ಮದುವೆಗೆ ಸೂಕ್ತ ವಯಸ್ಸು ಯಾವುದು ಎನ್ನುವುದನ್ನ ಚರ್ಚಿಸುತ್ತ ಮನೋವಿಜ್ಞಾನಿ ಸಲ್ಮಾನ್ ಅಖ್ತರ್ ಒಂದು ಉದಾಹರಣೆ ಕೊಡುತ್ತಾರೆ…। ಚಿದಂಬರ ನರೇಂದ್ರ
ನಿಮ್ಮ ತಲೆಯ ಮೇಲೆ ಜಗತ್ತಿನ ಅತ್ಯಂತ ಉತ್ಕೃಷ್ಟ ಹಲ್ವಾ ಇರುವ ಪಾತ್ರೆಯನ್ನ ಇರಿಸಲಾಗಿದೆ. ಮತ್ತು ಅದನ್ನು ಸ್ವಲ್ಪ ದೂರ ಕೊಂಡೊಯ್ಯುವ ಜವಾಬ್ದಾರಿಯನ್ನ ನಿಮಗೆ ವಹಿಸಲಾಗಿದೆ. ತಲೆಯ ಮೇಲೆ ಇರೋದು ಹಲ್ವಾದ ಪಾತ್ರೆಯೇ ಆದರೂ ಅದಕ್ಕೂ ಒಂದು ಭಾರ ಇದೆ, ಆ ಭಾರವನ್ನ ಹೊರುವ ಸಾಮರ್ಥ್ಯ ಕುತ್ತಿಗೆಗೆ ಇರಬೇಕಾಗುತ್ತದೆ.
ಮದುವೆಯ ವಿಷಯದಲ್ಲಿ ಇಂಥ ಸಾಮರ್ಥ್ಯ ಸಾಮಾನ್ಯವಾಗಿ ಮಿನಿಮಮ್ 24 ವರ್ಷವಾಗಿರುತ್ತದೆ.

