ನಿಮ್ಮ ದೃಷ್ಟಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಿ. ರಾಡಿ ಬೇಕಾದರೆ ಎಲ್ಲ ದಿಕ್ಕುಗಳಿಂದ ಬರಲಿ ಆದರೆ ಅದು ನಿಮ್ಮ ದೃಷ್ಟಿಗೆ ತೊಂದರೆ ಮಾಡದಂತೆ ನೋಡಿಕೊಳ್ಳಿ. ನಿಮ್ಮ ದೃಷ್ಟಿ ನಿಮ್ಮ ದಾರಿಯ ಮೇಲೆ ಇರಲಿ, ಎಡಗಡೆ ಬಲಗಡೆ ನೋಡುತ್ತ ಸಮಯ ವ್ಯರ್ಥ ಮಾಡಬೇಡಿ. ಎಲ್ಲವೂ ರಾಡಿಯಾಗಿದ್ದರೂ ನಿಮ್ಮ ದೃಷ್ಟಿ ಮಾತ್ರ ಕ್ಲಿಯರ್ ಆಗಿರಲಿ ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಇಲ್ಲೊಂದು ಕಾರ್ ಇದೆ ನೋಡಿ. ಹೊರಗೆ ಪೂರ್ಣ ಕೊಳೆಯಾಗಿದೆ. ನಿಮಗೆ ಅನಿಸಬಹುದು ಯಾಕೆ ಡ್ರೈವರ್ ಕಾರ್ ನ ಕ್ಲೀನ್ ಆಗಿ ಇಟ್ಟುಕೊಂಡಿಲ್ಲ? ಆದರೆ ಡ್ರೈವರ್ ಗೆ ಗೊತ್ತು ಅವನು ಪ್ರಯಾಣ ಮಾಡುತ್ತಿರುವ ಹಾದಿ ಕೆಸರು, ರಾಡಿಯಿಂದ ತುಂಬಿಕೊಂಡಿರುವಂಥದು. ಕಾರ್ ಕ್ಲೀನ್ ಮಾಡುತ್ತ ಕುಳಿತುಕೊಂಡರೆ ಅವನು ತನ್ನ ಗುರಿಯನ್ನ ಸರಿಯಾದ ಸಮಯದಲ್ಲಿ ಮುಟ್ಟುವುದು ಅಸಾಧ್ಯ. ಆದ್ದರಿಂದ ಅವನು ತನ್ನ ವಿಂಡ್ ಸ್ಕ್ರೀನ್ ಮತ್ತು ರೇರ್ ವ್ಯೂ ಮಿರರ್ ಗಳನ್ನು ಮಾತ್ರ ಸ್ವಚ್ಛ ವಾಗಿಟ್ಚುಕೊಂಡಿದ್ದಾನೆ, ತಾನು ಕಾರ್ ಓಡಿಸುವುದಕ್ಕೆ ಯಾವ ತೊಂದರೆಯಾಗಬಾರದೆಂದು.
ಇದು ನಮ್ಮ ಬದುಕಿಗೆ ಬಹಳ ಹತ್ತಿರವಾದಂಥ ಸನ್ನಿವೇಶ. ನಮ್ಮ ಬದುಕಿನ ದಾರಿ ಇಂಥದೇ ಕೆಸರು, ರಾಡಿಯ ಹಾದಿ.
ಬದುಕು, ನಿಮ್ಮ ಮೇಲೆ ರಾಡಿ ಎರಚಬಹುದೆ? ಖಂಡಿತ.
ಜನ ನಿಮ್ಮ ಮೇಲೆ ಕೆಸರು, ಕೊಳೆ ತೂರಬಹುದೆ? ಖಂಡಿತ.
ನಿಮ್ಮ ದಾರಿಯಲ್ಲಿ ಸವಾಲುಗಳು, ತೊಂದರೆಗಳು ಎದುರಾಗಬಹುದೆ? ಖಂಡಿತ.
ಜನ ನಮ್ಮನ್ನ ಬ್ರ್ಯಾಂಡ್ ಮಾಡೋದು, ನಿಮ್ಮ ಹೆಸರು ಕೆಡಿಸುವ ಪ್ರಯತ್ನ ಮಾಡುವ ಸಾಧ್ಯತೆ ಇದೆಯೆ? ಖಂಡಿತ.
ಪ್ರಶ್ನೆ ಏನೆಂದರೆ, ಹೀಗೆಲ್ಲ ಆಗೋದು ಖಂಡಿತವಾದರೆ ಆಗ ನೀವು ಏನು ಮಾಡಬೇಕು? ಆಗ ನಿಮ್ಮ attitude ನಿಮ್ಮ altitude ನ ನಿರ್ಧರಿಸುತ್ತದೆ. ನಿಮ್ಮ ಪ್ರತಿಕ್ರಿಯೆ ನಿರ್ಧರಿಸುವುದು ನೀವು ಪ್ರವಾಹವನ್ನು ಈಜುವವರೋ ಅಥವಾ ನೀವು ಅದರೊಳಗೆ ಮುಳುಗುವವರೋ, ನೀವು ಆಕಾಶದಲ್ಲಿ ಹಾರುವವರೋ ಅಥವಾ ಕುಸಿದು ಬೀಳುವವರೋ?
ನಿಮ್ಮ ದೃಷ್ಟಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಿ. ರಾಡಿ ಬೇಕಾದರೆ ಎಲ್ಲ ದಿಕ್ಕುಗಳಿಂದ ಬರಲಿ ಆದರೆ ಅದು ನಿಮ್ಮ ದೃಷ್ಟಿಗೆ ತೊಂದರೆ ಮಾಡದಂತೆ ನೋಡಿಕೊಳ್ಳಿ. ನಿಮ್ಮ ದೃಷ್ಟಿ ನಿಮ್ಮ ದಾರಿಯ ಮೇಲೆ ಇರಲಿ, ಎಡಗಡೆ ಬಲಗಡೆ ನೋಡುತ್ತ ಸಮಯ ವ್ಯರ್ಥ ಮಾಡಬೇಡಿ. ಎಲ್ಲವೂ ರಾಡಿಯಾಗಿದ್ದರೂ ನಿಮ್ಮ ದೃಷ್ಟಿ ಮಾತ್ರ ಕ್ಲಿಯರ್ ಆಗಿರಲಿ.
ಪ್ರತಿಬಾರಿ ನೀವು ಪ್ರಯಾಣ ನಿಲ್ಲಿಸಿ ಜನ ಎಸೆಯುತ್ತಿರುವ ರಾಡಿಯ ಮೇಲೆ ಗಮನ ಕೊಡುವುದು ನಿಮ್ಮ ವೈರಿಗಳಿಗೆ ಮತ್ತಷ್ಟು ಉತ್ಸಾಹ ತುಂಬುತ್ತದೆ. ಅದೇ ಅವರ ಉದ್ದೇಶ. ಈ ಯಾವುದಕ್ಕೂ ಗಮನ ನೀಡದೇ ನೀವು ನಿಮ್ಮ ಪ್ರಯಾಣದಲ್ಲಿ ಮುಂದುವರೆಯುವುದು ನಿಮ್ಮ ವೈರಿಗಳ ಧೃತಿಗೆಡಿಸುತ್ತದೆ. ನಿಮ್ಮ ಗುರಿ ಮುಟ್ಟಲು ಇರುವ ದಾರಿ ಇದೊಂದೇ.

