ದೇಹ ಮತ್ತು ಮನಸ್ಸು ಏಕಕಾಲಕ್ಕೆ ಚಲಿಸಬೇಕು. ಈ ಸೌಹಾರ್ದದಿಂದಲೇ ಬದುಕು ಉತ್ತಮವಾಗಿರಲು ಸಾಧ್ಯವಾಗೋದು. ಆದ್ದರಿಂದ, ಪ್ರತಿಯೊಂದು ಕ್ಷಣವನ್ನೂ ಮನಸಾರೆ ಅನುಭವಿಸಿ : Tai Sheridan | ಚೇತನಾ ತೀರ್ಥಹಳ್ಳಿ : Tai Sheridan | ಚೇತನಾ ತೀರ್ಥಹಳ್ಳಿ
ನಿಮ್ಮ ಬಳಿ ನಿಜಕ್ಕೂ ಏನಾದರೂ ಇದೆ ಎಂದಾದರೆ, ಅದು ಈ ಕ್ಷಣ ಮಾತ್ರ. ಉಳಿದಿದ್ದೆಲ್ಲಾ ಸಂದುಹೋದ ಗತ ಮತ್ತು ಬರಬಹುದಾದ ಭವಿಷ್ಯ. ಒಂದು ನೆನಪು, ಒಂದು ಊಹೆ. ಈ ಕ್ಷಣವಷ್ಟೇ ನಿಮ್ಮ ಪಾಲಿನ ಸತ್ಯ.
ಆದ್ದರಿಂದ ನಿಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಸಂಪೂರ್ಣವಾಗಿ ಬದುಕಿ. ನೆನ್ನೆಗಳಲ್ಲಿ ಅಥವಾ ನೆನಪುಗಳಲ್ಲಿ ನಿಮ್ಮನ್ನು ಬಂಧಿಸಿಕೊಳ್ಳಬೇಡಿ. ಅಲ್ಲಿ ಸಿಲುಕಿಕೊಂಡಾಗೆಲ್ಲ ಪ್ರಯತ್ನಪಟ್ಟು ನಿಮ್ಮನ್ನು ನೀವು ವರ್ತಮಾನಕ್ಕೆ ಎಳೆತನ್ನಿ. ನಿಮ್ಮ ದೇಹ ಹೇಗೋ ಹಾಗೇ ಮನಸ್ಸನ್ನೂ ಕಾಲದೊಡನೆ ನಡೆಸಿ.
ದೇಹ ನೆನ್ನೆ ಇದ್ದ ಹಾಗೆ ಅಥವಾ ನಾಳೆ ಇರಬಹುದಾದ ಹಾಗೆ ಆಗಲು ಸಾಧ್ಯವೇ? ಹಾಗಾದರೆ ಮನಸ್ಸನ್ನು ಯಾಕೆ ಹಾಗಿರಲು ಬಿಡಬೇಕು?
ದೇಹ ಮತ್ತು ಮನಸ್ಸು ಏಕಕಾಲಕ್ಕೆ ಚಲಿಸಬೇಕು. ಈ ಸೌಹಾರ್ದದಿಂದಲೇ ಬದುಕು ಉತ್ತಮವಾಗಿರಲು ಸಾಧ್ಯವಾಗೋದು.
ಈ ಹೊತ್ತು ನಿಮ್ಮ ಉಸಿರು ಹೊಕ್ಕುವ ಗಾಳಿಗೆ ಆಭಾರಿಯಾಗಿರಿ. ಈ ಹೊತ್ತು ನಿಮ್ಮ ಜೊತೆಗಿರುವ ಜನರಿಗೆ ಆಭಾರಿಯಾಗಿರಿ. ನಿಮ್ಮ ಈ ಹೊತ್ತಿನ ಸಂತೋಷವನ್ನು ಅಥವಾ ಯಾವ ಸಂದರ್ಭದಲ್ಲಿರುವಿರೋ ಅದನ್ನು ಮನಸಾರೆ ಅನುಭವಿಸಿ.
ಈ ಬಗೆ ನಿಮಗೆ
ಸುಮ್ಮನೆ ಕುಳಿತುಕೊಳ್ಳುವ
ಧ್ಯಾನದಿಂದ ದಕ್ಕುವುದು.
ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

