ಅನಂತಮೂರ್ತಿ ಹೇಳಿದ ವಿ.ಸೀ ಕತೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ಯು.ಆರ್.ಅನಂತಮೂರ್ತಿ ಮತ್ತು ವಿ. ಸೀತಾರಾಮಯ್ಯನವರು ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ಹತ್ತುತ್ತಾರೆ. Business class ಲ್ಲಿ ಪುಟ್ಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಅವರು ಕುಳಿತಿದ್ದರೆ ಅವರ ಪಕ್ಕದಲ್ಲಿ ನವ್ಯಕಾವ್ಯ ಮಾರ್ಗದ ಪ್ರವರ್ತಕರೂ ಸಾಯಿಬಾಬಾ ಅವರ ಪರಮ ಭಕ್ತರೂ ಆದ ವಿ.ಕೆ.ಗೋಕಾಕರು ವಿನೀತರಾಗಿ ಕುಳಿತಿದ್ದಾರೆ.
ವಿಮಾನ ಹತ್ತಿದ ಪ್ರತಿಯೊಬ್ಬ ಪ್ರಯಾಣಿಕರೂ ಸಾಯಿಬಾಬಾ ಅವರಿಗೆ ನಮಸ್ಕಾರ ಮಾಡಿ ಮುಂದೆ ತಮ್ಮ ಸೀಟಿಗೆ ಹೋಗುತ್ತಿದ್ದಾರೆ. ಬಹುತೇಕ ಪ್ರಯಾಣಿಕರು ಮಾಡರ್ನ್ ದಿರಿಸುಗಳನ್ನ ಧರಿಸಿದ ಹೊಸಕಾಲದ ಜನರು.
ಆಗ ಅನಂತಮೂರ್ತಿಯವರು ವಿ.ಸಿ ಯವರನ್ನು ಪ್ರಶ್ನೆ ಮಾಡುತ್ತಾರೆ, “ಯಾಕೆ ಸರ್ ನೀವು ಸಾಯಿಬಾಬಾ ಅವರಿಗೆ ನಮಸ್ಕಾರ ಮಾಡೋದಿಲ್ವಾ?”
“ಇಲ್ಲಪ್ಪ, ನಾನು ಹಳೇ ಕಾಲದ ಮನುಷ್ಯ” ತಮ್ಮ ತಲೆಯ ಮೇಲಿನ ಪೇಟ ಸರಿ ಮಾಡಿಕೊಳ್ಳುತ್ತ ಉತ್ತರಿಸುತ್ತಾರೆ ವಿ.ಸಿ.
ಈ ಘಟನೆಯನ್ನ ಯು.ಆರ್.ಅನಂತಮೂರ್ತಿ ಅವರು ತಮ್ಮ ಪೂರ್ವಾಪರ ಕೃತಿಯಲ್ಲಿ ದಾಖಲಿಸಿದ್ದಾರೆ.

