ಅಕಸ್ಮಾತ್ ನಾವು ಕುರುಡರಾದ ಮೇಲಷ್ಟೇ ನಮಗೆ ನೀಲಿ ಆಕಾಶವನ್ನ, ಬಿಳಿ ಮೋಡಗಳನ್ನು ನೋಡುವುದು ಪವಾಡಸದೃಶ ಎನ್ನುವುದು ಗೊತ್ತಾಗುತ್ತದೆ…
ತಟಸ್ಥ ಭಾವನೆಗಳು ( Neutral feelings) ಎಂದರೆ ಅವು ಹಿತಕರ ( pleasant ) ಭಾವನೆಗಳೂ ಅಲ್ಲ, ಅಹಿತಕರ ( un pleasant) ಭಾವನೆಗಳೂ ಅಲ್ಲ. ಉದಾಹರಣೆಗೆ, ನಮಗೆ ಹಲ್ಲು ನೋವು ಇದೆ ಎಂದುಕೊಳ್ಳಿ, ಆಗ ಅದು ನಮ್ಮೊಳಗೆ ಅಹಿತಕರ ಭಾವವನ್ನು ಹುಟ್ಟು ಹಾಕುತ್ತದೆ. ಆದರೆ ನಮಗೆ ಹಲ್ಲು ನೋವು ಇಲ್ಲದಿರುವಾಗ ಅದು ನಮ್ನೊಳಗೇನೂ ಹಿತಕರ ಭಾವವನ್ನು ಹುಟ್ಟುಹಾಕುವುದಿಲ್ಲ. ಆಗ ನಮಗೆ ಹಲ್ಲುನೋವು ಇಲ್ಲದಿರುವುದು ಒಂದು ತಟಸ್ಥ ಭಾವ ಅಷ್ಟೇ. ಆದರೆ ನಮಗೆ ಒಮ್ಮೆ ಹಲ್ಲು ನೋವು ಬಂದು ನಂತರ ಅದು ವಾಸಿಯಾಗಿದ್ದು ಮಾತ್ರ ತುಂಬ ಹಿತಕರ ಭಾವವನ್ನು ಕೊಡುತ್ತದೆ.
ಅಕಸ್ಮಾತ್ ನಾವು ಕುರುಡರಾದ ಮೇಲಷ್ಟೇ ನಮಗೆ ನೀಲಿ ಆಕಾಶವನ್ನ, ಬಿಳಿ ಮೋಡಗಳನ್ನು ನೋಡುವುದು ಪವಾಡಸದೃಶ ಎನ್ನುವುದು ಗೊತ್ತಾಗುತ್ತದೆ. ಆದರೆ ನಮಗೆ ದೃಷ್ಟಿ ಇದ್ದಾಗ ಈ ಯಾವುದೂ ಅಂಥ ಮಹತ್ವದ್ದು ಅನಿಸುವುದಿಲ್ಲ. ಆಗ ನಮಗೆ ಏನನ್ನಾದರೂ ನೋಡುವುದು ಒಂದು ತಟಸ್ಥ ಭಾವ ಮಾತ್ರ. ನಾವು ಬದುಕಿರುವ ಸಂಗತಿ ನಿಜವಾಗಿಯೂ ಒಂದು ಪವಾಡದ ವಿಷಯ. ಆದರೆ ಸಾಮಾನ್ಯವಾಗಿ ಇದು ನಮಗೆ ವಿಶೇಷ ಸಂಗತಿಯೆನಲ್ಲ. ಆದರೆ ಯಾವಾಗ ನಮಗೆ ಆಳವಾಗಿ ಸಧ್ಯದ ಕ್ಷಣಗಳಲ್ಲಿ ಬದುಕುವುದರ ಮಹತ್ವದ ಬಗ್ಗೆ ಅರಿವಾಗುತ್ತದೆಯೋ ಆಗ ನಮಗೆ ಈ ಬದುಕು ಎಂಥ ಅದ್ಭುತ ಎಷ್ಟು ಹಿತಕರ ಎನ್ನುವುದು ಗೊತ್ತಾಗುತ್ತದೆ.
ಧ್ಯಾನವನ್ನು ಪ್ರ್ಯಾಕ್ಟೀಸ್ ಮಾಡುವುದರ ಮೂಲಕ ನಾವು ಈ ಸೋ ಕಾಲ್ಡ್ ತಟಸ್ಥ ಭಾವನೆಗಳನ್ನು ಹೇಗೆ ಆರೋಗ್ಯಕರ, ಸುದೀರ್ಘ ಹಿತಕರ ಭಾವನೆಗಳನ್ನಾಗಿ ಬದಲಾಯಿಸಿಕೊಳ್ಳಬಹುದು ಎನ್ನುವುದನ್ನ ಕಲಿಯುತ್ತೇವೆ. ಧ್ಯಾನ ನಮಗೆ ಯಾವುದು ನೋವು ಯಾವುದು ಪವಾಡ ಎನ್ನುವುದನ್ನ ಗುರುತಿಸುವುದನ್ನ ಕಲಿಸುತ್ತದೆ. ಖುಶಿ ತಾನೇ ಒಂದು ಪೋಷಣೆಯ ಸಂಗತಿ. ಖುಶಿಗಾಗಿ ನಾವು ನಮ್ಮನ್ನು ಬಿಟ್ಟು ಬೇರೆಲ್ಲೂ ಹುಡುಕಾಡಬೇಕಿಲ್ಲ. ನಾವು ಖುಶಿಯ ಅಸ್ತಿತ್ವದ ಕುರಿತು ಅರಿವು ಬೆಳೆಸಿಕೊಳ್ಳಬೇಕಷ್ಟೇ, ಆಗ ಖುಶಿ ನಮ್ಮ ಕೈಗೆಟಕುವಷ್ಟು ಹತ್ತಿರ.
ನಮ್ಮ ಗಲ್ಲದ ಮೇಲೆ ತಂಗಾಳಿ ಸುಳಿದಾಡುವಾಗ ಆಗುವಂಥ ಹಿತಕರ ಫೀಲಿಂಗ್ ನ ನಾವು ಆನಂದಿಸಿಬೇಕು, ಇದು ನಮಗೆ ಅವಶ್ಯಕ. ಧ್ಯಾನದ ಆನಂದದಿಂದ ನಾವು ಪೋಷಿತರಾದಾಗ, ನಾವು ಸಹನಶೀಲರಾಗುತ್ತೇವೆ, ಇತರರೊಡನೆ ಮತ್ತು ಸ್ವತಃ ನಮ್ಮೊಡನೆ ನಮಗೆ ಸಲಿಗೆಯ ಮತ್ತು ಅಂತಃಕರಣದ ಬಾಂಧವ್ಯ ಎರ್ಪಡುತ್ತದೆ. ಮತ್ತು ಆಗ, ಬದುಕಿನಲ್ಲಿ ಕಠಿಣ ಪರಿಸ್ಥಿತಿಗಳನ್ನು ಸಹನೆ ಮತ್ತು ಧೃಡ ವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಮತ್ತು ಸಮಚಿತ್ತತೆ ನಮಗೆ ಲಭ್ಯವಾಗುತ್ತದೆ.
Source: Thich Nhat Hanh in ‘Awakening of the Heart’ (Parallax Press 2011)


ಅರ್ಥಪೂರ್ಣ
LikeLike