ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಕನ್ನಡದಲ್ಲಿ ನವ್ಯದ ಭರಾಟೆ ಶುರುವಾಗುತ್ತಿದ್ದಾಗಲೇ ಉತ್ತರ ಕರ್ನಾಟಕದ ಜನಪದದಲ್ಲಿ ಕಂಬಾರರು ತಮ್ಮ “ಹೇಳತೇನ ಕೇಳ” ಪದ್ಯ ಬರಿತಾರೆ. ಸಂಕೀರ್ಣ ರೂಪಕಗಳಿಂದ ಕೂಡಿದ ಈ ಕಾವ್ಯ ಬಹಳ ಜನರಿಗೆ ಅದರ ಲಯದ ಕಾರಣವಾಗಿ ಇಷ್ಟವಾಗುತ್ತದೆಯೇ ಹೊರತು ಅರ್ಥವಾಗುವುದಿಲ್ಲ.
ಒಮ್ಮೆ ಗಿರೀಶ್ ಕಾರ್ನಾಡ್ ಒತ್ತಾಯ ಮಾಡಿದರು ಅಂತ ಕಂಬಾರರು, ಹೇಳತೇನ ಕೇಳ ಪದ್ಯದ ಅರ್ಥವನ್ನ, ಅದರೊಳಗಿನ ಲೈಂಗಿಕ ಪ್ರತಿಮೆಗಳನ್ನ ಕಾರ್ನಾಡರಿಗೆ ವಿವರಿಸುತ್ತಾರೆ. ಕಂಬಾರರ ವಿವರಣೆಯಿಂದ ಆಶ್ಚರ್ಯಚಕಿತರಾದ ಗಿರೀಶರು, “ಕಂಬಾರ, ನೀನು ಪದ್ಯ ಬರಕೋತ ಹೋಗು ಆದರ ಅದರ ಅರ್ಥ ಯಾರು ಕೇಳಿದರೂ ದಯಮಾಡಿ ಹೇಳಬೇಡ “ ಅಂತ ಬೇಡಿಕೊಳ್ಳುತ್ತಾರೆ!

