ಬೌದ್ಧ ದೃಷ್ಟಿಕೋನದಿಂದ ಕ್ರಿಶ್ಚಿಯಾನಿಟಿಯನ್ನ ಆಚರಿಸೋದು ಹೇಗೆ?

ಹೇಗೆ ಬುದ್ಧನ ಆದರ್ಶಗಳನ್ನು ಆಚರಿಸಲು ಸಂಘ ನಮಗೆ ಮಾರ್ಗದರ್ಶಿಯೋ ಹಾಗೆ ಜೀಸಸ್ ನ ಆದರ್ಶಗಳನ್ನು ಆಚರಣೆಗೆ ತರಲು ಚರ್ಚ ಒಂದು ವಾಹಕ. ಚರ್ಚ್, ಜೀಸಸ್ ನ ಹೋಪ್ ಆದರೆ ಸಂಘ, ಬುದ್ಧನ ಭರವಸೆ. ಚರ್ಚ್ ಮತ್ತು ಸಂಘದ ಆಚರಣೆಗಳ ಮೂಲಕ ಅವರ ಟೀಚಿಂಗ್ ಗಳು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧ ಮತ್ತು ಜೀಸಸ್ ತಮ್ಮ ಬದುಕಿನಲ್ಲಿ ನಡೆದುಕೊಂಡ ರೀತಿ ಯಾವತ್ತೂ ನಮ್ಮ ಆಚರಣೆಗಳಿಗೆ ಆದರ್ಶವಾಗಬೇಕು. ಸೂತ್ರಗಳು ಬುದ್ಧನ ಬದುಕಿನ ಪಾಠಗಳಲ್ಲ. ಬುದ್ಧನ ನಿಜವಾದ ಪಾಠ ನಮಗೆ ದಕ್ಕಬೇಕಾದರೆ ನಾವು ಬುದ್ಧನ ಬದುಕು ಮತ್ತು ಕ್ರಿಯೆಗಳನ್ನು ಅನುಕರಿಸಬೇಕು. ಕ್ರಿಶ್ಚಿಯಾನಿಟಿಯ ಬಗೆಯೂ ಇದು ನಿಜ.

ಸುವಾರ್ತೆಗಳು (Gospel) ಅವು ಬರಹದಲ್ಲಿಯೇ ಇರಲಿ ಅಥವಾ ಓರಲ್ ಸಂಪ್ರದಾಯದಲ್ಲಿಯೇ ಇರಲಿ ಅವು ಜೀಸಸ್ ನ ನಿಜವಾದ ಟೀಚಿಂಗ್ ಅಲ್ಲ. ಜೀಸಸ್ ಯಾವ ರೀತಿ ಬದುಕಿದನೋ ಅದು ನಮಗೆ ಆಚರಣೆಯ ಪಾಠವಾಗಬೇಕು.

ಹೇಗೆ ಬುದ್ಧನ ಆದರ್ಶಗಳನ್ನು ಆಚರಿಸಲು ಸಂಘ ನಮಗೆ ಮಾರ್ಗದರ್ಶಿಯೋ ಹಾಗೆ ಜೀಸಸ್ ನ ಆದರ್ಶಗಳನ್ನು ಆಚರಣೆಗೆ ತರಲು ಚರ್ಚ ಒಂದು ವಾಹಕ. ಚರ್ಚ್, ಜೀಸಸ್ ನ ಹೋಪ್ ಆದರೆ ಸಂಘ, ಬುದ್ಧನ ಭರವಸೆ. ಚರ್ಚ್ ಮತ್ತು ಸಂಘದ ಆಚರಣೆಗಳ ಮೂಲಕ ಅವರ ಟೀಚಿಂಗ್ ಗಳು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಚರ್ಚ್ ಮತ್ತು ಸಂಘದಂಥ ಸಮುದಾಯಗಳು ತಮ್ಮ ಕೆಲವು ಕೊರತೆಗಳ ನಡುವೆಯೂ ಬುದ್ಧ ಮತ್ತು ಜೀಸಸ್ ನ ಪಾಠಗಳನ್ನ ಜನರ ಮಧ್ಯೆ ಜೀವಂತವಾಗಿ ಇಟ್ಟಿವೆ.

ಫಾದರ್, ಸನ್ ಮತ್ತು ಹೋಲಿ ಸ್ಪಿರಿಟ್ ಒಂದೆಡೆ ಪ್ರಕಟಗೊಳ್ಳಲು ಚರ್ಚ್ ನ ಅವಶ್ಯಕತೆಯಿದೆ ( “ಯಾವಾಗ ನನ್ನ ಹೆಸರಿನಲ್ಲಿ ಇಬ್ಬರು ಅಥವಾ ಮೂವರು ಸೇರುತ್ತಾರೋ ಅಲ್ಲಿ ನಾನಿರುತ್ತೇನೆ” ). ಚರ್ಚ್ ನ ಕಾರಣವಾಗಿ ಜನ, ಫಾದರ್ ಮತ್ತು ಸನ್ ನ ತಲುಪುವುದು ಸಾಧ್ಯವಾಗಬಹುದು. ಆದ್ದರಿಂದಲೇ ನಮ್ಮ ಪ್ರಕಾರ ಚರ್ಚ್ ಎನ್ನುವುದು ಜೀಸಸ್ ನ ಮಿಸ್ಟಿಕಲ್ ದೇಹ.

ಸಮುದಾಯಗಳು ಸೇರಿಕೊಂಡು ಧರ್ಮವನ್ನು ಆಚರಿಸುವುದರ ಕುರಿತು ಜೀಸಸ್ ಗೆ ಸ್ಪಷ್ಟತೆ ಇತ್ತು. ಅವನು ತನ್ನ ಶಿಷ್ಯರಿಗೆ ಜಗತ್ತಿನ ಬೆಳಕಾಗುವಂತೆ ಆದೇಶ ನೀಡಿದ. ಹೀಗೆಂದರೆ ಬೌದ್ಧರಿಗೆ ಅದು ಮೈಂಡ್ ಫುಲ್ ನೆಸ್ ನ ಪ್ರ್ಯಾಕ್ಟೀಸ್ ಮಾಡುವುದು. ನಾವು ನಮ್ಮ ಬೆಳಕಾಗಬೇಕು ಎನ್ನುವುದು ಬುದ್ಧನ ಮಾತು.

ಜೀಸಸ್ ತನ್ನ ಶಿಷ್ಯರಿಗೆ salt of the world, the real salt ಆಗುವಂತೆ ಆದೇಶಿಸಿದ. ಅವನ ಪಾಠಗಳು ಸ್ಪಷ್ಟ ಮತ್ತು ಶಕ್ತಿಶಾಲಿ. ಚರ್ಚಗಳು ಸರಿಯಾದ ರೀತಿಯಲ್ಲಿ ಜೀಸಸ್ ನ ಪಾಠಗಳನ್ನು ಆಚರಣೆಗೆ ತಂದದ್ದೇ ಆದರೆ, ಫಾದರ್, ಸನ್ ಮತ್ತು ಹೋಲಿ ಸ್ಪಿರಿಟ್ ಗಳ ಟ್ರಿನಿಟಿ ಹಾಜರಾಗಿದ್ದು ತಾನು ಮುಟ್ಟಿದ ಎಲ್ಲನ್ನೂ ಬದಲಾವಣೆ ಮಾಡುವ ಹೀಲಿಂಗ್ ಪಾವರ್ ನ ಹೊಂದಿರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.