ಅಕಸ್ಮಾತ್ ಈ ಕೆಳಗಿನ ನಾಲ್ಕು ವಲಯಗಳಲ್ಲಿ ನೀವೇನಾದರೂ ಸಿಕ್ಕಿಹಾಕಿಕೊಂಡಿದ್ದರೆ, ದಯವಿಟ್ಟು ಹೊರಬನ್ನಿ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
ನೀವು ಕಷ್ಟಪಡುತ್ತಿದ್ದೀರಾ? ನಿಮ್ಮ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗ್ತಾ ಇಲ್ವಾ? ಹಾಗಾದರೆ ನಿಮ್ಮ ಬದುಕನ್ನ ಸೂಕ್ಷ್ಮವಾಗಿ ಗಮನಿಸಿ. ಅಕಸ್ಮಾತ್ ಈ ಕೆಳಗಿನ ನಾಲ್ಕು ವಲಯಗಳಲ್ಲಿ ನೀವೇನಾದರೂ ಸಿಕ್ಕಿಹಾಕಿಕೊಂಡಿದ್ದರೆ, ದಯವಿಟ್ಟು ಹೊರಬನ್ನಿ. ಆಗ ಯಶಸ್ಸು ಕಟ್ಟಿಟ್ಟಬುತ್ತಿ.
- Comfort Zone : ಯಾವುದೇ ಒಂದು ಅರ್ಥವತ್ತಾದ ಗುರಿಯನ್ನು ತಲುಪಲು ನೀವು ಕ್ಯಾಲ್ ಕುಲೇಟೆಡ್ ರಿಸ್ಕ್ ಕೆಗೆದುಕೊಳ್ಳಲೇ ಬೇಕು. ಎಲ್ಲ ಕಡೆ ಕೈ ಮುಗಿದುಕೊಂಡು ದೀನರಾಗುತ್ತ ಸಮಯ ಹಾಳು ಮಾಡಬೇಡಿ. ನಿಮ್ಮ ಎಲ್ಲ ಸಂಕೋಚಗಳನ್ನ, ಲಿಮಿಟೇಶನ್ ಗಳನ್ನ ಹಿಂದೆ ಸರಿಸಿ ಧೈರ್ಯ ದಿಂದ ಮುನ್ನುಗ್ಗಿ. ನೀವು ಕಲಿತದ್ದು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯ ನಿಮ್ಮ ಮನೋಭಾವ (attitude). ಜನ ನಿಮ್ಮ attitude ನ ಗಮನಿಸುತ್ತಿರುತ್ತಾರೆ. ಧನಾತ್ಮಕವಾಗಿ ಯೋಚಿಸಿ ಆಗ ಹೊಸ ಹೊಸ ಅವಕಾಶಗಳು ನಿಮಗೆ ಕಾಣಿಸಲು ಶುರುವಾಗುತ್ತದೆ.
- Blame zone : ನಿಮ್ಮ ತಂದೆ ತಾಯಿಯನ್ನ, ನಿಮ್ಮ ಗಂಡ/ಹೆಂಡತಿ, ಮಕ್ಕಳನ್ನ, ಗೆಳೆಯರನ್ನ ಮತ್ತು ಕುಟುಂಬದ ಇತರ ಸದಸ್ಯರನ್ನ, ಅವರು ನಿಮಗೆ ಸಹಾಯ ಮಾಡಲಿಲ್ಲ ಎಂದು ದೂಷಿಸುತ್ತ ಕುಳಿತುಕೊಳ್ಳುವಲ್ಲಿ ಯಾವ ಅರ್ಥವಿಲ್ಲ. ನಿಮ್ಮ ಅಧಿಕಾರಗಳಿಗಾಗಿ ಗಟ್ಟಿಯಾಗಿ ದನಿ ಎತ್ತಿ. ಕಷ್ಟಪಟ್ಟು ಕೆಲಸ ಮಾಡಿ, ನಿಮ್ಮ ಸೋಲುಗಳ, ಗೆಲುವುಗಳ ಜವಾಬ್ದಾರಿಯನ್ನ ನೀವೇ ಹೊತ್ತುಕೊಳ್ಳಿ.
- Pity Zone : ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ತಂತ್ರಗಳನ್ನು ಬಳಸುತ್ತ ನಾಟಕೀಯವಾಗಿ ವ್ಯವಹರಿಸಬೇಡಿ. ಇದು ಕಠಿಣ ಜಗತ್ತು, ನಿಮ್ಮ ಸ್ಕಿಲ್ ಗಳನ್ನ, ದೊರೆತ ಅವಕಾಶಗಳನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತ ಸೃಜನಶೀಲವಾಗಿ ಇನೋವೇಟ್ ಮಾಡಿ. ಯಾರ ಮೇಲೂ ಅವಲಂಬಿಸದೇ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ. ನಿಮ್ಮ ಪ್ರಯತ್ನ ಗಳನ್ನು ಗಮನಿಸುವ ಜನ ಖಂಡಿತ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ( ಸಕಾರಣವಾಗಿ ಅಥವಾ ಯಾವುದೇ ಕಾರಣವಿಲ್ಲದೆ). ಪ್ರಯತ್ನ ವಿಲ್ಲದಿದ್ದಾಗ ಯಾರು ತಾನೇ ಸಹಾಯಮಾಡಬಲ್ಲರು?
- Hostage Zone : ನಿಮ್ಮ ಸಂಬಂಧಗಳಲ್ಲಿ ಇನ್ನೊಬ್ಬರು ನಿಮ್ಮನ್ನು ಕಾಲೊರೆಸುವ ಚಾಪೆಯಂತೆ ಟ್ರೀಟ್ ಮಾಡುವುದಕ್ಕೆ ಯಾವತ್ತೂ ಅವಕಾಶ ಮಾಡಿಕೊಡಬೇಡಿ. ನೀವು ಪ್ರಾಮಾಣಿಕ ಪ್ರಯತ್ನ ಮಾಡುತ್ತ, ಎಲ್ಲ ತ್ಯಾಗಗಳನ್ನು ಮಾಡುತ್ತಿರುವಾಗಲೂ ಜನ ನಿಮ್ಮನ್ನು ತುಚ್ಛವಾಗಿ ಕಾಣುತ್ತ ಕಡೆಗಣಿಸುತ್ತಿದ್ದರೆ, ನೀವು ಅವರ ಒತ್ತೆಯಾಳಾಗಿ ಮುಂದುವರೆಸಬೇಡಿ. ನಿಮ್ಮ ಗೌರವ, ಘನತೆಯ ಗಡಿಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಅವರು ಅದನ್ನು ಪಾಲಿಸದಿದ್ದ ಪಕ್ಷದಲ್ಲಿ ಅಂಥ ಸಂಬಂಧ, ವ್ಯವಹಾರಗಳನ್ನು ಧಿಕ್ಕರಿಸುತ್ತ ಹೊರ ಬನ್ನಿ.
ಇದು ಅಸಮಾನ ಜಗತ್ತು. ಶೋಷಕರು ತಮ್ಮ ಲಾಭಕ್ಕಾಗಿ ಬಲಿಪಶುಗಳನ್ನು ಹುಡುಕುತ್ತಿರುತ್ತಾರೆ. ಇಂಥ ಎಲ್ಲ ಶೋಷಣೆಯನ್ನ ಗಮನಿಸಿ, ವಿರೋಧಿಸಿ. ನಿಮ್ಮ ಹಕ್ಕುಗಳನ್ನು ಧೈರ್ಯದಿಂದ ಘೋಷಿಸುತ್ತ, ಕ್ಲೇಮ್ ಮಾಡಿ. ಈ ಯಾವ ವಲಯಗಳಲ್ಲೂ ನಿಮ್ಮನ್ನು ಗುರುತಿಸಿಕೊಳ್ಳದೇ ಸಂಘಟಿತರಾಗಿ.

