ನಾವು ಅತ್ಯುತ್ತಮ ಗುಣಮಟ್ಟದ ವ್ಯಕ್ತಿಗಳಾಗಲು ಬೇಕಾಗುವ ಕೆಲವು ಸಂಗತಿಗಳಿಗೆ ಯಾವ ವಿಶೇಷ ಸ್ಕಿಲ್, ಯಾವ ವಿಶೇಷ ಪ್ರತಿಭೆ ಬೇಕಾಗಿಲ್ಲ. ಧನಾತ್ಮಕವಾಗಿ, ಸೃಜನಶೀಲವಾಗಿ ಬದುಕುವುದಕ್ಕೆ ನಾವು ಯಾರಿಗೂ ಕಾಯಬೇಕಾಗಿಲ್ಲ, ತಕ್ಷಣ ನಾವು ಈ ಹಾದಿಯಲ್ಲಿ ಪ್ರಯಾಣ ಆರಂಭಿಸಬಹುದು ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಬದುಕಿನ ಕೆಲ ಅತ್ಯುತ್ತಮ ಸಂಗತಿಗಳು ನಮಗೆ ಯಾವುದೆ ಖರ್ಚು ಇಲ್ಲದಂತೆ ಸಿಗುವಂಥವು. ಪ್ರೇಮ, ಕುಟುಂಬ, ಅಂತಃಕರಣ, ವಿಶ್ವಾಸ ಈ ಯಾವುದಕ್ಕೂ ನಾವು ಹಣ ಖರ್ಚು ಮಾಡಬೇಕಿಲ್ಲ. ಇವು ನಮಗೆ ಉಚಿತವಾಗಿ ದೊರೆಯುತ್ತವೆಯಾದರೂ ಇವುಗಳ ಮೌಲ್ಯ ಅಪರಿಮಿತ. ಬದುಕಿನ ಇನ್ನೂ ಎಷ್ಟೋ ಅಮೂಲ್ಯ ಸಂಗತಿಗಳೂ ನಮಗೆ ದೊರಕುವುದು ಉಚಿತವಾಗಿಯೇ.
ಮೇಲಿಂದ ಮೇಲೆ ನಾವು ನೆನಪಿಸಿಕೊಳ್ಳುತ್ತಿರಬೇಕಾದ ಸಂಗತಿಯೆಂದರೆ, ಕರುಣೆಯಿಂದ ಇರುವುದಕ್ಕೆ, ವಿನಯಶೀಲರಾಗಿರುವುದಕ್ಕೆ ನಾವು ಯಾವ ಖರ್ಚು ಮಾಡಬೇಕಿಲ್ಲ. ಆದರೆ ಇವು ನಮಗೆ ಧನಾತ್ಮಕವಾಗಿ ತುಂಬು ಜೀವನ ಬಾಳುವುದಕ್ಕೆ ನಮಗೆ ಬದುಕಿನುದ್ದಕ್ಕೂ ಸಹಾಯ ಮಾಡುತ್ತವೆ. ನಾವು ಅತ್ಯುತ್ತಮ ಗುಣಮಟ್ಟದ ವ್ಯಕ್ತಿಗಳಾಗಲು ಬೇಕಾಗುವ ಕೆಲವು ಸಂಗತಿಗಳಿಗೆ ಯಾವ ವಿಶೇಷ ಸ್ಕಿಲ್, ಯಾವ ವಿಶೇಷ ಪ್ರತಿಭೆ ಬೇಕಾಗಿಲ್ಲ. ಧನಾತ್ಮಕವಾಗಿ, ಸೃಜನಶೀಲವಾಗಿ ಬದುಕುವುದಕ್ಕೆ ನಾವು ಯಾರಿಗೂ ಕಾಯಬೇಕಾಗಿಲ್ಲ, ತಕ್ಷಣ ನಾವು ಈ ಹಾದಿಯಲ್ಲಿ ಪ್ರಯಾಣ ಆರಂಭಿಸಬಹುದು.
ಪರಿಪೂರ್ಣ ಧನಾತ್ಮಕ ಬದುಕಿಗಾಗಿ ಬೇಕಾಗುವ; ಯಾವುದಕ್ಕೆ ಯಾವ ವಿಶೇಷ ಪ್ರತಿಭೆಯ ಅವಶ್ಯಕತೆ ಇಲ್ಲವೋ, ಯಾವುದಕ್ಕಾಗಿ ನಾವು ಏನೂ ಖರ್ಚು ಮಾಡಬೇಕಿಲ್ಲವೂ ಅಂಥ ೧೦ ಅಮೂಲ್ಯ ಸಂಗತಿಗಳನ್ನು ಕೆಳಗೆ ಲಿಸ್ಟ್ ಮಾಡಲಾಗಿದೆ.
- ಸಮಯ ಪರಿಪಾಲನೆ ಮಾಡುವುದು
- ಪ್ರಯತ್ನ ಮಾಡುವುದು
- ಕಾರುಣ್ಯವನ್ನು ರೂಢಿಸಿಕೊಳ್ಳುವುದು
- ಧನಾತ್ಮಕವಾಗಿ ಯೋಚಿಸುವುದು
- ಆಸಕ್ತಿ ಮತ್ತು ಉತ್ಕಟತೆಗಳನ್ನು ಬೆಳೆಸಿಕೊಳ್ಳುವುದು
- ಮುಕ್ತ ಮನಸ್ಸು ಹೊಂದುವುದು ಮತ್ತು ಕಲಿಕೆಗೆ ತೆರೆದುಕೊಂಡಿರುವುದು
- ನೈತಿಕ ಮೌಲ್ಯಗಳನ್ನು ಹೊಂದಿರುವುದು
- ಪ್ರಾಮಾಣಿಕರಾಗಿರುವುದು
- ಕುಟುಂಬ ಮತ್ತು ಗೆಳೆಯರಿಗಾಗಿ ಸಮಯ ಕಾಯ್ದಿಡುವುದು.
- ಇನ್ನೊಬ್ಬರ ಬಗ್ಗೆ ಕಾಳಜಿ ಹೊಂದುವುದು.
ಮೇಲಿನ ೧೦ ಗುಣಲಕ್ಷಣಗಳು ಮತ್ತು ರೂಢಿಗಳಲ್ಲಿ ನೀವು ಈಗಾಗಲೇ ಗಮನಿಸಿರಬಹುದಾದ ಸಂಗತಿಯೆಂದರೆ, ಇವುಗಳಿಗೆ ನೀವು ಯಾವ ಖರ್ಚು ಮಾಡಬೇಕಿಲ್ಲ ಆದರೆ ನಿಮ್ಮ mindful action – being, having & making ಬಹಳ ಅವಶ್ಯಕ. ಧನಾತ್ಮಕತೆಯನ್ನು ರೂಢಿಸಿಕೊಳ್ಳುವಲ್ಲಿ ನಿಮ್ಮ ಕ್ರಿಯಾತ್ಮಕ ಭಾಗವಹಿಸುವಿಕೆ ಅತ್ಯಂತ ಅವಶ್ಯಕವಾದದ್ದು, ಏಕೆಂದರೆ ಇದಕ್ಕೆ ನಿಮ್ಮ ಪ್ರಜ್ಞಾಪೂರ್ವಕ ಆಲೋಚನೆಗಳು ಮತ್ತು ಧನಾತ್ಮಕ ಕ್ರಿಯೆ ಬಹಳ ಮುಖ್ಯ.
ಈ ಹತ್ತು ಸಂಗತಿಗಳಲ್ಲಿ ಯಾವೆಲ್ಲವನ್ನು ನೀವು ಈಗಾಗಲೇ ಪ್ರ್ಯಾಕ್ಟೀಸ್ ಮಾಡುತ್ತಿದ್ದೀರಿ? ಈ ಎಲ್ಲವನ್ನೂ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇವತ್ತು ಒಳ್ಳೆಯ ಮುಹೂರ್ತ ಇದೆ. ಧನಾತ್ಮಕತೆಯ ಪ್ರವಾಹ ಈಗಲೇ ಶುರುವಾಗಲಿ.

