, ಅಂತಃಕರಣವನ್ನ ಮತ್ತು ಒಂದು ಆರೋಗ್ಯಕರ ಸಂಬಂಧವನ್ನ ನಿರೀಕ್ಷಿಸಲು ಸದಾ ಅರ್ಹರು.

