ಮಿಷನರಿ, ಇನ್ನೊಬ್ಬ ವ್ಯಕ್ತಿಯ ಮೈಂಡ್ ನ ತನ್ನ ಧರ್ಮಕ್ಕೆ ಅಥವಾ ಸಿದ್ಧಾಂತಕ್ಕೆ ಅಥವಾ ಅನಿಸಿಕೆಗೆ ಕನ್ವರ್ಟ ಮಾಡಲು ಪ್ರಯತ್ನ ಮಾಡುವವನು. ಆದರೆ ಯಾವ ಮನುಷ್ಯ ಇನ್ನೊಬ್ಬರನ್ನು ಕನ್ವರ್ಟ್ ಮಾಡುವ ಬಯಕೆ ಇಲ್ಲದೇ ಸುಮ್ಮನೇ ತನ್ನ ಹೃದಯವನ್ನ, ತನ್ನ ಇರುವಿಕೆಯನ್ನ (being) ಹಂಚಿಕೊಳ್ಳುತ್ತಾನೋ ಆ ಮನುಷ್ಯ ಮಿಷನರಿ ಅಲ್ಲ, ಅವನು ಮಿಷನ್ । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮಿಷನರಿ ( ಧರ್ಮ ಅಥವಾ ಸಿದ್ಧಾಂತ ಪ್ರಚಾರ ಮಾಡುವವರು ) ಗಳಾಗುವುದೆಂದರೆ ಮಾನವತೆಯ ವಿರುದ್ಧ ಕ್ರೈಮ್ ಮಾಡಿದಂತೆ. ಮಿಷನರಿಗಳಾಗಬೇಡಿ ಸ್ವತಃ ನೀವೇ ಮಿಷನ್ ಆಗಿ. ಈ ಎರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಮಿಷನರಿಗಳಾಗುವುದೆಂದರೆ ಆಷಾಢಭೂತಿಗಳಾಗುವುದು.
ಮಿಷನರಿ, ಇನ್ನೊಬ್ಬ ವ್ಯಕ್ತಿಯ ಮೈಂಡ್ ನ ತನ್ನ ಧರ್ಮಕ್ಕೆ ಅಥವಾ ಸಿದ್ಧಾಂತಕ್ಕೆ ಅಥವಾ ಅನಿಸಿಕೆಗೆ ಕನ್ವರ್ಟ ಮಾಡಲು ಪ್ರಯತ್ನ ಮಾಡುವವನು. ಆದರೆ ಯಾವ ಮನುಷ್ಯ ಇನ್ನೊಬ್ಬರನ್ನು ಕನ್ವರ್ಟ್ ಮಾಡುವ ಬಯಕೆ ಇಲ್ಲದೇ ಸುಮ್ಮನೇ ತನ್ನ ಹೃದಯವನ್ನ, ತನ್ನ ಇರುವಿಕೆಯನ್ನ (being) ಹಂಚಿಕೊಳ್ಳುತ್ತಾನೋ ಆ ಮನುಷ್ಯ ಮಿಷನರಿ ಅಲ್ಲ, ಅವನು ಮಿಷನ್. ಅವನು ಒಂದು ಜೀವಂತ ಜ್ವಾಲೆ, ಅವನು ನೀವು ಇರುವ ಇಡೀ ಸಮುದಾಯವನ್ನು ಬೆಳಗುವಂತೆ ಮಾಡುವವನು. ಮತ್ತು ವಿಶೇಷವಾಗಿ ಎಸ್ಕಿಮೋಗಳಂಥ ಸರಳ ಸಾಧಾರಣ ಜನರನ್ನ ಕನ್ವರ್ಟ ಮಾಡುವ ಅಗತ್ಯವೇ ಇಲ್ಲ, ಅವರನ್ನು ಕೇವಲ ಪ್ರೀತಿಸಬೇಕು. ಅವರು ತಮ್ಮ ಬದುಕಿನಲ್ಲಿ ಇನ್ನಷ್ಟು ಬೆಳಕನ್ನ, ಇನ್ನಷ್ಟು ತಿಳುವಳಿಕೆಯನ್ನ ಬಯಸುತ್ತಿದ್ದಾರೆ. ಮತ್ತು ಆಶ್ಚರ್ಯಕರ ಸಂಗತಿ ಎಂದರೆ ನೀವು ಎಸ್ಕಿಮೋಗಳಂಥ ಸರಳ ಸಾಧಾರಣ ಜನರ ಹತ್ತಿರ ಹೋದಾಗ, ನೀವು ಕೇವಲ ನಿಮ್ಮನ್ನು ಹಂಚಿಕೊಳ್ಳುತ್ತಿಲ್ಲ, ನೀವು ಅವರಿಂದ ಅಸಾಧಾರಣವಾದದ್ದನ್ನ ಕಲಿಯುತ್ತಿದ್ದೀರಿ, ಯಾವುದನ್ನ ಮಾನವತೆ ಮರೆತುಬಿಟ್ಟಿದೆಯೋ ಆ ಸಾಧಾರಣತೆಯನ್ನ.
ಯಾವ ಪುರಾತನ ಜನರು ಇನ್ನೂ ಪುರಾತನರಾಗಿಯೇ ಉಳಿದುಕೊಂಡಿದ್ದಾರೋ, ಯಾರು ಈ ಸಮಕಾಲೀನ ಜಗತ್ತನ್ನು ಇನ್ನೂ ಪ್ರವೇಶ ಮಾಡಿಲ್ಲವೋ ಅವರ ಬಳಿ ನಿಮಗೆ ಕೊಡಲು ಸಾಕಷ್ಟು ಇದೆ. ಆದರೆ ಮಿಷನರಿ ಸ್ವಭಾವದವರಿಗೆ ಕಲಿಯುವ ಯಾವ ಆಸಕ್ತಿಯೂ ಇಲ್ಲ, ಅವರು ಕಲಿಸುವ ಹುಕಿಗೆ ಬಿದ್ದಿದ್ದಾರೆ. ಕಲಿಯುವುದೆಂದರೆ ಅವರಿಗೆ ಅಪಮಾನದ ಸಂಗತಿ. ಆದರೆ ಎಸ್ಕಿಮೋಗಳಂಥ ಸರಳ ಸಾಧಾರಣ ಮೂಲ ನಿವಾಸಿ ಜನರಿಗೆ ಗೊತ್ತಿರುವ ಬದುಕಿನ ಬಹು ಆಯಾಮಗಳ ಬಗ್ಗೆ ನಿಮಗೆ ಯಾವ ಅರಿವೂ ಇಲ್ಲ.
ನಿಮ್ಮ ಧ್ಯಾನ ಮತ್ತು ಪ್ರೀತಿಯ ಮೂಲಕ ನೀವು ಅವರ ಜೊತೆ ಏನಾದರೂ ಹಂಚಿಕೊಳ್ಳುವುದಿದ್ದರೆ…….
ನಿಮ್ಮ ಧರ್ಮಗ್ರಂಥಗಳನ್ನ, ಅವರ ಮುಂದೆ ಇಡಬೇಡಿ. ನಿಮ್ಮ ಗಿಟಾರ್ ನ ಅವರ ಮುಂದೆ ಇಡಿ.
ನಿಮ್ಮ ತತ್ವ ಸಿದ್ಧಾಂತಗಳನ್ನ, ನಿಮ್ಮ ಧರ್ಮಶಾಸ್ತ್ರಗಳನ್ನ ಅವರ ಬಳಿ ಕೊಂಡೊಯ್ಯಬೇಡಿ, ನಿಮ್ಮ ಡಾನ್ಸ್ ನ ಜೊತೆಗೆ ತೆಗೆದುಕೊಂಡು ಹೋಗಿ.
ಆ ಸರಳ ಸಾಮಾನ್ಯರ ಎದುರು ಕೇವಲ ಟೀಚರ್ ಆಗಬೇಡಿ ಅವರಿಂದ ಕಲಿಯ ಬಯಸುವ ವಿದ್ಯಾರ್ಥಿಗಳೂ ಆಗಿ.
ಯಾವ ಶ್ರೇಷ್ಠತೆಯ ವ್ಯಸನವಿಲ್ಲದೆ ನೀವು ಇಷ್ಟು ಮಾತ್ರ ಮಾಡುವಿರಾದರೆ, ನಿಮಗೆ ಅವರಿಂದ ಕಲಿಯುವುದು ಸಾಕಷ್ಟಿದೆ. ನೀವು ಹೀಗೆ ಸಿದ್ಧರಿರುವಾಗ ನಿಮಗೆ ಎಲ್ಲ ದಿಕ್ಕುಗಳಿಂದಲೂ ಕಲಿಯುವ ಅವಕಾಶವಿದೆ, ವಿಶೇಷವಾಗಿ ಇಂಥ ಮೂಲ ನಿವಾಸಿಗಳಿಂದ ಏಕೆಂದರೆ ಅವರನ್ನು ಇನ್ನೂ ಪುರೋಹಿತಶಾಹಿ, ರಾಜಕಾರಣ ಭ್ರಷ್ಟಗೊಳಿಸಿಲ್ಲ, ಅವರು ಇನ್ನೂ ಹಕ್ಕಿಗಳಂತೆ, ಪ್ರಾಣಿಗಳಂತೆ ತಮ್ಮ ಸಹಜ ಸ್ವಭಾವವನ್ನು ಉಳಿಸಿಕೊಂಡಿದ್ದಾರೆ.
ಆಗ ನೀವು ಒಂದು ಸುಂದರ ಸ್ಥಿತಿಯನ್ನು ಪ್ರವೇಶ ಮಾಡುತ್ತಿದ್ದೀರ ಆದರೆ ನೆನಪಿರಲಿ ಮಿಷನರಿಗಳಾಗುವ ಪ್ರಯತ್ನ ಮಾಡಬೇಡಿ.
ಹಂಚಿಕೊಳ್ಳಿ ಆದರೆ ಕನ್ವರ್ಟ ಮಾಡಬೇಡಿ.
ಅನಾವರಣಗೊಳಿಸಿ (transpire) ಆದರೆ ಕನ್ವರ್ಟ್ ಮಾಡಬೇಡಿ.
ಧ್ಯಾನದ ಮೂಲಕ ಅವರಿಗೆ ಇಲ್ಲಿಯ ನಗು, ಇಲ್ಲಿಯ ಮೌನದ ಪರಿಚಯ ಆಗಲಿ. ಧ್ಯಾನ ಧರ್ಮದ ಆಯುಧ ಅಲ್ಲ ಮತ್ತು ನೀವು ಅವರ ಘನತೆಯನ್ನು ನಾಶ ಮಾಡಿ, ಅವರನ್ನು ನಿಮ್ಮ ಗುಂಪಿನೊಳಗೆ ಒಬ್ಬರನ್ನಾಗಿಸಿಕೊಳ್ಳಲು ಬಯಸುವುದಿಲ್ಲ ಎನ್ನುವುದು ನಿಮಗೆ ಸದಾ ನೆನಪಿರಲಿ. ಈ ಕುರಿತು ನಿಮಗೆ ಸದಾ ಎಚ್ಚರಿಕೆ, ಅರಿವು ಇರಬೇಕಾಗುತ್ತದೆ, ಏಕೆಂದರೆ ಹಳೆಯ ಚಟಗಳನ್ನ ತ್ಯಜಿಸುವುದು ಅಷ್ಟು ಸುಲಭ ಅಲ್ಲ.
Source: Osho / Excerpts from the book Om Shanti Shanti Shanti / Chapter: 7

