ತನ್ನ ಕತ್ತೆ ಕಳೆದುಹೋದರೂ ನಸ್ರುದ್ದೀನ್ ಖುಷಿಯಾಗಿದ್ದುದು ಯಾಕೆ ಗೊತ್ತಾ? । ಕನ್ನಡಕ್ಕೆ: ಚಿದಂಬರ ನರೇಂದ್ರ
ತನ್ನ ಕತ್ತೆ ಕಳೆದು ಹೋಗಿದ್ದರೂ, ನಸ್ರುದ್ದೀನ್ ಕತ್ತೆಯನ್ನ ಹುಡುಕುವ ಪ್ರಯತ್ನ ಮಾಡದೇ ಖುಶಿಯಿಂದ ಕಾಫೀ ಹೌಸ್ ನಲ್ಲಿ ಕಾಫೀ ಕುಡಿಯುತ್ತ ಕುಳಿತಿದ್ದ.
ತನ್ನ ಕತ್ತೆಯನ್ನ ನಸ್ರುದ್ದೀನ್ ಎಷ್ಟು ಪ್ರೀತಿಸುತ್ತಿದ್ದ ಎನ್ನುವುದು ಗೊತ್ತಿದ್ದ ಜನರಿಗೆ, ಅವನ ಈ ವರ್ತನೆಯಿಂದ ಅಚ್ಚರಿಯಾಗಿತ್ತು. ಕತ್ತೆ ಕಳೆದು ಹೋಗಿ ಎಷ್ಟೋ ದಿನಗಳಾಗಿದ್ದರೂ ನಸ್ರುದ್ದೀನ್ ಆರಾಮಾಗಿ ಕಾಫೀ ಕುಡಿಯುತ್ತ ಕುಳಿತಿದ್ದ.
ಕೊನೆಗೂ ಒಬ್ಬ ಮನುಷ್ಯ ಈ ಕುರಿತು ನಸ್ರುದ್ದೀನ್ ನ ಪ್ರಶ್ನೆ ಮಾಡಿದ, “ನಿನ್ನ ಖುಶಿಯ ಕಾರಣ ನನಗೆ ಗೊತ್ತಾಗುತ್ತಿಲ್ಲ ನಸ್ರುದ್ದೀನ್. ನಿನ್ನ ಪ್ರೀತಿಯ ಕತ್ತೆಯನ್ನು ಕಳೆದುಕೊಂಡಿರುವ ನೀನು, ಹೀಗೆ ನಗುನಗುತ್ತ ಇರುವುದು ಹೇಗೆ ಸಾಧ್ಯ?”
“ನನಗೆ ಯಾಕೆ ಖುಶಿ ಗೊತ್ತಾ? ನಾನು ಅವತ್ತು ಕತ್ತೆಯ ಮೇಲೆ ಕುಳಿತಿರಲಿಲ್ಲ. ಅವತ್ತೇನಾದರೂ ನಾನು ಕತ್ತೆಯ ಮೇಲೆ ಕುಳಿತಿದ್ದರೆ, ಕತ್ತೆಯ ಜೊತೆ ನಾನೂ ಕಳೆದು ಹೋಗುತ್ತಿದ್ದೆ ”.
ನಸ್ರುದ್ದೀನ್ ಕನ್ನ ಖುಶಿಯ ಕಾರಣವನ್ನು ವಿವರಿಸಿ ಹೇಳಿದ.

