ಗಂಟೆಯ ಸದ್ದನ್ನು ಅನುಸರಿಸಿ…

ನಮ್ಮ ದೇಹವು ನಮ್ಮ ಬದುಕಿನ ಒಂದು ಅಚ್ಚರಿ, ಹೇಗೆ ನಮ್ಮ ಸುತ್ತಲಿನ ಎಲ್ಲವೂ ಬದುಕಿನ ಬೆರಗು ಆಗಿದೆಯೋ ಹಾಗೆ, ಮೃದು ಮಧುರ ಮಳೆಯಂತೆ, ತಾಜಾ ಗಾಳಿಯಂತೆ, ಸುಂದರ ಹೂವಿನಂತೆ… ~ Thich Nhat Hanh: ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ವಿಯೆತ್ನಾಂ ಲ್ಲಿ ಯುವ ಸನ್ಯಾಸಿಯಾಗಿದ್ದಾಗ ಪ್ರತಿಯೊಂದು ಹಳ್ಳಿಯಲ್ಲೂ ಒಂದು ದೊಡ್ಡ ಗಂಟೆ ಇರುತ್ತಿತ್ತು. ಆ ಗಂಟೆಯನ್ನು ಬಾರಿಸಿದಾಗ ಹಳ್ಳಿಯ ಜನ, ತಾವು ಮಾಡುತ್ತಿದ್ದ ಕೆಲಸವನ್ನು ಕೆಲವು ಕ್ಷಣಗಳ ವರೆಗೆ ನಿಲ್ಲಿಸಿ ಪ್ರಜ್ಞಾಪೂರ್ಣ (ಮೈಂಡ್ ಫುಲ್) ಉಸಿರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.

ನಮ್ಮ ಪ್ರತಿನಿತ್ಯದ ಬದುಕಿನಲ್ಲೂ ನಾವು ನಮ್ಮ ದೇಹಕ್ಕೆ ವಾಪಸ್ಸಾಗುತ್ತ, ನಮ್ಮ ದೇಹದ ಬಗ್ಗೆ ಕಾಳಜಿ ಮಾಡುವುದನ್ನ ನೆನಪಿಸಿಕೊಳ್ಳಬೇಕು. ನಾವು ಬಹುತೇಕರು ನಮ್ಮ ದೇಹದ ಬಗ್ಗೆ ಯಾವ ಕರುಣೆ, ಕಾಳಜಿಯನ್ನು ಹೊಂದಿಲ್ಲ.

ನಾವು ನಮ್ಮ ದೇಹವನ್ನು ಬಹಳ ಕಠಿಣವಾಗಿ ದುಡಿಸಿಕೊಂಡಿದ್ದೇವೆ, ನಮ್ಮ ದೇಹವನ್ನು ಬಹಳವಾಗಿ ನಿರ್ಲಕ್ಷ್ಯ ಮಾಡಿದ್ದೇವೆ. ಯಾವಾಗ ನಾವು ಗಂಟೆಗಟ್ಟಲೆ ಸಮಯವನ್ನ ಕಂಪ್ಯೂಟರಿನ ಪರದೆಯ ಮುಂದೆ ಕಳೆಯುತ್ತೇವೆಯೋ ಆಗ ನಮಗೂ ಒಂದು ದೇಹವಿದೆ ಎನ್ನುವುದನ್ನ ನಾವು ಪೂರ್ಣವಾಗಿ ಮರೆತುಬಿಡುತ್ತೇವೆ. ನಮ್ಮ ದೇಹ ಒಂಟಿಯಾಗಿಬಿಟ್ಚಿದೆ, ಒತ್ತಡವನ್ನು ತುಂಬಿಕೊಂಡು, ನೋವನ್ನು ಧರಿಸಿಕೊಂಡು.

Plum village ನಲ್ಲಿಯ ನಮ್ಮ ಸಹೋದರ ಸಹೋದರಿಯರು ತಮ್ಮ ತಮ್ಮ ಕಂಪ್ಯೂಟರ್ ಗಳಲ್ಲಿ Bell of Mindfulness ನ ಪ್ರೋಗ್ರಾಂ ಮಾಡಿಕೊಂಡಿದ್ದಾರೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಬೆಲ್ ರಿಂಗ್ ಆಗುತ್ತದೆ ಆಗ ಎಲ್ಲರೂ ತಮ್ಮ ತಮ್ಮ ಕೆಲಸವನ್ನ, ತಮ್ಮ ಯೋಚನಾ ಸರಣಿಯನ್ನ ನಿಲ್ಲಿಸಿ ಕೊನೆಪಕ್ಷ ಮೂರು ಬಾರಿ ಮೈಂಡ್ ಫುಲ್ ಉಸಿರಾಟವನ್ನು ಆನಂದಿಸುತ್ತಾರೆ ಹಾಗು ಒಂದು ಮುಗುಳ್ನಗೆಯೊಂದಿಗೆ ಮತ್ತೆ ಕೆಲಸಕ್ಕೆ ಮರಳುತ್ತಾರೆ.

ಯಾವಾಗ ನಮಗೆ ಗಂಟೆಯ ಸದ್ದು ಕೇಳಿಸುತ್ತದೆಯೋ ಅದು ನಮಗೆ ನಮ್ಮ ದೇಹಕ್ಕೆ ಮರಳುವ ಅವಶ್ಯಕತೆಯನ್ನು, ನಮ್ಮ ದೇಹದ ಅಸ್ತಿತ್ವವನ್ನು ಗುರುತಿಸುವ ಮತ್ತು ಅದರ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯನ್ನು ನೆನಪು ಮಾಡುತ್ತದೆ.

ನಮ್ಮ ದೇಹವು ನಮ್ಮ ಬದುಕಿನ ಒಂದು ಅಚ್ಚರಿ, ಹೇಗೆ ನಮ್ಮ ಸುತ್ತಲಿನ ಎಲ್ಲವೂ ಬದುಕಿನ ಬೆರಗು ಆಗಿದೆಯೋ ಹಾಗೆ, ಮೃದು ಮಧುರ ಮಳೆಯಂತೆ, ತಾಜಾ ಗಾಳಿಯಂತೆ, ಸುಂದರ ಹೂವಿನಂತೆ.

ನಾವು ಪ್ರತಿಯೊಬ್ಬರೂ ಮಾನವತೆಯ ಗಾರ್ಡನ್ ಲ್ಲಿಯ ಹೂವುಗಳು. ನಾವು ನಮ್ಮ ದೇಹವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕಾಗಿದೆ, ನಾವು ಮತ್ತೆ ವಾಪಸ್ಸಾಗಲು ಬಯಸುವ ನಮ್ಮ ಸುಂದರ ಪ್ರಶಾಂತ ಮನೆಯಂತೆ.


Source: ‘The Bell’ From the book ‘At Home in the World’ by Thich Nhat Hanh

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.