ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತು ಇಳಿ ಹೊತ್ತಿನಲ್ಲಿ ಗಂಡಸು ಹೆಂಗಸು ಇಬ್ಬರೂ
ಬಾಡಿಗೆ ಗಾಡಿಯಲ್ಲಿ ಪರ ಊರಿಗೆ ಹೊರಟಿದ್ದರು
ಪರಸ್ಪರ ಪರಿಚಯವೂ ಇತ್ತು ಅವರಿಗೆ
ಗಂಡಸು ಕವಿ. ಏನೇನೋ ಕತೆ ಹೇಳುತ್ತ ಹೆಂಗಸನ್ನು ರಂಜಿಸುತಿದ್ದ
ಕೆಲವು ಅವನದೇ ಸ್ವಂತ ಕತೆ
ಇನ್ನು ಕೆಲವು ಆ ಕ್ಷಣದಲ್ಲಿ ಕಟ್ಟಿದ ಕತೆ
ಮತ್ತೆ ಕೆಲವು ಅವನು ಕೇಳಿದ್ದ ಕತೆ
ಕತೆ ಕೇಳುತ್ತಾ ಹೆಂಗಸು ನಿದ್ದೆಗೆ ಜಾರಿದಳು
ದಾರಿಯ ದಡಕಲಿನಲ್ಲಿ ಗಾಡಿ ಕುಲುಕಿದಾಗ ತಟ್ಟನೆ ಎಚ್ಚರವಾದಳು
ಬೈಬಲಿನಲ್ಲಿ ಬರುವ ಜೋನಾ ಮತ್ತು ತಿಮಿಂಗಿಲ ಕಥೆಗೆ ನೀವು ಹೇಳಿದ ವ್ಯಾಖ್ಯಾನ ತುಂಬ ಚೆನ್ನಾಗಿದೆ ಅಂದಳು
ಅಯ್ಯೋ ತಾಯೀ
ನಾನು ಬಿಳಿಯ ಗುಲಾಬಿ ಮತ್ತು ಚಿಟ್ಟೆಯ ಕತೆ ಹೇಳುತಿದ್ದೆ
ಚಿಟ್ಟೆ ಗುಲಾಬಿ ಎರಡೂ ಹೇಗೆ ಬದುಕಿದವು ಅಂತ ನಾನೇ ಬರೆದ ಕಥೆ ಹೇಳುತಿದ್ದೆ ಅಂದ ಕವಿ

