“ಥೂ ನನಗೆ ಮಾವಿನಹಣ್ಣು ಚೂರು ಇಷ್ಟವಿಲ್ಲ. ಅಲ್ಲಿ ನೋಡು ನೀನು ತಿಂದ ಎಸೆದ ಮಾವಿನ ಹಣ್ಣುಗಳನ್ನ ಕತ್ತೆಯೂ ತಿನ್ನುತ್ತಿಲ್ಲ” ವಿದ್ವಾಂಸ್, ಗಾಲೀಬ್ ನನ್ನು ಕೆಣಕಿದ. ಅದಕ್ಕೆ ಗಾಲಿಬ್… । ಚಿದಂಬರ ನರೇಂದ್ರ
ಮಿರ್ಜಾ ಗಾಲೀಬ್ ಗೆ ಮಾವಿನ ಹಣ್ಣು ಎಂದರೆ ಪ್ರಾಣ. ಮಾವಿನ ಹಣ್ಣು ತಿನ್ನಲು ಕುಳಿತನೆಂದರೆ ಕೈ ಬಾಯಿ ಎಲ್ಲ ರಾಡಿ ಮಾಡಿಕೊಳ್ಳುತ್ತಿದ್ದ.
ಒಂದು ದಿನ ಹೀಗೆ ಗಾಲೀಬ್ ಅತ್ಯಂತ ಪ್ರೀತಿಯಿಂದ ಮಾವಿನ ಹಣ್ಣು ತಿನ್ನುತ್ತ ಕುಳಿತಿದ್ದಾಗ, ಯಾವಾಗಲೂ ಗಾಲೀಬ್ ಎಂದರೆ ಅಸೂಯೆ ಪಡುತ್ತಿದ್ದ ವಿದ್ವಾಂಸನೊಬ್ಬ ಅಲ್ಲಿಗೆ ಬರುತ್ತಾನೆ. ಬಂದ ಅತಿಥಿಗೆ ಗಾಲೀಬ್ ಮಾವಿನ ಹಣ್ಣು ತಿನ್ನುವಂತೆ ಇನ್ವೈಟ್ ಮಾಡುತ್ತಾನೆ.
“ಥೂ ನನಗೆ ಮಾವಿನಹಣ್ಣು ಚೂರು ಇಷ್ಟವಿಲ್ಲ. ಅಲ್ಲಿ ನೋಡು ನೀನು ತಿಂದ ಎಸೆದ ಮಾವಿನ ಹಣ್ಣುಗಳನ್ನ ಕತ್ತೆಯೂ ತಿನ್ನುತ್ತಿಲ್ಲ” ವಿದ್ವಾಂಸ್, ಗಾಲೀಬ್ ನನ್ನು ಕೆಣಕಿದ.
“ಹೌದು ಅದು ಮಾವಿನ ಹಣ್ಣು ತಿನ್ನುತ್ತಿಲ್ಲ ಏಕೆಂದರೆ ಅದು ಕತ್ತೆ”. ಗಾಲೀಬ್ ನಗುನಗುತ್ತ ಮಾವಿನ ಹಣ್ಣು ತಿನ್ನುವುದನ್ನ ಮುಂದುವರೆಸಿದ.

