ಕವಿಗಳು ಹಾಸ್ಯಪ್ರಜ್ಞೆ ಉಳ್ಳವರೂ ಆಗಿಬಿಟ್ಟರೆ ಅವರ ಕ್ರಿಯಾಶೀಲತೆಗೆ ಸಾಟಿಯೇ ಇಲ್ಲ! ಈ ಮಾತನ್ನು ಪ್ರೂವ್ ಮಾಡುವ ಮತ್ತೊಂದು ಪ್ರಸಂಗ ಇಲ್ಲಿದೆ… । ಚಿದಂಬರ ನರೇಂದ್ರ
ಪಾಕಿಸ್ತಾನದ ಪ್ರಸಿದ್ಧ ಉರ್ದೂ ಕವಿ ಜಾನ್ ಏಲಿಯಾ ಎಂಥ ಚುರುಕು ವ್ಯಕ್ತಿತ್ವದ ತೀಕ್ಷಮತಿ ಎನ್ನುವುದಕ್ಕೆ ಕವಿ ರಾಹತ್ ಇಂದೂರಿ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ.
ಒಮ್ಮೆ ರಾಹತ್ ಇಂದೂರಿ ಕವಿ ಸಮ್ಮೇಳನ ಒಂದರಲ್ಲಿ ಭಾಗವಹಿಸುವುದಕ್ಕೆ ಪಾಕಿಸ್ತಾನಕ್ಕೆ ಹೋಗಿರುತ್ತಾರೆ. ಕವಿ ಸಮ್ಮೇಳನದ ಮಾರನೆಯ ದಿನ ಸ್ವಲ್ಪ ದೂರದ ಹಳ್ಳಿಯೊಂದರ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಅವರು ಹೋಗಬೇಕಾಗಿರುತ್ತದೆ. ಆ ಹಳ್ಳಿಗೆ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಲಿಕ್ಕೆ ಬಂದ ಕವಿ ಜಾನ್ ಏಲಿಯಾ ಅವರನ್ನ ರಾಹತ್ ಪ್ರಶ್ನೆ ಮಾಡುತ್ತಾರೆ.
“ಜಾನ್ ಸಾಬ್ ಆ ಹಳ್ಳಿ ಇಲ್ಲಿಂದ ಎಷ್ಟು ದೂರ ಇದೆ?”
“ ಭಾಳ ದೂರ ಏನಿಲ್ಲ ರಾಹತ್ , ಕೇವಲ ಎರಡು ಪೆಗ್ ಅಷ್ಟೇ”
ಜಾನ್ ಏಲಿಯಾ ದೂರವನ್ನು ಪೆಗ್ ಲೆಕ್ಕದಲ್ಲಿ ವಿವರಿಸುತ್ತಾರೆ.

