ಕೇವಲ ಒಬ್ಬ ಡಾನ್ಸರ್ ನ ವಿಷಯ ಮಾತ್ರ ಯುನೀಕ್ ಆದದ್ದು. ಸದಾ ಡಾನ್ಸರ್, ಡಾನ್ಸ್ ನೊಡನೆ ಒಂದಾಗಿಯೇ ಇರುತ್ತಾನೆ. ಅವನು ಕುಣಿಯಲು ಶುರುಮಾಡಿದಾಗ ಕೂಡ, ಈ ಏಕತ್ವಕ್ಕೆ ಭಂಗ ಬರುವುದಿಲ್ಲ. ಇದು ಒಂದು ಬಿಡಿಯಲಾಗದ ಬಂಧ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ಧಾರ್ಮಿಕ ವ್ಯಕ್ತಿ ಅಸ್ತಿತ್ವವನ್ನು ಸಮಸ್ಯಾತ್ಮಕವಾಗಿ ನೋಡುವುದಿಲ್ಲ. ಅವನಿಗೆ ಅಸ್ತಿತ್ವ, ನಿಗೂಢ, ಪವಾಡ ಸದೃಶ್ಯ. ಅವನು ಅದರ ಆಳಕ್ಕೆ ಧುಮುಕುತ್ತಾನೆ, ಅದನ್ನು ಸೆಲೆಬ್ರೇಟ್ ಮಾಡುತ್ತಾನೆ, ಅದನ್ನು ಹಬ್ಬವಾಗಿ ನೋಡುತ್ತಾನೆ, ಹಾಡುತ್ತಾನೆ, ಕುಣಿಯುತ್ತಾನೆ, ಪ್ರೇಮಿಸುತ್ತಾನೆ, ಪ್ರಾರ್ಥಿಸುತ್ತಾನೆ, ಪೇಂಟ್ ಮಾಡುತ್ತಾನೆ, ಸಂಗೀತವನ್ನು ಸೃಷ್ಟಿ ಮಾಡುತ್ತಾನೆ ಆದರೆ ಅದನ್ನು ಸಾಲ್ವ್ ಮಾಡಲಿಕ್ಕೆ ಹೋಗುವುದಿಲ್ಲ.
ಅಸ್ತಿತ್ವಕ್ಕೆ ಸಂಗೀತಕಾರ ತತ್ವಜ್ಞಾನಿಗಿಂತ ಹತ್ತಿರವಾಗಿದ್ದಾನೆ. ಹಾಗೆಯೇ ಕವಿ ಕೂಡ ತತ್ವಜ್ಞಾನಿಗಿಂತ ಅಸ್ತಿತ್ವಕ್ಕೆ ಹತ್ತಿರ. ಆದರೆ ಒಬ್ಬ ಡಾನ್ಸರ್, ಕವಿ ಮತ್ತು ಸಂಗೀತಕಾರ ಇಬ್ಬರಿಗಿಂತ ಅಸ್ತಿತ್ವಕ್ಕೆ ಹತ್ತಿರ, ಯಾಕೆ ಹೀಗೆ?
ಏಕೆಂದರೆ ನೃತ್ಯದಲ್ಲಿ ನೀವು ಕರಗಿಹೋಗಿಬಿಡುತ್ತೀರ; ಡಾನ್ಸರ್ ಮಾಯವಾಗಿಬಿಡುತ್ತಾನೆ, ಕೇವಲ ಡಾನ್ಸ್ ಉಳಿದುಕೊಳ್ಳುತ್ತದೆ. ಡಾನ್ಸ್ ಅತ್ಯಂತ ಆಳವಾದ ಧ್ಯಾನಗಳಲ್ಲಿ ಒಂದು.
ಭಾರತದಲ್ಲಿ ನಾವು ದೇವರನ್ನು ಒಬ್ಬ ಡಾನ್ಸರ್ ರೂಪದಲ್ಲಿ ಕೂಡ ಪರಿಕಲ್ಪನೆ ಮಾಡಿಕೊಂಡಿದ್ದೇವೆ, ನಟರಾಜ. ಇದು ಬಹಳ ಮುಖ್ಯವಾದದ್ದು, ಏಕೆಂದರೆ ಒಬ್ಬ ಪೇಂಟರ್ ಒಮ್ಮೆ ಪೇಂಟ್ ಮಾಡಿದ ಮೇಲೆ ಅವನು ಪೇಂಟಿಂಗ್ ಇಂದ ಬೇರೆಯಾಗಿಬಿಡುತ್ತಾನೆ. ಪೇಂಟಿಂಗ್ ನ ಕಲ್ಪನೆ ಅವನೊಳಗೆ ಒಂದು ಬೀಜವಾಗಿ ಇದೆ, ಒಂದು ಕನಸಾಗಿ ಇದೆ. ಅಲ್ಲಿಯವರೆಗೆ ಅವನು ಪೇಂಟಿಂಗ್ ನೊಡನೆ ಒಂದಾಗಿದ್ದಾನೆ. ಆದರೆ ಅವನು ತನ್ನ ಈ ಕಲ್ಪನೆಯನ್ನು ಕ್ಯಾನವಾಸಿನ ಮೇಲೆ ಪೇಂಟ್ ಮಾಡಿದ ಕೂಡಲೇ ಪೇಂಟಿಂಗ್ ನಿಂದ ಬೇರೆಯಾಗಿಬಿಡುತ್ತಾನೆ. ಇಲ್ಲೊಂದು ದ್ವಿತ್ವ (duality) ಹುಟ್ಟಿಕೊಂಡಿದೆ. ಕವಿ ಮತ್ತು ಸಂಗೀತಗಾರರ ವಿಷಯದಲ್ಲಿಯೂ ಹೀಗೆಯೇ.
ಕೇವಲ ಒಬ್ಬ ಡಾನ್ಸರ್ ನ ವಿಷಯ ಮಾತ್ರ ಯುನೀಕ್ ಆದದ್ದು. ಸದಾ ಡಾನ್ಸರ್, ಡಾನ್ಸ್ ನೊಡನೆ ಒಂದಾಗಿಯೇ ಇರುತ್ತಾನೆ. ಅವನು ಕುಣಿಯಲು ಶುರುಮಾಡಿದಾಗ ಕೂಡ, ಈ ಏಕತ್ವಕ್ಕೆ ಭಂಗ ಬರುವುದಿಲ್ಲ. ಇದು ಒಂದು ಬಿಡಿಯಲಾಗದ ಬಂಧ. ಯಾವಾಗ ಒಬ್ಬ ಡಾನ್ಸರ್, ಡಾನ್ಸ್ ಬಗ್ಗೆ ಯೋಚಿಸುತ್ತಿರುತ್ತಾನೋ ಆಗ ಒಂದು ಡ್ಯೂಯಾಲಿಟಿ ಹುಟ್ಟಿಕೊಳ್ಳಬಹುದು, ಆಗ ಮಾತ್ರ ಡಾನ್ಸ್ ಮತ್ತು ಡಾನ್ಸರ್ ಬೇರೆ ಬೇರೆ, ಆಗ ಅಲ್ಲೊಂದು ಸೂಕ್ಷ್ಮ ದ್ವೀತ್ವ ಇದೆ. ಆದರೆ ಅವನು ಡಾನ್ಸ್ ಮಾಡಲು ಶುರು ಮಾಡಿದ ಕೂಡಲೇ ಈ ಡ್ಯೂಯಾಲಿಟಿ ಮಾಯವಾಗಿಬಿಡುತ್ತದೆ. ನಂತರ ಡಾನ್ಸರೇ ಡಾನ್ಸ್. ಆಗ ಡಾನ್ಸರ್ ಡಾನ್ಸ ಇಂದ ಬೇರೆಯಾಗಿಲ್ಲ, ಡಾನ್ಸ್, ಡಾನ್ಸರ್ ಇಂದ ಹೊರತಾಗಿಲ್ಲ. ಇದು ಒಂದು ಮಿಸ್ಟಿಕಲ್ ಯೂನಿಯನ್ (Unio Mystica).
ಭಗವಂತ ಒಬ್ಬ ಡಾನ್ಸರ್. ಅವನು ಜಗತ್ತನ್ನು ಪೇಂಟ್ ಮಾಡಿಲ್ಲ, ಹಾಗೇನಾದರೂ ಆಗಿದ್ದರೆ ಅವನು ಜಗತ್ತಿನಿಂದ ಹೊರತಾಗಿಬಿಡುತ್ತಿದ್ದ. ಜಗತ್ತು ಅವನ ಕಾವ್ಯ ಅಲ್ಲ, ಅವನ ಸಂಗೀತ ಅಲ್ಲ. ಅಕೆಂದರೆ ಅವನು ಜಗತ್ತಿನೊಳಗಿದ್ದಾನೆ, ಅವನೇ ಜಗತ್ತು ಆಗಿದ್ದಾನೆ . In this very moment, ಈ ಹಸಿರು ಮರಗಳು, ಮತ್ತು ತನ್ನ ಬಂಗಾರದ ಕಿರಣಗಳನ್ನು ಅವುಗಳ ಮೂಲಕ ಹಾಯಿಸುತ್ತಿರುವ ಸೂರ್ಯ, ಮತ್ತು ಹಕ್ಕಿಯ ಕುಹೂ, ಮತ್ತು ನೀನು ಮೌನದಲ್ಲಿ ಕುಳಿತಿರುವುದು, ನನ್ನ ಜೊತೆ ಯಾವ ಕಾರಣವಿಲ್ಲದೆ ಒಂದಾಗಿರುವುದು, ಈ ಕ್ಷಣವನ್ನು ಆಸ್ವಾದಿಸುತ್ತ, ಆನಂದಿಸುತ್ತ. This is it.
Source: Osho/ The Secret /Ch 8

