ಮನುಷ್ಯರು idiots ಆಗಿದ್ದಾರೆ! : ಓಶೋ ವ್ಯಾಖ್ಯಾನ

ಮನುಷ್ಯ ನಿಜದೊಂದಿಗಿನ ತನ್ನ ಸಂಪರ್ಕವನ್ನು ಕಳೆದುಕೊಂಡುಬಿಟ್ಟಿದ್ದಾನೆ. ತನ್ನದೇ ಆದ ಕಲ್ಪನಾಲೋಕದಲ್ಲಿ ವಿಹಾರ ಮಾಡುತ್ತಿದ್ದಾನೆ. ಇದನ್ನೇ ನಾನು ಸುಳ್ಳಿನ ಬದುಕು ಎನ್ನುವುದು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸ್ವರ್ಗ ಮತ್ತು ಧರೆ
ಮನುಷ್ಯತ್ವದಿಂದ ಮುಕ್ತವಾಗಿವೆ.
ಅವುಗಳ ಕಣ್ಣಿನಲ್ಲಿ
ಸಮಸ್ತರೂ ಹುಲ್ಲಿನ ನಾಯಿಗಳು*
ಹಾಗೆಯೇ
ಸಂತರಿಗೂ ಮನುಷ್ಯತ್ವ ಎಂಬುದಿಲ್ಲ.
ಅವರಿಗೂ ಎಲ್ಲ
ಹುಲ್ಲಿನ ನಾಯಿಗಳಂತೆಯೇ.*

ತಾವೋ, ಬಲೂನಿನಂತೆ
ಖಾಲಿ ಹೌದು
ಆದರೆ ಅನಂತ ಸಾಧ್ಯತೆಗಳು,
ಏರಿದಂತೆಲ್ಲ ಹಿಗ್ಗುತ್ತದೆ,
ಮಾತು ಚುಚ್ಚಿದಾಗಲೆಲ್ಲ ಅಪ್ಪಚ್ಚಿ.

ಮಾತಿನ ಮನೆಯೆದುರು
ಮಸಣದ ತೋಟ,
ತಾವೋಗೆ ಶರಣಾಗಿ,
ಶರಣು ಎನ್ನಿ.

~ ಲಾವೋತ್ಸೇ

*ಬಲಿ ಕೊಡವುದಕ್ಕಾಗಿ ತಯಾರಿಸಲಾಗುವ ಹುಲ್ಲಿನ ಬೊಂಬೆಗಳು. ವಿಧಿ ಪೂರ್ಣವಾದ ನಂತರ ತುಳಿದಾಡುತ್ತಾರೆ, ಒಲೆಗೆ ಹಾಕುತ್ತಾರೆ.


Religion ನ ರೀತಿ ಎಂದರೆ ಅದು ಸತ್ಯದ ರೀತಿ, ಪ್ರಕೃತಿಯ ರೀತಿ. Religion ಎನ್ನುವ ಪದದ ಮೂಲ RELIGARE – ಹಾಗೆಂದರೆ “to tie you together”. ಸಾಧಾರಣವಾಗಿ ಮನುಷ್ಯ ಅಸ್ತಿತ್ವದ ರೀತಿಯಿಂದ ಹೊರಗೆ ಬಂದುಬಿಟ್ಟಿದ್ದಾನೆ. ಅಸ್ತಿತ್ವದ ತಾಳ ಲಯಗಳಿಂದ ಆಚೆ ಬಂದುಬಿಟ್ಟಿರುವುದನ್ನು ಮರೆತುಬಿಟ್ಟಿದ್ದಾನೆ. ತನ್ನದೇ ಆದ ರೀತಿ ನೀತಿಗಳನ್ನು ರೂಪಿಸಿಕೊಂಡಿದ್ದಾನೆ.

ಮನುಷ್ಯ ನಿಜದೊಂದಿಗಿನ ತನ್ನ ಸಂಪರ್ಕವನ್ನು ಕಳೆದುಕೊಂಡುಬಿಟ್ಟಿದ್ದಾನೆ. ತನ್ನದೇ ಆದ ಕಲ್ಪನಾಲೋಕದಲ್ಲಿ ವಿಹಾರ ಮಾಡುತ್ತಿದ್ದಾನೆ. ಇದನ್ನೇ ನಾನು ಸುಳ್ಳಿನ ಬದುಕು ಎನ್ನುವುದು. ಮನುಷ್ಯ ಅಸ್ತಿತ್ವದ ಬದುಕು ಬಿಟ್ಟು ತನ್ನದೇ ಆದ ಖಾಸಗಿ ಬದುಕನ್ನು ರೂಪಿಸಿಕೊಂಡಿದ್ದಾನೆ. ಮನುಷ್ಯರು “idiots” ಆಗಿದ್ದಾರೆ. Idiot ಬಹಳ ಸುಂದರ ಪದ, ಈ ಪದದ ಗ್ರೀಕ್ ಮೂಲ idios ನ ಅರ್ಥ “one who lives a private life.” Idiot ಎಂದರೆ ಬದುಕಿನ ಬಗ್ಗೆ ತನ್ನದೇ ಆದ ಖಾಸಗಿ ನುಡಿಗಟ್ಟನ್ನು ಹೊಂದಿರುವವನು. ಜಗತ್ತು ಒಂದು ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದು ನೀವು ಇನ್ನೊಂದು ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದರೆ, ನೀವು idiot. ಇಡೀ ಅಸ್ತಿತ್ವ ಒಂದು ದಿಕ್ಕಿನಲ್ಲಿ ಮೂವ್ ಆಗುತ್ತಿದೆ ಆದರೆ ನಿಮಗೆ ನಿಮ್ಮದೇ ಆದ ಖಾಸಗೀ ಗುರಿಗಳಿವೆ.

ಹಣದ ಹಿಂದೆ ಹೋಗುತ್ತಿರುವ ಮನುಷ್ಯ idiot. ಏಕೆಂದರೆ ಸೂರ್ಯನಿಗೆ ಹಣ ಬೇಕಿಲ್ಲ, ಚಂದ್ರನಿಗೆ ಹಣ ಬೇಕಿಲ್ಲ, ಗಿಡ ಮರ ಪಕ್ಷಿಗಳಿಗೆ ಹಣ ಬೇಕಿಲ್ಲ, ನದಿ ಸಾಗರ ಪರ್ವತಗಳಿಗೆ ಹಣ ಬೇಕಿಲ್ಲ, ಪ್ರಾಣಿಗಳು ಹಣದ ಹಿಂದೆ ಓಡುತ್ತಿಲ್ಲ ಏಕೆಂದರೆ ಅವು idiotic ಅಲ್ಲ, ಅವುಗಳಿಗೆ ಖಾಸಗಿ ಬದುಕು ಇಲ್ಲ. ಇಡೀ ಅಸ್ತಿತ್ವ ಹಣ ಇಲ್ಲದೇ ಬದುಕುತ್ತಿರುವಾಗ ಮನುಷ್ಯ ಮಾತ್ರ ಹಣದ ಸಲುವಾಗಿ ಹುಚ್ಚನಾಗಿದ್ದಾನೆ. ಅವನು idiocy ಎನ್ನುವ ಮಾರಕ ರೋಗದಿಂದ ಬಳಲುತ್ತಿದ್ದಾನೆ. ಅವನಿಗೆ ತನ್ನದೇ ಆದ ಖಾಸಗಿ ಬೇಕು ಬೇಡಗಳಿವೆ.

ಒಂದು ದಿನ ಯಾರಿಗಾದರೂ ದೇವರು ಭೇಟಿಯಾಗಿ “ ನೀನು ಏನು ಹುಡುಕುತ್ತಿದ್ದೀಯ” ಎಂದು ಕೇಳಿದಾಗ ಅವರ ಉತ್ತರ “ಹಣ” ಆಗಿದ್ದರೆ, ಈ ಉತ್ತರ ದೇವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ದೇವರಿಗೆ ಹಣ ಎಂದರೆ ಏನು ಎನ್ನುವುದು ಗೊತ್ತಿಲ್ಲ. Adam Smith, ಅಥವಾ Ricardo ಅಥವಾ Galbraith ಅಥವಾ ಅಂಥ ಬೇರೆ ಯಾರಾದರೂ ಧಿಮಂತ ಅರ್ಥಶಾಸ್ತ್ರಜ್ಞರು ವಿವರಿಸಿದರೂ ಬಹುಶಃ ಹಣ ಎಂದರೆ ಏನು ಎನ್ನುವುದು ದೇವರಿಗೆ ಅರ್ಥವಾಗಲಿಕ್ಕಿಲ್ಲ. ಇಡೀ ಅಸ್ತಿತ್ವ ಹಣ ಇಲ್ಲದೇ ಬದುಕುತ್ತಿರುವಾಗ ಮನುಷ್ಯ ಮಾತ್ರ ಈ idiocy ನ ಸೃಷ್ಟಿ ಮಾಡಿಕೊಂಡು ಪಡಬಾರದ ಕಷ್ಟ ಪಡುತ್ತಿದ್ದಾನೆ.


Öshô / Ecstasy # The Forgotten Language #Chapter:4

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.