Attention ಎಂದರೆ…

Attention ಎನ್ನುವುದು ಮೈಂಡ್ ಫುಲ್ ನೆಸ್ ನ ಬೆನ್ನೆಲಬು. ಮೈಂಡ್ ಫುಲ್ ನೆಸ್ ಪ್ರ್ಯಾಕ್ಟೀಸ್ ನ ಲಾಭಗಳ ಬಗ್ಗೆ ನಾವು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದಂತೆ, ನಮಗೆ ಈ attention ಎನ್ನುವುದರ ಮುಖ್ಯ ಆಯಾಮಗಳು ಅರ್ಥವಾಗುತ್ತ ಹೋಗುತ್ತವೆ ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಈಚೊ ನ ಒಬ್ಬ ಶಿಷ್ಯ ಕೇಳಿಕೊಂಡ, “ ಮಾಸ್ಟರ್ ಈ ಕಾಗದದ ಮೇಲೆ ನನಗೆ ಒಂದು ಅದ್ಭುತ ಜ್ಞಾನದ ವಿಷಯ ಬರೆದುಕೊಡಿ”.

ಕೂಡಲೇ ಮಾಸ್ಟರ್ ಈಚೊ ತನ್ನ ಬ್ರಶ್ ನಿಂದ ಒಂದೇ ಒಂದು ಪದ ಬರೆದ “ Attention “. ಮಾಸ್ಟರ್ ಬರೆದದ್ದನ್ನು ನೋಡಿ ಶಿಷ್ಯನಿಗೆ ಆಶ್ಚರ್ಯವಾಯಿತು, “ ಇಷ್ಟೇನಾ ಮಾಸ್ಟರ್?” ಆಶ್ಚರ್ಯದಿಂದ ಕೇಳಿದ.

ಮಾಸ್ಟರ್ ತನ್ನ ಬ್ರಶ್ ತೆಗೆದುಕೊಂಡು ಮತ್ತೆ ಬರೆದ, “Attention Attention”. ಈ ಬಾರಿ ಶಿಷ್ಯನಿಗೆ ಭಾರಿ ಕಸಿವಿಸಿ ಆಯ್ತು. “ನೀವು ಬರೆದದ್ದು ಅಂಥ ಆಳವಾದ, ಸೂಕ್ಷ್ಮವಾದ ಮಾತು ಎಂದು ನನಗೇನೂ ಅನಿಸುವುದಿಲ್ಲ”. ಈ ಬಾರಿ ಬಹಿರಂಗವಾಗಿಯೇ ಶಿಷ್ಯ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದ.

“ಕೊನೆಪಕ್ಷ ಈ Attention ಎಂದರೆ ಏನು ಎನ್ನುವುದನ್ನಾದರೂ ಹೇಳಿರಿ” ಶಿಷ್ಯ ಪಟ್ಟು ಬಿಡದೆ ಮತ್ತೆ ಪ್ರಶ್ನೆ ಮಾಡಿದ. “ Attention ಎಂದರೆ Attention ಅಷ್ಟೇ” ಮಾಸ್ಟರ್ ಈಚೊ ನದು ಸರಳ ಉತ್ತರ.

ನಿಜವಾಗಿಯೂ Attention ಎನ್ನುವುದು ಮೈಂಡ್ ಫುಲ್ ನೆಸ್ ನ ಬೆನ್ನೆಲಬು. ಮೈಂಡ್ ಫುಲ್ ನೆಸ್ ಪ್ರ್ಯಾಕ್ಟೀಸ್ ನ ಲಾಭಗಳ ಬಗ್ಗೆ ನಾವು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದಂತೆ, ನಮಗೆ ಈ attention ಎನ್ನುವುದರ ಮುಖ್ಯ ಆಯಾಮಗಳು ಅರ್ಥವಾಗುತ್ತ ಹೋಗುತ್ತವೆ. ಯಾವಾಗಲೂ attention ಆಕಸ್ಮಿಕ ಆಗಿರಬಾರದು, ಅದು ಯಾವಾಗಲೂ ಮುದ್ದಾಂ ಆಗಿರಬೇಕು. ಮತ್ತು ಇದಕ್ಕಾಗಿ ನಾವು ವಿಶೇಷ ಪ್ರಯತ್ನ ಮಾಡಬೇಕಾಗುತ್ತದೆ. Attention ಯಾವಾಗಲೂ ಪೂರ್ಣ ಆಗಿರಬೇಕು, ಇದು ಯಾವಾಗಲೂ ಮಾನಸಿಕ ಪ್ರಕ್ರಿಯೆಗಳ ಜೊತೆ, ಹಗಲುಗನಸುಗಳ ಜೊತೆ, ಅಥವಾ ಪ್ಲಾನಿಂಗ್ ಜೊತೆ ಸ್ಪರ್ಧೆಗೆ ಬಿದ್ದು ಹೋಳಾಗಬಾರದು. ಯಾವಾಗ attention ಪೂರ್ಣವಾಗಿರುತ್ತದೆಯೋ ಆಗ ನಮ್ಮ ಸಹಜ ಸ್ವಭಾವವಾದ dissociation (ದೂರವಾಗಿಸುವಿಕೆ) ಮಾಯವಾಗುತ್ತದೆ, ಮತ್ತು ಬದುಕಿನಿಂದ ನಮ್ಮ ಎಲ್ಲ ಬೇರ್ಪಡುವಿಕೆ ಆವಿಯಾಗಿ ಹೋಗಿಬಿಡುತ್ತದೆ, ಆಗ attention, ಸಮಗ್ರತೆಯ, ಐಕ್ಯತೆಯ (non duality) ಆಚರಣೆಯಾಗುತ್ತದೆ. ಈ attention ನಲ್ಲಿ, awareness ನಲ್ಲಿ ನಾವು ನಮ್ಮ ಬದುಕಾಗಿರುತ್ತೇವೆ, ನಮ್ಮ ಬದುಕು ನಾವಾಗಿರುತ್ತದೆ. ಇಲ್ಲಿ ಯಾವ ಅಂತರವೂ ಇಲ್ಲ.

ಒಮ್ಮೆ ವಿದ್ಯಾರ್ಥಿಯೊಬ್ಬ ಮಾಸ್ಟರ್ ರೋಶಿಯವರನ್ನು ಪ್ರಶ್ನೆ ಮಾಡಿದ.

“ ಮಾಸ್ಟರ್, ಯಾಕೆ ಜಪಾನಿಗಳು ಚಹಾದ ಕಪ್ ಗಳನ್ನ ಅಷ್ಚು ತೆಳುವಾಗಿ, ಅಷ್ಟು ನಾಜೂಕಾಗಿ ತಯಾರಿಸುತ್ತಾರೆ? ಅವು ಒಡೆದು ಹೋಗುವ ಭಯ ಇರುವುದಿಲ್ಲವೆ ಅವರಿಗೆ?”

“ ಅದು ಹಾಗಲ್ಲ, ಅವನ್ನು ಬಳಸುವವರು ಕೂಡ ಜಾಗರೂಕರಾಗಿರಬೇಕು, ಹಗುರಾಗಿರಬೇಕು ಅಂತ, ಇದೂ ಕೂಡ ತರಬೇತಿಯ ಒಂದು ವಿಧಾನ” ಮಾಸ್ಟರ್ ರೋಶಿ ಉತ್ತರಿಸಿದರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.