ಕವಿ ಸಿದ್ಧಲಿಂಗಯ್ಯ ಹೇಳಿದ ತಮಾಷೆ ಪ್ರಸಂಗ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಬಹುಶಃ ಅದು ಲಂಕೇಶ್ ಪತ್ರಿಕೆಯ ಆಫೀಸ್ ಅನಿಸತ್ತೆ. ಆಸ್ತಿಕತೆ ನಾಸ್ತಿಕತೆಯ ಬಗ್ಗೆ ಘಟಾನುಘಟಿಗಳ ನಡುವೆ ಬಿರುಸಿನ ಚರ್ಚೆ. ಕವಿ ಸಿದ್ಧಲಿಂಗಯ್ಯ ನಾಸ್ತಿಕತೆಯನ್ನು ಪ್ರತಿಪಾದಿಸುತ್ತ ದೇವರಿಲ್ಲ ಅಂತ ಆಕ್ರಮಣಕಾರಿಯಾಗಿ ವಾದ ಮಾಡ್ತಾರೆ. ಚರ್ಚೆ ನಂತರದ ಪಾರ್ಟಿ ಮುಗಿಸಿಕೊಂಡು ಕವಿಗಳು ತಮ್ಮ ಮನೆಯ ರಸ್ತೆಗಿಳಿದಾಗ ಆಗಲೇ ನಡುರಾತ್ರಿ.
ನಿರ್ಜನ ರಸ್ತೆಯಲ್ಲಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಕವಿಗಳನ್ನು ನೋಡಿ ನಾಲ್ಕೈದು ಬೀದಿನಾಯಿಗಳು ಭೀಕರವಾಗಿ ಕೂಗಲು ಶುರುಮಾಡುತ್ತವೆ. ಕವಿಗಳಿಗೆ ಆಶ್ಚರ್ಯ, ಯಾಕೆ ಎಂದೂ ಇಲ್ಲದ ನಾಯಿಗಳು ಇಂದು ನನ್ನ ನೋಡಿ ಕೂಗ್ತಾ ಇವೆ ಅಂತ.
ಆಗಲೇ ಕವಿಗಳಿಗೆ ನೆನಪಾಗ್ತದೆ, ನಾನು ಇಷ್ಟು ಹೊತ್ತು GOD ಇಲ್ಲ ಅಂತ ವಾದ ಮಾಡಿದೆನಲ್ಲ ಅದಕ್ಕೇ ದೇವರು, DOG ಆಗಿ ಬಂದು ಹೆದರಸ್ತಾ ಇರಬಹುದು ಅಂತ!

