ಯಾರ ಜೊತೆ ಬೆರೆಯಬೇಕು, ಯಾರನ್ನು ದೂರವಿಡಬೇಕು, ತಿಳಿಯೋದು ಹೇಗೆ?

ಜನರ ವ್ಯಕ್ತಿತ್ವಗಳನ್ನು ಅಂದಾಜು ಮಾಡಲು ಕೆಳಗೆ ಕೆಲವೊಂದು green flag ಗಳನ್ನ ಸೂಚಿಸಲಾಗಿದೆ. ಈ ಒಂಭತ್ತು ಸೂಚನೆಗಳು ಜನರನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಶುರು ಮಾಡಲಂತೂ ನಮಗೆ ಸಹಾಯ ಮಾಡುತ್ತವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಟಾಕ್ಸಿಕ್ ಜನರು ಎದುರಾದಾಗ ಅವರನ್ನು ಗುರುತಿಸುವ red flag ಗಳು ಬಹುತೇಕ ನಮಗೆ ಗೊತ್ತಿರುತ್ತವೆ ಏಕೆಂದರೆ, ಬದುಕಿನಲ್ಲಿ ಬಹಳಷ್ಟು ಬಾರಿ ಮೋಸ, ದ್ರೋಹ ನಮಗೆ ಎದುರಾಗಿರುತ್ತದೆ. ಆದರೆ ಎದುರಾಗುವ ಜನರಲ್ಲಿನ green flag ಗಳನ್ನ ಹೇಗೆ ಗುರುತಿಸುವುದು? ಜನರಲ್ಲಿನ ಕಾರುಣ್ಯ, ಅಂತಃಕರಣವನ್ನು ಗುರುತಿಸುವ ಸಾಮರ್ಥ್ಯ ನಮಗಿದೆಯೆ?

ನಾವು ಬಹುತೇಕರು ಬದುಕಿನಲ್ಲಿ ಮೋಸ ಮತ್ತು ವಂಚನೆಯನ್ನು ಅನುಭವಿಸಿದವರು. ಆದ್ದರಿಂದ ಯಾರಾದರೂ ಹೊಸಬರು ನಮಗೆ ಎದುರಾದಾಗ ಅವರನ್ನು ನಮ್ಮ ಆತ್ಮೀಯ ವಲಯದಲ್ಲಿ ಸೇರಿಸಿಕೊಳ್ಳಲು ನಾವು ಸಹಜವಾಗಿ ಹಿಂಜರಿಯುತ್ತೇವೆ. ನಾವು ಹೀಗಾಗಿರುವುದು ವಿಷಾದಕರ ಆದರೆ ಸಂದರ್ಭಗಳು ನಮ್ಮನ್ನು ಹೀಗೆ ತಯಾರು ಮಾಡಿವೆ. ಆದರೆ ಅದೃಷ್ಟವಶಾತ್ ನಮಗೆ ತುಂಬ ಒಳ್ಳೆಯ ಜನ ಕೂಡ ಎದುರಾಗುತ್ತಾರೆ, ನಮಗೆ ಅವರನ್ನು ಹಾಗೆಂದು ಗುರುತಿಸುವುದು ಮತ್ತು ನಂಬುವುದು ಅವಶ್ಯಕವಾಗುತ್ತದೆ.

ಇಂಥ ಸಂದರ್ಭ ಗಳಲ್ಲಿ ನಾವು ಬಹುತೇಕ ನಿರ್ಭರವಾಗಿರುವುದು ನಮ್ಮ ಕಾಮನ್ ಸೆನ್ಸ್ ಮೇಲೆ, ನಮ್ಮ instinct ಗಳ ಮೇಲೆ ಮತ್ತು ನಮ್ಮ ಗಟ್ ಫೀಲಿಂಗ್ ಮೇಲೆ. ಆದರೆ ಇಂಥ ಸಂದರ್ಭಗಳಲ್ಲಿ ಜನರ ವ್ಯಕ್ತಿತ್ವಗಳನ್ನು ಅಂದಾಜು ಮಾಡಲು ಕೆಳಗೆ ಕೆಲವೊಂದು green flag ಗಳನ್ನ ಸೂಚಿಸಲಾಗಿದೆ. ಈ ಒಂಭತ್ತು ಸೂಚನೆಗಳು ಜನರನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಶುರು ಮಾಡಲಂತೂ ನಮಗೆ ಸಹಾಯ ಮಾಡುತ್ತವೆ.

  1. ಅವರು ನಿಮ್ಮ ಗೆಲುವುಗಳನ್ನ ಸಂಭ್ರಮಿಸುತ್ತಾರೆ.
  2. ನೀವು ನಿಮ್ಮ ಹಾಗಿರಲು ಅವರು ನಿಮಗೆ ಪ್ರೋತ್ಸಾಹ ನೀಡುತ್ತಾರೆ.
  3. ಅವರ ಜೊತೆ ಮಾತನಾಡುವಾಗ ನಿಮಗೆ ತುಂಬ ಎಚ್ಚರಿಕೆಯಿಂದ ವ್ಯವಹರಿಸುವ ಅವಶ್ಯಕತೆ ಎದುರಾಗುವುದಿಲ್ಲ.
  4. ಅವರು ನಿಮ್ಮ ಕುರಿತಾದ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿನಲ್ಲಿಟ್ಟುಕೊಂಡುರುತ್ತಾರೆ. ಇದು ಅವರ ಕಾಳಜಿಯನ್ನು ತೋರಿಸುತ್ತದೆ.
  5. ನಿಮ್ಮ ವೈಯಕ್ತಿಕ ಬೌಂಡರಿಗಳನ್ನು ಅವರು ಗೌರವಿಸುತ್ತಾರೆ.
  6. ಅವರ ಜೊತೆ ಮಾತನಾಡಿದ ಮೇಲೆ ನಿಮಗೆ ಖುಶಿಯಾಗುತ್ತದೆ, ನಿರಾಳವಾಗುತ್ತದೆ.
  7. ಅವರು ನಿಮ್ಮ ಮಾತುಗಳನ್ನ ಯಾವ ರಕ್ಷಣಾತ್ಮಕತೆ ಇಲ್ಲದೆ ಕೇಳುತ್ತಾರೆ.
  8. ಅವರು ನಿಮಗೆ ಸುರಕ್ಷಿತ ಭಾವವನ್ನು ನೀಡುತ್ತಾರೆ.
  9. ಅವರು ನಿಮ್ಮ ಗುರಿಗಳನ್ನ, ಉದ್ದೇಶಗಳನ್ನ ಪೋಷಿಸುತ್ತಾರೆ.

ಕೆಲವು ವಿಷಮ ಸಂದರ್ಭಗಳಿಂದಾಗಿ ನೀವು ಎದೆಗುಂದುವ ಕಾರಣವಿಲ್ಲ. ನಿಮ್ಮ ಸುತ್ತ ಸಾಕಷ್ಟು ಒಳ್ಳೆಯ ಜನ ಇದ್ದಾರೆ ಮತ್ತು ಅವರನ್ನು ಹಾಗೆಂದು ಗುರುತಿಸಲು ಸಾಕಷ್ಟು ಸೂಚನೆಗಳನ್ನೂ ಬದುಕು ನಿಮಗೆ ಕಲಿಸಿರುತ್ತದೆ. ಜನ ಒಳ್ಳೆಯವರು ಎಂದ ಮಾತ್ರಕ್ಕೆ ಅವರು ನಿಮ್ಮ ಬೆಸ್ಟ್ ಫ್ರೆಂಡ್ ಗಳಾಗಬೇಕು ಎನ್ನುವ ಅವಶ್ಯಕತೆಯೇನೂ ಇಲ್ಲ. ನೀವು ಅವರ ಜೊತೆ ಒಂದು ಆರೋಗ್ಯಕರ ಸಂಬಂಧವನ್ನು ಕಟ್ಟಿಕೊಂಡರೂ ಸಾಕು, ಅದು ಯಾವುದೇ ವ್ಯವಹಾರವಾಗಿರದೇ ಕೇವಲ ಮಾತುಕತೆಯ ವಿಚಾರದಲ್ಲಿಯಾದರೂ.

ಬದುಕಿನಲ್ಲಿ ಸಕಾರಾತ್ಮಕತೆ, ಸಕಾರಾತ್ಮಕತೆಯನ್ನ ಆಕರ್ಷಿಸುತ್ತದೆ. ಸರಳವಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ಒಬ್ಬರಿಗೊಬ್ಬರೂ ಧೈರ್ಯ ನೀಡುತ್ತ ಬದುಕುವುದು ಕೂಡ ಒಂದು ಅದ್ಭುತ ಸಂಗತಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.