ಬದುಕಿನ ಒಳ್ಳೆಯ ಸಂಗತಿಯೆಂದರೆ ನಿಮ್ಮ ಎಲ್ಲ ಯೋಜನೆಗಳೊಂದಿಗೆ, ಕನಸುಗಳೊಂದಿಗೆ ಮುನ್ನಡೆಯುವುದು. ಬದುಕನ್ನ ಅಪ್ಪಿಕೊಂಡು ಪ್ರತಿದಿನ ಉತ್ಕಟವಾಗಿ ಬದುಕುವುದು… ~ ಚಾರ್ಲೀ ಚಾಪ್ಲಿನ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಬಹುತೇಕ ಕ್ಷಮಿಸಲು ಸಾಧ್ಯವೇ ಇಲ್ಲದಂಥ ತಪ್ಪುಗಳನ್ನ ಕ್ಷಮಿಸಿದ್ದೇನೆ.
ನಾನು ರಿಪ್ಲೇಸ್ ಮಾಡಲು ಸಾಧ್ಯವೇ ಇರದಂತ ಜನರನ್ನ ರಿಪ್ಲೇಸ್ ಮಾಡಲು ಪ್ರಯತ್ನಿಸಿದ್ದೇನೆ ಮತ್ತು ಮರೆಯಲು ಆಗದೇ ಇರದಂತ ಜನರನ್ನು ಮರೆಯಲು ಪ್ರಯತ್ನಿಸಿದ್ದೇನೆ.
ನಾನು ಇಂಪಲ್ಸಿವ್ ಆಗಿ ಪ್ರತಿಕ್ರಿಯಿಸಿದ್ದೇನೆ. ಯಾವ ಜನರಿಂದ ನಿರಾಶನಾಗುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆನೋ ಅಂಥವರಿಂದ ನಿರಾಶೆಗೊಂಡಿದ್ದೇನೆ. ಆದರೆ ನಾನು ಪ್ರೀತಿ ಮಾಡುವವರನ್ನ ನಾನು ಕೂಡ ನಿರಾಶೆಗೊಳಿಸಿದ್ದೇನೆ. ಅನುಚಿತ ಸಂದರ್ಭಗಳಲ್ಲಿ ನಕ್ಕು ತಪ್ಪು ಮಾಡಿದ್ದೇನೆ.
ನಾನು ಮಾಡಿಕೊಂಡ ಗೆಳೆಯರು ಈಗ ಜೀವದ ಗೆಳೆಯರಾಗಿದ್ದಾರೆ.
ನಾನು ಖುಶಿಯ ಕಾರಣವಾಗಿ ಕಿರುಚಿದ್ದೇನೆ, ಕುಣಿದು ಕುಪ್ಪಳಿಸಿದ್ದೇನೆ. ನಾನು ಪ್ರೀತಿಸಿದ್ದೇನೆ ಮತ್ತು ಪ್ರೀತಿಸಲ್ಪಟ್ಟಿದ್ದೇನೆ ಕೂಡ.
ಆದರೆ ನಾನು ತಿರಸ್ಕೃತನೂ ಆಗಿದ್ದೇನೆ ಮತ್ತು ನನ್ನ ಪ್ರೀತಿಸಿದವರನ್ನ ಮರಳಿ ಪ್ರೀತಿಸುವುದು ನನಗೆ ಸಾಧ್ಯವಾಗಿಲ್ಲ.
ನಾನು ಕೇವಲ ಪ್ರೀತಿಗಾಗಿ ಬದುಕಿದ್ದೇನೆ ಮತ್ತು ಚಿರಂತನ ಪ್ರೀತಿಗಾಗಿ ಪ್ರಮಾಣಗಳನ್ನು ಮಾಡಿದ್ದೇನೆ. ಮತ್ತೆ ಮತ್ತೆ ನನ್ನ ಹೃದಯ ಒಡೆದು ಹೋಗಿದೆ ! ಸಂಗೀತ ಕೇಳುವಾಗ, ಹಳೆಯ ಫೋಟೋಗಳನ್ನು ನೋಡುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಕೇವಲ ಅವರ ಧ್ವನಿ ಕೇಳುವ ಸಲುವಾಗಿ ಅವರಿಗೆ ಫೋನ್ ಮಾಡಿದ್ದೇನೆ. ನಗು ಕಾರಣವಾಗಿ ಪ್ರೀತಿಯಲ್ಲಿ ಬಿದ್ದಿದ್ದೇನೆ.
ಕೆಲವೊಮ್ಮೆ ಕೆಲವರನ್ನು ಎಷ್ಟು ಮಿಸ್ ಮಾಡಿಕೊಂಡಿದ್ದೆನೆಂದರೆ ಎಲ್ಲಿ ನಾನು ಸತ್ತೇ ಹೋಗಿಬಿಡುತ್ತೇನೋ ಎಂದು ಅನಿಸಿತ್ತು.
ಕೆಲವೊಮ್ಮೆ ಎಲ್ಲಿ ನನಗೆ ಅತ್ಯಂತ ಸ್ಪೆಷಲ್ ಆದವರನ್ನ ಕಳೆದುಕೊಂಡುಬಿಡುತ್ತೇನೋ ಎಂದು ಭಯಪಟ್ಟಿದ್ದೇನೆ (ಕೂನೆಗೂ ಅದು ಹಾಗೇ ಆಯಿತು)
ಆದರೂ ನಾನು ಬದುಕಿದೆ; ಮತ್ತು ಇಂದು ಕೂಡ ನಾನು ಪ್ರತಿದಿನ ಬದುಕುತ್ತಿದ್ದೇನೆ!
ನಾನು ಬದುಕನ್ನ ಕೇವಲ ದಾಟಿ ಹೋಗುತ್ತಿಲ್ಲ …… ನೀವು ಕೂಡಾ ಹಾಗೆ ಹೋಗಬಾರದು. ಬದುಕಬೇಕು!
ಬದುಕಿನ ಒಳ್ಳೆಯ ಸಂಗತಿಯೆಂದರೆ ನಿಮ್ಮ ಎಲ್ಲ ಯೋಜನೆಗಳೊಂದಿಗೆ, ಕನಸುಗಳೊಂದಿಗೆ ಮುನ್ನಡೆಯುವುದು. ಬದುಕನ್ನ ಅಪ್ಪಿಕೊಂಡು ಪ್ರತಿದಿನ ಉತ್ಕಟವಾಗಿ ಬದುಕುವುದು. ಸೋತರೂ ನಂಬಿಕೆ ಕಳೆದುಕೊಳ್ಳದಿರುವುದು, ಗೆದ್ದಾಗಲೆಲ್ಲ ಕೃತಜ್ಞರಾಗಿರುವುದು.
ಈ ಎಲ್ಲವೂ ಯಾಕೆಂದರೆ, ಯಾರು ತಮಗೆ ಬೇಕಾದುದನ್ನು ಧೈರ್ಯದಿಂದ ಬೆನ್ನಟ್ಟಿ ಹೋಗುತ್ತಾರೋ ಈ ಜಗತ್ತು ಕೇವಲ ಅವರಿಗಾಗಿದೆ.
ಮತ್ತು ಯಾಕೆಂದರೆ ಬದುಕು ನಿಜವಾಗಿಯೂ ತುಂಬ ಚಿಕ್ಕದು insignificant ಆಗಲು.

