ಝೆನ್ ಒಂದು ಅನನ್ಯ ವಿದ್ಯಮಾನ… । ಓಶೋ ವ್ಯಾಖ್ಯಾನ

ನಿದ್ದೆಯಿರಲಿ, ಗೊರಕೆಯಿರಲಿ ಎಲ್ಲವನ್ನೂ ಒಪ್ಪಿಕೊಳ್ಳುವ ಮಹಾನ್ ಸ್ವೀಕಾರ, ಝೆನ್ ನಲ್ಲಿ ಮಾತ್ರ ಕಾಣ ಸಿಗುವಂಥದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಶುದ್ಧ ಸಭ್ಯತೆಯಲ್ಲಿ
ಯಾವ ಔಪಚಾರಿಕತೆಯೂ ಇಲ್ಲ,
ಪರಿಪೂರ್ಣ ನಡತೆ
ಕಾಳಜಿಯಿಂದ ಮುಕ್ತವಾಗಿದೆ,
ಜ್ಞಾನ-ವಿವೇಕ ಗಳು
ತಕ್ಷಣ ಸಂಭವಿಸುವಂಥವು
ಯೋಚಿಸಿ ನಿರ್ಧಾರಮಾಡುವಂಥವುಗಳಲ್ಲ,
ಆಪ್ತ ಪ್ರೀತಿಗೆ, ಪ್ರದರ್ಶನ
ಪ್ರಮಾಣಗಳು ಸಾಧ್ಯವಾಗುವುದಿಲ್ಲ,
ಪ್ರಾಮಾಣಿಕತೆ ನಿಶ್ಚಿತವಾಗಿ
ಯಾವುದನ್ನೂ ವಾಗ್ದಾನ ಮಾಡುವುದಿಲ್ಲ.

~ ಜುವಾಂಗ್ ತ್ಸೇ


ಮಾಸ್ಟರ್ ಹಕುಜು ಒಬ್ಬ ಮಹಾನ್ ಝೆನ್ ಮಾಸ್ಟರ್, ತೆಂಡೈ ಸೆಕ್ಟ್ ಕಾಲೇಜ್ ನಲ್ಲಿ ವಿಶಿಷ್ಟ ಉಪನ್ಯಾಸಕಾರನಾಗಿ ಸೇವೆ ಸಲ್ಲಿಸುತ್ತಿದ್ದ. ಒಂದು ಬಿರು ಬೇಸಿಗೆಯ ಮಧ್ಯಾಹ್ನ ಎಂದಿನಂತೆ ಮಾಸ್ಟರ್ ಹಕುಜು ತನ್ನ ಅಪ್ರತಿಮ ಉತ್ಸಾಹದಲ್ಲಿ ಚೈನಿಸ್ ಕ್ಲಾಸಿಕ್ ಗಳ ಬಗ್ಗೆ ಪಾಠ ಮಾಡುತ್ತಿದ್ದಾಗ, ಕೆಲ ವಿದ್ಯಾರ್ಥಿಗಳು ತೂಕಡಿಸುತ್ತಿರುವುದನ್ನು ಅವನು ಗಮನಿಸಿದ.

ತಕ್ಷಣ ಮಧ್ಯದಲ್ಲಿಯೇ ಪಾಠ ನಿಲ್ಲಿಸಿದ ಮಾಸ್ಟರ್ ಹಕುಜು, “ಇವತ್ತು ಮಧ್ಯಾಹ್ನದ ಬಿಸಿಲು ಬಹಳ ಜೋರು ಅಲ್ವಾ? ನಿಮಗೆ ನಿದ್ದೆ ಬಂದದ್ದು ತಪ್ಪೇನಲ್ಲ. ನಾನೂ ನಿಮ್ಮ ಜೊತೆ ಸೇರಿಕೊಂಡರೆ ಅಡ್ಡಿ ಇಲ್ಲ ತಾನೇ ?” ಎನ್ನುತ್ತ ಮಾಸ್ಟರ್ ತನ್ನ ಪುಸ್ತಕ ಮುಚ್ಚಿಟ್ಟು ಖುರ್ಚಿ ಗೆ ಒರಗಿ ನಿದ್ದೆ ಹೋಗಿಬಿಟ್ಟ.

ಮಾಸ್ಟರ್ ನ ಈ ವರ್ತನೆಯಿಂದ ವಿದ್ಯಾರ್ಥಿಗಳು ಅವಾಕ್ ಆದರು. ತೂಕಡಿಸುತ್ತಿದ್ದ ಕೆಲ ವಿದ್ಯಾರ್ಥಿಗಳು, ಮಾಸ್ಟರ್ ನ ಗೊರಕೆ ಗೆ ಬೆಚ್ಚಿ ಎಚ್ಚರಗೊಂಡರು. ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಜಾಗದಲ್ಲಿ ಎಚ್ಚರದಲ್ಲಿ ಎದ್ದು ಕುಳಿತು ಮಾಸ್ಟರ್ ನಿದ್ದೆಯಿಂದ ಎಚ್ಚರಗೊಳ್ಳುವುದನ್ನೇ ಕಾಯತೊಡಗಿದರು.

ಇಂಥ ಘಟನೆಯನ್ನ, ಮಾನವಿಯವಾಗುವ ಇಂಥದೊಂದು ಸಾಧ್ಯತೆಯನ್ನ, ಅಪರಿಪೂರ್ಣ ಆಗಿದ್ದುಕೊಂಡು ಅದರ ಬಗ್ಗೆ ಚಿಂತೆಯನ್ನೇ ಮಾಡದ ಅಪರೂಪವನ್ನ ನೀವು ಝೆನ್ ನಲ್ಲಿ ಮಾತ್ರ ನೋಡಬಹುದು. ನಿದ್ದೆಯಿರಲಿ, ಗೊರಕೆಯಿರಲಿ ಎಲ್ಲವನ್ನೂ ಒಪ್ಪಿಕೊಳ್ಳುವ ಮಹಾನ್ ಸ್ವೀಕಾರ, ಝೆನ್ ನಲ್ಲಿ ಮಾತ್ರ ಕಾಣ ಸಿಗುವಂಥದು.

ಇದು ಝೆನ್ ನ ವಿಶೇಷವಲ್ಲದ ವಿಶೇಷ. ಜಗತ್ತಿನ ಸಮಸ್ತ ಧರ್ಮಗಳಲ್ಲಿ ಝೆನ್ ಒಂದು ಅನನ್ಯ ವಿದ್ಯಮಾನ, ಸಮಸ್ತ ಧರ್ಮಗಳು ತಲುಪಬಯಸುವ ಶಿಖರದ ತುದಿ ಝೆನ್.


Source ~ Osho / The First Principle / Ch 5

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.