ಸಂಗ್ರಹಾನುವಾದ : ಚಿದಂಬರ ನರೇಂದ್ರ
ವಾಲ್ಟ್ ಡಿಸ್ನಿ ದು ಒಂದು ಅದ್ಭುತ ಕಥೆ. ವಾಲ್ಟ್ ಡಿಸ್ನಿ ತನ್ನ ಜೀವನದುದ್ದಕ್ಕೂ ಕಷ್ಟ ಪಟ್ಟ ಡಿಸ್ನಿ ಲ್ಯಾಂಡ್ ನಿರ್ಮಾಣ ಮಾಡಲಿಕ್ಕೆ. ಬಹಳ ಸಾಲ ಸೋಲ ಮಾಡಿದ, ಬಹಳಷ್ಟು ಜನ ಅವನಿಗೆ ಸಹಾಯ ಮಾಡಲು ನಿರಾಕರಿಸಿದರು. ಅದರೂ ಛಲ ಬಿಡದ ವಾಲ್ಟ್ ಬಹಳಷ್ಟು ಸಾಹಸ ಮಾಡಿ ಅದ್ಭುತ ಡಿಸ್ನಿ ಲ್ಯಾಂಡ್ ಕಟ್ಟಿಯೇ ಬಿಟ್ಟ. ದುರದೃಷ್ಟವಶಾತ್ ಡಿಸ್ನಿ ಲ್ಯಾಂಡ್ ಉದ್ಘಾಟನೆಯಾಗುವ ಸಮಯಕ್ಕೆ ವಾಲ್ಟ್ ಡಿಸ್ನಿ ತೀರಿಕೊಂಡುಬಿಟ್ಟಿದ್ದ.
ಅಂದು ಆ ಉದ್ಘಾಟನಾ ಸಂಭಾರಂಭಕ್ಕೆ ಬಂದಿದ್ದ ಎಲ್ಲರ ಬಾಯಲ್ಲಿ ಒಂದೇ ಮಾತು, I wish Walt was here… ಎಲ್ಲರೂ ಬಹಳ ದುಃಖದಿಂದ ವಾಲ್ಟ್ ಡಿಸ್ನಿ ಯನ್ನು ನೆನಪು ಮಾಡಿಕೊಳ್ಳುತ್ತಿದ್ದರು.
ಅದೇ ಸಮಯಕ್ಕೆ ವೇದಿಕೆಗೆ ಬಂದ ವಾಲ್ಟ್ ಡಿಸ್ನಿ ಸಹೋದರ ಮಾತನಾಡಿದ,
“ವಾಲ್ಟ್ ಇವತ್ತು ಇಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ. , I wish Walt was here, I wish Walt had seen this ಎಂದು ನಿರಾಶರಾಗಬೇಡಿ.
Walt saw it, that is why you are seeing it ”.

