ಕಥಾ ಬರವಣಿಗೆಗೆ ಅರ್ನೆಸ್ಟ್ ಹೆಮಿಂಗ್ವೆ ಯ 7 ಸಲಹೆಗಳು

ನಿಮಗೆ ಬರೆಯುವ ಆಸಕ್ತಿ ಇದೆಯೇ? ನೀವೂ ಕಥೆಗಾರರಾಗಬೇಕೆ? ಇಲ್ಲಿವೆ ನೋಡಿ ಕಥಾ ಬರವಣಿಗೆಗೆ ಅರ್ನೆಸ್ಟ್ ಹೆಮಿಂಗ್ವೆಯ 7 ಸಲಹೆಗಳು… । ಸಂಗ್ರಹಾನುವಾದ : ಚಿದಂಬರ ನರೇಂದ್ರ

  1. ಒಂದು ನೈಜ ವಾಕ್ಯದೊಂದಿಗೆ ಶುರುಮಾಡಿ.

ಹೊಸ ಕಥೆಯೊಂದನ್ನು ಶುರುಮಾಡಿ ಮುಂದುವರೆಸಲು ಕಷ್ಟಪಡುತ್ತಿರುವಾಗ, ನಾನು ಬೆಂಕಿಯ ಸುತ್ತ ಕುಳಿತು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬೆಂಕಿಯಲ್ಲಿ ಹಿಂಡಿ, ಆ ರಸ ಬೆಂಕಿಯಲ್ಲಿ ಬಿದ್ದಾಗ ಹೊಮ್ಮುವ ನೀಲಿ ಕಿಡಿಗಳನ್ನು ನೋಡುತ್ತ, ನನಗೆ ನಾನೇ ಹೇಳಿಕೊಳ್ಳುತ್ತೇನೆ, “ಚಿಂತೆ ಮಾಡಬೇಡ, ನೀನು ಹಿಂದೆಯೂ ಸಾಕಷ್ಟು ಬರೆದಿದ್ದೀಯ, ಈಗಲೂ ನಿನ್ನಿಂದ ಬರೆಯುವುದು ಸಾಧ್ಯ”.

ಒಂದು ನೈಜ, ಸರಳ ವಾಕ್ಯ writer’s block ನ ಭಂಗ ಮಾಡಿ ಮುಂದೆ ಬರವಣಿಗೆಯನ್ನು ಸರಾಗಗೊಳಿಸುತ್ತದೆ ಎಂದು ಹೆಮಿಂಗ್ವೆ ನಂಬಿದ್ದ.

  1. ಮುಂದೆ ಬರೆಯಬೇಕಾದ ವಿಷಯ ಇನ್ನೂ ನಿಮ್ಮ ತಲೆಯಲ್ಲಿ ಇರುವಾಗಲೇ ಆ ದಿನದ ಬರವಣಿಗೆಯನ್ನು ನಿಲ್ಲಿಸಿ.

“ಕಥೆ ಚೆನ್ನಾಗಿ ಮುಂದುವರೆಯುತ್ತ, ಮುಂದೆ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತಿರುವಾಗಲೇ ನೀವು ಆ ದಿನದ ಬರವಣಿಗೆಯನ್ನು ನಿಲ್ಲಿಸಿ. ಈ ರೀತಿ ಮಾಡುವುದರಿಂದ ನಿಮಗೆ ಮರುದಿನ ಬರವಣಿಗೆ ಆರಂಭ ಮಾಡುವುದು ಬಹಳ ಸುಲಭವಾಗುತ್ತದೆ”.

ಮುಂದಿನ ಬರವಣಿಗೆಗಾಗಿ ಸ್ವಲ್ಪ momentum ಉಳಿಸಿಕೊಳ್ಳುವುದರಿಂದ ಮರುದಿನ ಯಾವ ಅಡತಡೆಯಿಲ್ಲದೆ ಬರವಣಿಗೆಯನ್ನು ಶುರು ಮಾಡಬಹುದು.

  1. ನೀವು ಬರವಣಿಗೆಯಲ್ಲಿ ತೊಡಗಿಸಿಕೊಳ್ಳದಿರುವಾಗ ಕಥೆಯ ಬಗ್ಗೆ ಥಿಂಕ್ ಮಾಡಬೇಡಿ.

“ಸೃಜನಶೀಲತೆಯ ಬಾವಿಯನ್ನ ಪೂರ್ತಿ ಖಾಲಿ ಮಾಡಿಕೊಳ್ಳಬೇಡಿ, ಒಂದಿಷ್ಚು ತೇವ ಇನ್ನೂ ಒಳಗೆ ಉಳಿದುಕೊಂಡಿರಲಿ. ರಾತ್ರಿ ಆ ಬಾವಿ ಸಹಜವಾಗಿ ಮತ್ತೆ ತುಂಬಿಕೊಳ್ಳಲಿ”.

ಮೈಂಡ್ ಗೆ ವಿಶ್ರಾಂತಿಗಾಗಿ ಸ್ವಲ್ಪ ಹಾಸಿಗೆ ಹಾಸಿ ಕೊಡುವುದರಿಂದ, ಸೃಜನಶೀಲತೆ ಪೂರ್ತಿ ಒಣಗಿ ಹೋಗುವುದು (burn out) ತಪ್ಪುತ್ತದೆ ಎನ್ನುವುದು ಹೆಮಿಂಗ್ವೆಯ ತಿಳುವಳಿಕೆಯಾಗಿತ್ತು.

  1. ಪ್ರತಿ ದಿನದ ಬರವಣಿಗೆಯನ್ನು, ನೀವು ಇಲ್ಲಿಯವರೆಗೆ ಏನು ಬರೆದಿದ್ದೀರಿ ಎನ್ನುವುದನ್ನ ಓದುವ ಮೂಲಕ ಶುರು ಮಾಡಿ.

“ಹಿಂದೆ ಬರೆದ ಎಲ್ಲವನ್ನೂ ಓದುವುದು ಸಾಧ್ಯವಾಗದಿದ್ದರೆ, ಹಿಂದಿನ ಒಂದೆರಡು ಅಧ್ಯಾಯಗಳನ್ನಾದರೂ ಓದಿ. ಮತ್ತು ಪ್ರತಿವಾರಕ್ಕೊಮ್ಮೆಯಾದರೂ ಮೊದಲಿನಿಂದ ಎಲ್ಲವನ್ನೂ ಓದಿ”.

ಈ ಬಗೆಯ ಪ್ರ್ಯಾಕ್ಟೀಸ್ ಹೆಮಿಂಗ್ವೆ ಗೆ ತನ್ನ ಕಥೆಯ ಓಘದೊಂದಿಗೆ ( flow) ಮತ್ತೆ ರೀಕನೆಕ್ಟ್ ಆಗುವುದಕ್ಕೆ ಹಾಗು ಕಥೆಯ continuity ನ ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಿತ್ತು.

  1. ಭಾವನೆಗಳನ್ನು ವಿವರಿಸಲು ಹೋಗಬೇಡಿ, ಸೃಷ್ಟಿ ಮಾಡಿ.

“ನ್ಯೂಸ್ ಪೇಪರ್ ಬರವಣಿಗೆಯಲ್ಲಿ ಏನು ಆಯಿತು ಎನ್ನುವುದನ್ನ ವಿವರಿಸಿ ಹೇಳಲಾಗುತ್ತದೆ, ಬಹುತೇಕ ಭಾವನೆಗಳನ್ನು timeline ಗಳ ಮೂಲಕ ಕ್ರಿಯೇಟ್ ಮಾಡಲಾಗುತ್ತದೆ. ಆದರೆ ನಿಜವಾದ ಕಥಾ ಬರವಣಿಗೆಯಲ್ಲಿ ಭಾವನೆಗಳನ್ನು ನೇರವಾಗಿ ಹೃದಯದಿಂದ ಸೃಷ್ಟಿಮಾಡಿ ತಲುಪಿಸಲಾಗುತ್ತದೆ. ಓದುಗನಿಗೆ ಭಾವನಗಳನ್ನು ಅನುಭವಿಸಲು ಅವಕಾಶ ಮಾಡಿಕೊಡಲಾಗುತ್ತದೆ”.

ಭಾವನೆಗಳನ್ನು ವಿವರಿಸುವುದರ ಬದಲಿಗೆ, ಓದುಗರಿಗೆ ಭಾವನೆಗಳನ್ನು action ಮತ್ತು ಸಂಭಾಷಣೆಯ ಮೂಲಕ ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಒಳ್ಳೆಯದು ಎನ್ನುವುದು ಹೆಮಿಂಗ್ವೆಯ ಸಲಹೆ.

  1. ಪೆನ್ಸಿಲ್ ನಿಂದ ಬರವಣಿಗೆ ಮಾಡಿ.

“ಪೆನ್ಸಿಲ್ ನಿಂದ ಬರೆಯುವುದು ನಿಮಗೆ ರಿವೈಸ್ ಮಾಡಲು ಮೂರು ಅವಕಾಶಗಳನ್ನು ಕೊಡುತ್ತದೆ. ಒಂದು ಬರೆದದ್ದನ್ನು ಓದುವಾಗ ಇನ್ನೊಮ್ಮೆ, ಬರೆದದ್ದನ್ನು ಟೈಪ್ ಮಾಡುವಾಗ ಹಾಗು ಮತ್ತೊಮ್ಮೆ, ಪ್ರೂಪ್ ರೀಡ್ ಮಾಡುವಾಗ”.

ಹೆಮಿಂಗ್ವೆ ಗೆ ಪೆನ್ಸಿಲ್ ಬಳಸಿ ಪೇಪರ್ ಮೇಲೆ ಬರೆಯುವ ದೈಹಿಕ ಕ್ರಿಯೆ, ಐಡಿಯಾಗಳನ್ನು ಸುಲಭವಾಗಿ ದಾಖಲಿಸುವ ಮತ್ತು ಮುಂದೆ ತಿದ್ದಲು ಅವಕಾಶ ಮಾಡಿಕೊಡುವ ರೀತಿಯಾಗಿತ್ತು.

  1. ಆದಷ್ಟು ಸಂಕ್ಷಿಪ್ತವಾಗಿರಲಿ

“ಅಮೇರಿಕನ್ ಸಿವಿಲ್ ವಾರ್ ನ ಸಮಯದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮಾಡಿದ Gettysburg ಭಾಷಣ ಮುದ್ದಾಂ (by design) ಸಂಕ್ಷಿಪ್ತವಾಗಿತ್ತು. ಬರವಣಿಗೆಯ ನಿಯಮಗಳು ಹೇಗೆ ಭೌತಶಾಸ್ತ್ರದ ನಿಯಮಗಳು ಬದಲಾಗುವುದಿಲ್ಲವೋ ಹಾಗೆ”.

ಹೆಮಿಂಗ್ವೆ ಗೆ ಪ್ರತಿಯೊಂದು ಪದವನ್ನು ಅಳೆದು ತೂಗಿ ಬರೆಯುವ ಸಂಕ್ಷಿಪ್ತ, ಶಕ್ತಿಶಾಲಿ ಗದ್ಯದ ಬಗ್ಗೆ ಆಸ್ಥೆಯಿತ್ತು.

ಮೇಲಿನ ಪ್ರತಿಯೊಂದು ಸಲಹೆಯೂ, ಸ್ಪಷ್ಟತೆ, ಸರಳತೆ ಮತ್ತು ಬರವಣಿಗೆಯ ಕಲೆಯ ಬಗೆಗಿನ ಗೌರವದ ಬಗ್ಗೆ ಹೆಮಿಂಗ್ವೆಗೆ ಇದ್ದ ಆಳವಾದ ಬದ್ಧತೆಯ ಉದಾಹರಣೆಗಳಾಗಿವೆ. ಅವನ ಸಲಹೆಗಳು ಇಂದಿಗೂ ಬರಹಗಾರರಿಗೆ ಸ್ಪೂರ್ತಿಯ ಸೆಲೆಯಾಗಿವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.