ಕವಿ ಕುಮಾರ ವಿಶ್ವಾಸ ನೆನಪಿಸಿಕೊಂಡ ಮಹರ್ಷಿ ರಮಣರ ಪ್ರಸಂಗ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಮಹರ್ಷಿ ರಮಣರಿಗೆ ದೈವ ಸಾಕ್ಷಾತ್ಕಾರವಾಗಿತ್ತು ಎಂದು ನಂಬಲಾಗುತ್ತದೆ. ಒಮ್ಮೆ MSc ಕೆಮಿಸ್ಟ್ರಿ ಮಾಡಿ, PHD ಮಾಡುತ್ತಿದ್ದ ತರುಣನೊಬ್ಬ ರಮಣರ ಬಳಿ ಬರುತ್ತಾನೆ.
“ನಾನು ಎಲ್ಲ ಬಿಟ್ಟು ನಿಮಗೆ ಶರಣಾಗಲು ಬಯಸುತ್ತೇನೆ. ನನಗೆ ದೇವರನ್ನು ಗೊತ್ತುಮಾಡಿಕೊಳ್ಳುವ ಆಸೆ. ನನಗೆ ಸಹಾಯ ಮಾಡುವಿರಾ?” ಎಂದು ಆ ಯುವಕ ರಮಣರಲ್ಲಿ ಬೇಡಿಕೊಳ್ಳುತ್ತಾನೆ.
“ಯಾರೊಂದಿಗಾದರೂ ನಿನಗೆ ಪ್ರೇಮವಾಗಿದೆಯಾ?” ರಮಣರು ಪ್ರಶ್ನೆ ಮಾಡುತ್ತಾರೆ.
“ಓಹ್ ಇಂಥದರಲ್ಲೆಲ್ಲ ನನಗೆ ಆಸಕ್ತಿ ಇಲ್ಲ” ತಕ್ಷಣ ಯುವಕ ಉತ್ತರಿಸುತ್ತಾನೆ.
“ಒಬ್ಬ ಹುಡುಗಿಯನ್ನು ನೋಡಿ, ಈ ಹುಡುಗಿ ಸಿಗದಿದ್ದರೆ ನನ್ನ ಜನ್ಮ ವ್ಯರ್ಥ ಎಂದು ನಿನಗೆ ಯಾವಾಗಲಾದರೂ ಅನಿಸಿದ್ದಿದೆಯಾ?” ಮತ್ತೆ ಪ್ರಶ್ನೆ ಮಾಡುತ್ತಾರೆ ರಮಣರು.
“ನಾನು ಹೇಳಿದೆನಲ್ಲ ನನಗೆ ಇಂಥದರಲ್ಲೆಲ್ಲ ಆಸಕ್ತಿ ಇಲ್ಲ” ತರುಣ ಮತ್ತೆ ಅದೇ ಉತ್ತರ ನೀಡುತ್ತಾನೆ.
ಆಗ ಮಹರ್ಷಿ ರಮಣರು ಹೇಳುತ್ತಾರೆ,
“ ಹಾಗಾದರೆ ನಿನಗೆ ದೇವರನ್ನು ಭೇಟಿ ಮಾಡಿ ಮಾಡಿಸುವುದು ನನಗೆ ಸಾಧ್ಯವಿಲ್ಲ “
“ಯಾಕೆ?”
“ನೀನು ಇನ್ನೂ ಮನುಷ್ಯರನ್ನೇ ಭೇಟಿ ಮಾಡಿಲ್ಲ, ನಿನಗೆ ದೇವರನ್ನು ಹೇಗೆ ಭೇಟಿ ಮಾಡಿಸಲಿ ನಾನು ?” ರಮಣರು ಆ ತರುಣನಿಗೆ ತಿಳಿ ಹೇಳುತ್ತಾರೆ

