ಕವಿ ರಾಹತ್ ಇಂದೋರಿ ಚೋರ್ ಅಂದಿದ್ದು ಯಾವ ಸರ್ಕಾರಕ್ಕೆ!? ಅವರ ಮಾತುಗಳಲ್ಲೇ ಓದಿ! । ಕನ್ನಡಕ್ಕೆ : ಚಿದಂಬರ ನರೇಂದ್ರ
ತುರ್ತು ಪರಿಸ್ಥಿತಿಯ ಪ್ರಸಂಗವೊಂದನ್ನ ಕವಿ ರಾಹತ್ ಇಂದೂರಿ ನೆನಪಿಸಿಕೊಳ್ಳುತ್ತಾರೆ.
ಒಂದು ದಿನ ಪೋಲಿಸ್ ಸ್ಟೇಷನ್ ಇಂದ ರಾಹತ್ ಗೆ ಬುಲಾವ್ ಬರುತ್ತದೆ. ಸ್ಟೇಷನ್ ಗೆ ಹೋದ ರಾಹತ್ ರನ್ನ ಪೋಲೀಸ್ ಅಧಿಕಾರಿ ಪ್ರಶ್ನೆ ಮಾಡುತ್ತಾರೆ.
“ಸರ್ಕಾರ್ ಚೋರ್ ಹೈ ಅಂತ ಪದ್ಯ ಬರೆದಿದ್ದಿರಂತಲ್ಲಾ ನಿಜನಾ? ನಿಜ ಆಗಿದ್ರೆ ನಿಮಗೆ ಶಿಕ್ಷೆ ಆಗತ್ತೆ”.
“ ಹೌದು ಹಾಗೆ ಪದ್ಯ ಬರೆದದ್ದು ನಿಜ, ಆದರೆ ಅದು ಯಾವ ಸರ್ಕಾರ ಅಂತ ನಾನು ಹೇಳಿಲ್ಲ, ಅದು ಅಮೇರಿಕಾದ ಸರ್ಕಾರ ಆಗಿರಬಹದು, ಜರ್ಮನಿ ಸರ್ಕಾರ ಆಗಿರಬಹುದು, ಯಾವುದೂ ಸರ್ಕಾರ ಆಗಿರಬಹುದು” ರಾಹತ್, ಅಧಿಕಾರಿ ಗೆ ಸಮಜಾಯಿಷಿ ಕೊಡುತ್ತಾರೆ.
“ನಮ್ಮನ್ನೇನು ಅಷ್ಟು ಮೂರ್ಖರು ಅಂತ ತಿಳ್ಕೊಂಡಿದೀರಾ, ಯಾವ ಸರ್ಕಾರ ಚೋರ್ ಅಂತ ನಮಗೆ ಗೊತ್ತಿಲ್ವಾ “ ಪೋಲೀಸ್ ಅಧಿಕಾರಿ, ರಾಹತ್ ಗೆ ಕೌಂಟರ್ ಕೊಡುತ್ತಾನೆ!

