ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದು, ವ್ಯಕ್ತಿಯಾಗಿ ನೀವು ಎಂಥವರು, ನಿಮ್ಮ ಪ್ಯಾಷನ್ ಗಳು ಏನು, ಯುುನಿಕ್ ಆದಂಥ ನಿಮ್ಮ ಬದುಕಿನ ಕಥೆ ಎಂಥದು ಇವೇ ಇತ್ಯಾದಿಯಾಗಿ. ಈ ಸೋಷಿಯಲ್ ಮೀಡಿಯಾದ ಅಲ್ಗಾರಿದಂ ಗಳಿಗೆ, ಆನ್ ಲೈನ್ ಟ್ರೆಂಡ್ ಗಳಿಗೆ ನಿಮ್ಮ ಸೆಲ್ಫ್ ವರ್ಥ್ ನ ಡಿಫೈನ್ ಮಾಡುವುದು ಸಾಧ್ಯವಾಗುವುದಿಲ್ಲ ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಬೆಂಬಲಿಗರು ಇರುವ ಯಾರಿಗಾದರೂ ಸೋಷಿಯಲ್ ಮೀಡಿಯಾದ ಮಾನದಂಡಗಳಿಗೆ ನಮ್ಮ ಸೆಲ್ಫ್ ವರ್ಥ್ ನ ಅಟ್ಯಾಚ್ ಮಾಡುವುದು ಎಷ್ಟು ಟೆಂಪ್ಟಿಂಗ್ ಎನ್ನುವುದರ ಅನುಭವ ಆಗಿರುತ್ತದೆ. ಆದರೆ ಸತ್ಯ ಏನೆಂದರೆ, ನಿಮ್ಮ ಮೌಲ್ಯ, ನಿಮ್ಮ ಫಾಲೋವರ್ಸ್ ಗಳ, ಸಂಖ್ಯೆ, ನಿಮ್ಮ ಎಂಗೇಜ್ಮೆಂಟ್ ರೇಟ್, ನೀವು ಪಡೆಯುವ ಲೈಕ್ ಗಳು ಎಲ್ಲವನ್ನೂ ಮೀರಿ ಇರುವಂಥದು. ಸೋಷಿಯಲ್ ಮೀಡಿಯಾ ಗೆ ನಿಮ್ಮ ಸ್ವಂತದ ಮೌಲ್ಯವನ್ನು ( Self Worth) ನಿರ್ಧರಿಸುವ ಅವಕಾಶ ನೀಡಬೇಡಿ. ನಿಮ್ಮ ಆನ್ ಲೈನ್ ವ್ಯಕ್ತಿತ್ವಕ್ಕಿಂತ ನಿಮ್ಮ ವ್ಯಕ್ತಿತ್ವ ಹೆಚ್ಚು ಮಹತ್ವದ್ದಾಗಿದೆ.
ನೆನಪಿರಲಿ, ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದು, ವ್ಯಕ್ತಿಯಾಗಿ ನೀವು ಎಂಥವರು, ನಿಮ್ಮ ಪ್ಯಾಷನ್ ಗಳು ಏನು, ಯುುನಿಕ್ ಆದಂಥ ನಿಮ್ಮ ಬದುಕಿನ ಕಥೆ ಎಂಥದು ಇವೇ ಇತ್ಯಾದಿಯಾಗಿ. ಈ ಸೋಷಿಯಲ್ ಮೀಡಿಯಾದ ಅಲ್ಗಾರಿದಂ ಗಳಿಗೆ, ಆನ್ ಲೈನ್ ಟ್ರೆಂಡ್ ಗಳಿಗೆ ನಿಮ್ಮ ಸೆಲ್ಫ್ ವರ್ಥ್ ನ ಡಿಫೈನ್ ಮಾಡುವುದು ಸಾಧ್ಯವಾಗುವುದಿಲ್ಲ. ನಿಮಗೆ ಜನರ ಮೇಲೆ ಪ್ರಭಾವ ಬೀರುವ, ಅವರಿಗೆ ಸ್ಪೂರ್ತಿಯಾಗುವ ಸಾಮರ್ಥ್ಯ ಇದೆ. ಆದರೆ ಆ ಪ್ರಭಾವವನ್ನ ನಿಮ್ಮ ಸ್ವಾಭಿಮಾನಕ್ಕೆ, ಸ್ವಯಂ ಮೌಲ್ಯಕ್ಕೆ ತಳಕು ಹಾಕಿಕೊಂಡು ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಒಂದು ಹೆಜ್ಜೆ ಹಿಂದೆ ಸರಿಯಿರಿ, ನಿರಾಳವಾಗಿ ಉಸಿರಾಡಿ, ಯಾವುದು ನಿಜವಾಗಿ ನಿಮ್ಮನ್ನ ಪರಿಪೂರ್ಣವಾಗಿಸುತ್ತದೆಯೋ ಅಂಥ ಸಂಗತಿಗಳ ಮೇಲೆ ಫೋಕಸ್ ಮಾಡಿ.
ನಿಮ್ಮ ಫಾಲೋವರ್ಸ್ ನಿಮ್ಮಿಂದ ಸ್ಪೂರ್ತಿ ಪಡೆಯುತ್ತಾರೆ, ನಿಮ್ಮನ್ನ ಅಭಿಮಾನದಿಂದ ನೋಡುತ್ತಾರೆ ನಿಜ ಆದರೆ ಅವರು ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಆನ್ ಲೈನ್ ಹಾಜರಾತಿಯ ಹೊರತಾಗಿಯೂ ನೀವು ಬಹಳ ಮಹತ್ವದ ವ್ಯಕ್ತಿತ್ವ ಹೊಂದಿದವರು. ನಿರಂತರವಾಗಿ ಕಂಟೆಂಟ್ ಕ್ರಿಯೇಟ್ ಮಾಡುವ ಒತ್ತಡದಿಂದ, ಲೈಕ್ ಗಳನ್ನು ಚೇಸ್ ಮಾಡುವುದರಿಂದ, ತೋರಿಕೆಯ ಇಮೇಜ್ ಕಟ್ಟುಕೊಳ್ಳುವಿಕೆಯಿಂದ ಹೊರಗೆ ಬನ್ನಿ. ಅಥೆಂಟಿಕ್ ಆಗಿರಿ, ನಿಮ್ಮ ನೈಜ ವ್ಯಕ್ತಿತ್ವವನ್ನು ಹಂಚಿಕೊಳ್ಳಿ, ಮತ್ತು ನಿಮ್ಮ ಸೋಷಿಯಲ್ ಮೀಡಿಯಾ ವೇದಿಕೆಯನ್ನ ಸೃಜನಶೀಲವಾಗಿ ಬಳಸಿಕೊಳ್ಳಿ. ಯಾವಾಗ ನೀವು ಲೈಕ್ ಗಳಿಗಾಗಿ ಹಪಹಪಿಸುವುದನ್ನ ಬಿಟ್ಟು ನಿಮ್ಮ ನೈಜ ಉದ್ದೇಶಗಳ ಬೇನ್ನುಹತ್ತುತ್ತೀರೋ ಆಗ ನಿಮ್ಮ ಸೆಲ್ಫ್ ವರ್ಥ ಹೆಚ್ಚುತ್ತ ಹೋಗುತ್ತದೆ.

