ತತ್ವಜ್ಞಾನದ ತಿಳುವಳಿಕೆಯ ಹೊರತಾಗಿಯೂ ನಾವು ಮಕ್ಕಳಾಗಿದ್ದಾಗ ಅನುಭವಿಸಿದ ಕನಸುಗಳು ನಮಗೆ ಇನ್ನೂ ನೆನಪಿವೆ. ಕನಸಲ್ಲಿ ನಮಗೆ ಸೂಪರ್ ಪಾವರ್ ಸಿಕ್ಕಿದೆ ಮತ್ತು ನಾವು ಹಕ್ಕಿಯ ಹಾಗೆ ಹಾರುತ್ತಿದ್ದೇವೆ ಮತ್ತು ಈ ಸುಖದ ಅನುಭವದ ನಡುವೆಯೇ ನಮಗೆ ಬೆಳಿಗ್ಗೆ ಸ್ಕೂಲ್ ಗೆ ಹೋಗಬೇಕಾಗಿರುವುದರಿಂದ ಎಚ್ಚರಾಗುತ್ತದೆ. ಅಥವಾ ಈಗ ನಾವು ಬೆಳೆದು ದೊಡ್ಡವರಾಗಿರುವಾಗ ನಮಗೆ ನಮ್ಮ ಯಾವ ಕನಸೂ ನೆನಪಿರುವುದಿಲ್ಲ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಬ್ರಹ್ಮಾಂಡದ ಹುಟ್ಟಿನಲ್ಲಿ
ನಮ್ಮೆಲ್ಲರ ಗುಟ್ಟು.
ತಾಯಿಯನ್ನು ಹುಡುಕಾಡುವುದೆಂದರೆ
ಮಕ್ಕಳನ್ನು ಮಾತಾಡಿಸುವುದು.
ಮಕ್ಕಳ ಹೆಗಲ ಮೇಲೆ ನಿಂತು
ತಾಯಿಯನ್ನು ಅಪ್ಪಿಕೊಂಡಾಗ
ಸಾವಿಗೂ ಭಯ.
ಬಾಯಿ, ಬಾಗಿಲು ಮುಚ್ಚಿದಾಗ
ಬದುಕು ತೆರೆದುಕೊಳ್ಳುವುದು.
ಮಾತು ಗೆದ್ದಾಗ, ವ್ಯವಹಾರ ದ್ವಿಗುಣವಾದಾಗ
ಬದುಕಿಗೆ ಬರೆ.
ಸಂತನಿಗೆ ಸಣ್ಣದೂ ಸ್ಪಷ್ಟ
ಯೋಧನಿಗೆ ಸೋಲೂ ಒಂದು ಶಕ್ತಿ
ತಾವೋ ಬೆಳಕಲ್ಲಿ
ಒಳಗಿನದನ್ನು ಕಾಣುವುದೇ
ಶಾಶ್ವತವನ್ನು ಅನುಭವಿಸುವ ವಿಧಾನ.
~ ಲಾವೋತ್ಸೇ
ನಮಗೆ 100% ಖಂಡಿತವಾಗಿ ಗೊತ್ತಿರುವಂಥದು ಏನಾದರೂ ಇದೆಯಾ?
ನಮಗೆ ಏನಾದರೂ ಗೊತ್ತಿದೆಯೆನ್ನುವುದು ನಮಗೆ ಹೇಗೆ ಗೊತ್ತಾಗುತ್ತದೆ?
ಫಿಲಾಸೊಫಿಯಲ್ಲಿ epistemological scepticism (ಜ್ಞಾನ ಶಾಸ್ತ್ರೀಯ ಸಂದೇಹವಾದ) ಎನ್ನುವ ದೃಷ್ಟಿಕೋನವಿದೆ. ಇದರ ಪ್ರಕಾರ, ನಮಗೆ ಯಾವುದರ ಬಗ್ಗೆಯೂ ಖಂಡಿತವಾಗಿ ಗೊತ್ತಿರುವುದು ಸಾಧ್ಯವಿಲ್ಲ.
ಈ ಕುರಿತು ಸಂದೇಹವಾದಿಗಳು ಸಾವಿರಾರು ವರ್ಷಗಳಿಂದ ಹಲವಾರು ವಾದಗಳನ್ನು ಮಾಡಿದ್ದಾರೆ. ಈ ವಾದಗಳಲ್ಲಿ ಒಂದು ವಾದ Dreaming Argument. ಈ ವಾದವನ್ನು ಪ್ರಸಿದ್ಧ ತತ್ವಜ್ಞಾನಿ Rene Descartes ತನ್ನ Meditations ಕೃತಿಯಲ್ಲಿ ಬಲವಾಗಿ ಪ್ರತಿಪಾದಿಸುತ್ತಾನೆ.
ಡೆಕಾರ್ಟ್ ನ ಪ್ರಕಾರ ನಮಗೆ ಖಂಡಿತವಾಗಿಯೂ ಗೊತ್ತಿರುವ ಏಕೈಕ ಸಂಗತಿಯೆಂದರೆ We Exist. ನಾವು ಬೇರೆ ಎಲ್ಲದರ ಬಗ್ಗೆ ತಪ್ಪಾಗಿರಬಹುದು ಆದರೆ We Exist ಎನ್ನುವುದರ ಕುರಿತು ತಪ್ಪಾಗಿರುವುದು ಹೇಗೆ ಸಾಧ್ಯ?
ಡೆಕಾರ್ಟ್ ಈ ವಾದವನ್ನು ಬಲವಾಗಿ ಪ್ರತಿಪಾದಿಸಲು ತತ್ವಜ್ಞಾನದ ಇತಿಹಾಸದಲ್ಲಿಯೇ ಬಹಳ ಪ್ರಸಿದ್ದವಾದ ತನ್ನ ಮಾತು ಬಳಸಿದ,
I think therefore I am.
ಡೆಕಾರ್ಟ್ ನ ಪ್ರಕಾರ, ನಾನು ಒಂದು ಕನಸನ್ನು ಅನುಭವಿಸುವಾಗ ಅದನ್ನು ನಿಜ ಎಂದು ನಂಬುತ್ತೇನಾದರೆ ನಾನು ಈಗ ಅನುಭವಿಸುತ್ತಿರುವುದು ಕೇವಲ ಕನಸಲ್ಲ really real ಎಂದು ನಾನು ಹೇಗೆ ತಾನೆ ಹೇಳುವುದು ಸಾಧ್ಯ?
ತತ್ವಜ್ಞಾನದ ತಿಳುವಳಿಕೆಯ ಹೊರತಾಗಿಯೂ ನಾವು ಮಕ್ಕಳಾಗಿದ್ದಾಗ ಅನುಭವಿಸಿದ ಕನಸುಗಳು ನಮಗೆ ಇನ್ನೂ ನೆನಪಿವೆ. ಕನಸಲ್ಲಿ ನಮಗೆ ಸೂಪರ್ ಪಾವರ್ ಸಿಕ್ಕಿದೆ ಮತ್ತು ನಾವು ಹಕ್ಕಿಯ ಹಾಗೆ ಹಾರುತ್ತಿದ್ದೇವೆ ಮತ್ತು ಈ ಸುಖದ ಅನುಭವದ ನಡುವೆಯೇ ನಮಗೆ ಬೆಳಿಗ್ಗೆ ಸ್ಕೂಲ್ ಗೆ ಹೋಗಬೇಕಾಗಿರುವುದರಿಂದ ಎಚ್ಚರಾಗುತ್ತದೆ. ಅಥವಾ ಈಗ ನಾವು ಬೆಳೆದು ದೊಡ್ಡವರಾಗಿರುವಾಗ ನಮಗೆ ನಮ್ಮ ಯಾವ ಕನಸೂ ನೆನಪಿರುವುದಿಲ್ಲ.
ಈ ಕನಸಿನ ವಾದವನ್ನು ಮುಂದುವರೆಸಲು ಈಗ ಡೆಕಾರ್ಟ್ ನ ಬಿಟ್ಟು ಚೀನಿ ತಾವೋಯಿಸ್ಟ ತತ್ವಜ್ಞಾನಿ ಜುವಾಂಗ್ ತ್ಸೇ ನ ಮಾತುಗಳನ್ನು ಗಮನಿಸೋಣ. ಹಾಗೆ ನೋಡಿದರೆ ಇದು ಕೇವಲ ವಾದವಲ್ಲ ಒಂದು ಸಂಗತಿಯನ್ನು ನಿಜವಾಗಿ ಪ್ರಸ್ತುತ ಪಡಿಸುವ ವಿಧಾನ.
ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಅವನು
ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು ನೋಡಿಕೊಂಡಾಗ ಮಾತ್ರ
ಹಾಸಿಗೆಯಲ್ಲಿ
ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ
ಚಿಟ್ಟೆಯೋ?
ಶುರುವಾಯ್ತು ಗೊಂದಲ ಜುವಾಂಗ್-ತ್ಸೆ ಗೆ.
ಆದ್ದರಿಂದ, ಯಾವುದು ವಾಸ್ತವ ಎಂದು ಖಂಡಿತವಾಗಿ ಹೇಳುವುದು ಹೇಗೆ?
ಬದುಕಿನ prototype (ಮೂಲ ಮಾದರಿ) ಕೇವಲ ನಮ್ಮ ಗ್ರಹಿಕೆ ಮಾತ್ರ ಆಗಿರುವುದು ಸಾಧ್ಯವಿದೆಯಲ್ಲವೆ?

