ಜ್ಞಾನೋದಯ ಹೊಂದಲು ಏನೂ ಮಾಡಬೇಕಿಲ್ಲ… । ಓಶೋ

ಧ್ಯಾನ, ವಿಜ್ಞಾನ ಅಲ್ಲ, ಕಲೆ ಅಲ್ಲ, ಇದು ಒಂದು ಕೌಶಲ್ಯ (knack). ನಿಮಗೆ ಬೇಕಾಗಿರುವುದು ಯಾವ ದೊಡ್ಡ ಸಾಮರ್ಥ್ಯವೂ ಅಲ್ಲ, ಸಹನೆ ಮಾತ್ರ ~ ಓಶೋ ರಜನೀಶ್। ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ಯಾವ ರಹಸ್ಯಗಳಿಲ್ಲದ ಒಬ್ಬ ಸಾಧಾರಣ ಮನುಷ್ಯ. ನಾನು ಒಂದು ತೆರೆದ ಪುಸ್ತಕ, ಮತ್ತು ಆ ಪುಸ್ತಕದಲ್ಲಿ ಏನನ್ನೂ ಬರೆಯಲಾಗಿಲ್ಲ. ಇದನ್ನ ನೀವು ಸಿಕ್ರೇಟ್ ಎನ್ನುವಿರಾದರೆ ಅದು ನಿಮ್ಮ ಆಯ್ಕೆ. ಆದರೆ ಇದು ಓಪನ್ ಸಿಕ್ರೇಟ್.

If you want to be, learn the art of being: not to be. ಇನ್ನೊಮ್ಮೆ ಹೇಳುತ್ತೇನೆ ಕೇಳಿ, ನನಗೆ ಗೊತ್ತು ನಿಮಗೆ ಸರಿಯಾಗಿ ಕೇಳಿಸುವುದಿಲ್ಲ. ನಿಮಗೆ ನಿಜವಾಗಿಯೂ ಏನಾದರೂ ಆಗುವುದಿದ್ದರೆ, ಇರುವುದು ಒಂದೇ ದಾರಿ, ಆಗದೇ ಇರುವುದನ್ನ ಕಲಿಯಿರಿ. ಮಾಯವಾಗಿಬಿಡಿ. ದೇವರು ಅಸ್ತಿತ್ವದಿಂದ ಮಾಯವಾದಂತೆ ನೀವು ನಿಮ್ಮ ಬದುಕಿನಿಂದ ಮಾಯವಾಗಿಬಿಡಿ. ಬದುಕು ತನ್ನ ಒಪ್ಪಂದಗಳಿಗನುಸಾರವಾಗಿ ಮುಂದುವರೆಯಲಿ.

ಮೌನವಾಗಿರುವುದು, ಜಗತ್ತಿನ ಅತ್ಯಂತ ಸರಳ ಕಲೆ. ಮಾಡುವುದಲ್ಲ ಮಾಡದೇ ಇರುವುದು, It is not a doing, it is a non-doing. ಇದು ಕಠಿಣವಾಗುವುದು ಹೇಗೆ ಸಾಧ್ಯ?

ನಾನು ನಿಮಗೆ ಸೋಮಾರಿಯಾಗಿದ್ದುಕೊಂಡು ಜ್ಞಾನೋದಯವನ್ನು ಹೊಂದುವ ದಾರಿಯನ್ನು ತೋರಿಸಿಕೊಡುತ್ತಿದ್ದೇನೆ. ಜ್ಞಾನೋದಯವನ್ನು ಹೊಂದಲು ನೀವು ಏನೂ ಮಾಡಬೇಕಿಲ್ಲ, ಏಕೆಂದರೆ ಅದು ನಿಮ್ಮ ಪ್ರಕೃತಿ. ಅದು ಈಗಾಗಲೇ ನಿಮ್ಮೊಳಗೆ ಇದೆ. ನೀವು ಎಷ್ಟು busy ಆಗಿಬಿಟ್ಟಿದ್ದೀರೆಂದರೆ, ನಿಮಗೆ ನಿಮ್ಮ ಸಹಜ ಸ್ವಭಾವದ ಪರಿಚಯ ಇಲ್ಲ.

ನಿಮ್ಮ ಒಳಗಿನ ಆಳದಲ್ಲಿ ಕೂಡ exactly ಎಲ್ಲ ನಿಮ್ಮ ಹೊರಗಿನಂತೆಯೇ ಇದೆ : ಸೌಂದರ್ಯ, ಮೌನ, ಭಾವಪರವಶತೆ, ಆನಂದ ಎಲ್ಲವೂ. ಆದರೆ ದಯಮಾಡಿ ನಿಮ್ಮ ಮೇಲೆ ನೀವು ಸ್ವಲ್ಪ ಕರುಣೆಯಿಟ್ಟು : ಏನೂ ಮಾಡದೇ ಸುಮ್ಮನೇ ಕುಳಿತುಕೊಳ್ಳಿ, ದೈಹಿಕವಾಗಿ, ಮಾನಸಿಕವಾಗಿಯೂ ಏನೂ ಮಾಡಬೇಡಿ.

ಸುಮ್ಮನೇ ಹಾಗೇ ಇದ್ದು ಗಮನಿಸಿ. Being ಎಂದರೆ not doing. ಮತ್ತು ಗಮನಿಸುವುದು ಕೂಡ not doing. ಸುಮ್ಮನೇ ಏನೂ ಮಾಡದೇ ಕುಳಿತು ನಿಮ್ಮ ಸುತ್ತ ಆಗುತ್ತಿರುವುದನ್ನ ಗಮನಿಸಿ. ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಓಡಾಡಲು ಶುರು ಮಾಡುತ್ತವೆ, ನಿಮ್ಮ ದೇಹದಲ್ಲಿ ಅಲ್ಲಲ್ಲಿ tension ಕಾಣಿಸುಕೊಳ್ಳುತ್ತದೆ. ಸ್ವಲ್ಪ ತಲೆ ನೋವು ಕೂಡ ಕಾಣಿಸಿಕೊಳ್ಳಬಹುದು. ಈ ಎಲ್ಲವನ್ನೂ ನೀವು ಹೊರಗಿನಿಂದ ಗಮನಿಸುತ್ತಿರಿ. ಅವುಗಳ ಜೊತೆ ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಡಿ. ನೀವು ಬೆಟ್ಟದ ಮೇಲೆ ಇರುವಂತೆ, ನಡೆಯುತ್ತಿರುವುದೆಲ್ಲ ಕಣಿವೆಯಲ್ಲಿ ನಡೆಯುತ್ತಿರುವಂತೆ ಗಮನಿಸಿ. ಇದು ಕಲೆ ಅಲ್ಲ, ಕೌಶಲ್ಯ.

ಧ್ಯಾನ, ವಿಜ್ಞಾನ ಅಲ್ಲ, ಕಲೆ ಅಲ್ಲ, ಇದು ಒಂದು ಕೌಶಲ್ಯ (knack). ನಿಮಗೆ ಬೇಕಾಗಿರುವುದು ಯಾವ ದೊಡ್ಡ ಸಾಮರ್ಥ್ಯವೂ ಅಲ್ಲ, ಸಹನೆ ಮಾತ್ರ.

ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ,

” ಮಾಸ್ಟರ್ ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕು? “

“ಏಳು ವರ್ಷ” ಮಾಸ್ಟರ್ ಉತ್ತರಿಸಿದ.

” ಕಷ್ಟ ಪಟ್ಟು ಸಾಧನೆ ಮಾಡಿದರೆ ? “

ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.

” ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.


Source: …ØshØ… Excerpts from the book From~ the False to the Truth~ Chapter::3

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.