ಸಾಕ್ರೆಟಿಸ್ ನನ್ನು ಕೊಂದಿದ್ದು ಯಾಕೆ?

ನ್ಯಾಯಾಲಯ ಸಾಕ್ರೆಟಿಸ್ ಗೆ ಮರಣದ ಶಿಕ್ಷೆ ಘೋಷಿಸಿತ್ತು : ಮತ್ತು ಇತಿಹಾಸದ ಅತ್ಯಂತ ಶ್ರೇಷ್ಠ ಮೈಂಡ್ ಗಳಲ್ಲಿ ಒಬ್ಬನಾದ ಸಾಕ್ರೆಟಿಸ್ ವಿಷ ಕುಡಿದು ಸತ್ತ! ಯಾಕೆ ಹೀಗಾಯ್ತು? ಓದಿ… ~ ಸಂಗ್ರಹಾನುವಾದ । ಚಿದಂಬರ ನರೇಂದ್ರ

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟಿಸ್ ವಾಸ್ತವದಲ್ಲಿ ಅಥೆನ್ಸ್ ನಗರದಲ್ಲಿ ಅತ್ಯಂತ ದ್ವೇಷಕ್ಕೆ ಒಳಗಾಗಿದ್ದ ವ್ಯಕ್ತಿ.

ಯುವಜನಾಂಗವನ್ನು ಭ್ರಷ್ಟ ಗೊಳಿಸಿದ ಆರೋಪ ಅವನ ಮೇಲಿತ್ತು.

ಎಲಿಯಾದ ಜನಪ್ರಿಯ ನ್ಯಾಯಾಲಯ ಸಾಕ್ರೆಟಿಸ್ ಗೆ ಮರಣದ ಶಿಕ್ಷೆ ಘೋಷಿಸಿತ್ತು : ಮತ್ತು ಇತಿಹಾಸದ ಅತ್ಯಂತ ಶ್ರೇಷ್ಠ ಮೈಂಡ್ ಗಳಲ್ಲಿ ಒಬ್ಬನಾದ ಸಾಕ್ರೆಟಿಸ್ ವಿಷ ಕುಡಿದು ಸತ್ತ.

ಆದರೆ ಯಾಕೆ ಇದೆಲ್ಲ?

ಸಾಕ್ರೆಟಿಸ್ ಅಪಾಯಕಾರಿ ಕೆಲಸಗಳನ್ನೆನೂ ಮಾಡುತ್ತಿರಲಿಲ್ಲ. ಆತ ಎಲ್ಲರ ಜೊತೆ, ಉಳ್ಳವರ ಜೊತೆ, ಹರೆಯದವರ ಜೊತೆ, ಬಡವರ ಜೊತೆ, ಸಾಮಾನ್ಯರ ಜೊತೆ ಮಾತನಾಡುತ್ತಿದ್ದ. ಎಲ್ಲರಿಗೂ ಪ್ರಶ್ನೆ ಕೇಳುತ್ತಿದ್ದ.

ಆದರೆ ಅವನ ಪ್ರಶ್ನೆಗಳಲ್ಲಿನ ಮುಕ್ತತೆ, ಸರಳತೆ, ಶಾರ್ಪನೆಸ್, ತನ್ನ ಜೊತೆ ಮಾತನಾಡುತ್ತಿದ್ದವರ ನಂಬಿಕೆಗಳನ್ನು ಡೆಮಾಲಿಶ್ ಮಾಡುವಂತಿತ್ತು, ಅವರು ಸ್ವತಃ ತಮ್ಮ ಸತ್ಯಗಳನ್ನ, ಪೊಳ್ಳುತನವನ್ನ, ತಮ್ಮ ತರ್ಕದ ಅಸಂಗತತೆಯನ್ನ ಪ್ರಶ್ನಿಸಿಕೊಳ್ಳುವಂತೆ ಮಾಡುವಂತಿತ್ತು.

ಅವನು ನಮಗೆ ಪ್ರಶ್ನೆ ಮಾಡುವುದನ್ನ ಸಂಶಯದಿಂದ ನೋಡುವುದನ್ನ ಕಲಿಸಿದ.

ಅವನಿಗೆ ಭ್ರಷ್ಟ ರಾಜಕಾರಣಿಗಳನ್ನ, ಸುಳ್ಳು ಗುರುಗಳನ್ನ ಯಾರು ಸುಳ್ಳುಗಳನ್ನ ಹರಡುತ್ತಾರೋ ಅವರ ಡಾಂಭಿಕತೆಯನ್ನ ಎಕ್ಸಪೋಸ್ ಮಾಡುವ ಎದೆಗಾರಿಕೆಯಿತ್ತು.

ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಮತ್ತು ಯಥಾಸ್ಥಿತಿಯನ್ನ ಚಾಲೇಂಜ್ ಮಾಡಿದ್ದಕ್ಕಾಗಿ ಅವನು ಅಪಾಯಕಾರಿಯಂತೆ ಕಾಣಿಸತೊಡಗಿದ, ಅವನನ್ನು ನಾಶ ಮಾಡಲೇಬೇಕಾಗಿತ್ತು, ಈ ಕಾರಣವಾಗಿಯೇ ಅವನಿಗೆ ಮರಣದ ಶಿಕ್ಷೆ ನೀಡಲಾಯಿತು.

ವಿಚಾರಣೆಯ ವೇಳೆಯಲ್ಲಿ ಸಾಕ್ರೆಟಿಸ್ ಯಾವ ಭಿಕ್ಷೆ ಯಾವ ದಯೆಯನ್ನೂ ಬಿಡಲಿಲ್ಲ. ತನ್ನ ಪರವಾಗಿ ವಾದ ಮಾಡಲು ಮುಂದೆಬಂದವರ ಸಹಾಯವನ್ನೂ ನಿರಾಕರಿಸಿದ.

ಸಾಕ್ರೆಟಿಸ್ ನ ವಿಚಾರಣೆ ನಮಗೆ ಕಲಿಸುವುದೇನೆಂದರೆ, ಪ್ರಜ್ಞಾವಂತಿಕೆ ಬಹಳ ಇನ್ ಕನ್ವೀನಿಯಂಟ್ ಆಗಿರುವಂಥದು. ಜನರಿಗೆ ಭ್ರಮೆಗಳು ಬೇಕು ಸತ್ಯಗಳಲ್ಲ. ಅವರನ್ನ ನೀವು ಪ್ರಶ್ನಿಸಬಾರದು ಸುಮ್ಮನೇ ಹೊಗಳಬೇಕು ಮತ್ತು ಈ ಅಜ್ಞಾನದಲ್ಲಿಯೇ ಅವರು ಹಾಯಾಗಿ ಇರಲು ಬಯಸುತ್ತಾರೆ.

ಜಾಣ ಮನುಷ್ಯರು ಮುಜುಗರ ಉಂಟು ಮಾಡುತ್ತಾರೆ.

ಅಂಥವರನ್ನು ನಿಷೇಧಿಸಬೇಕು, ತಿರಸ್ಕರಿಸಬೇಕು, ಬಹಿಷ್ಕಾರ ಹಾಕಬೇಕು ಏಕೆಂದರೆ ಅವರು ಜನರ ಹಾಯಾದ ನಿದ್ರೆಗೆ ಭಂಗ ಉಂಟುಮಾಡಿದ್ದಾರೆ, ಅಧಿಕಾರ ಕೇಂದ್ರಗಳಿಗೆ ಕಹಿಯಾದ ಪ್ರಶ್ನೆ ಕೇಳುತ್ತಾರೆ, ಮತ್ತು ಈ ಎಲ್ಲ ಸಂಸ್ಥೆಗಳ ಸುಳ್ಳನ್ನ, ಪೊಳ್ಳುತನವನ್ನ ಬಯಲಿಗೆಳೆಯುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.