ಎಷ್ಟೇ ಚಿಕ್ಕದಾಗಿರಲಿ, ನೀವು ಪ್ರತಿ ಹೆಜ್ಜೆ ಮುಂದಿಟ್ಟಾಗಲೂ ಅದು ಅವರ ಸಹನಶಕ್ತಿಯನ್ನು ಉತ್ತೇಜಿಸುತ್ತದೆ, ಪುಟಿದೇಳುವುದನ್ನು ಕಲಿಸುತ್ತದೆ. ಮುಂದೆ ಹೆಜ್ಜೆ ಹಾಕಿ, ಕೇವಲ ನಿಮಗಾಗಿ ಮಾತ್ರ ಅಲ್ಲ, ಆ ಪುಟ್ಟ ಜೀವಕ್ಕಾಗಿ, ಯಾರಿಗೆ ನಿಮ್ಮ ಮೇಲೆ ಜಗತ್ತಿನ ಯಾರಿಗೂ ಇರದಷ್ಟು ನಂಬಿಕೆ ಇದೆಯೋ ಆ ಜೀವಕ್ಕಾಗಿ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
“ಸಾಕಪ್ಪ ಇನ್ನು ನನ್ನ ಕೈಲಾಗಲ್ಲ” ಎಂದು ನಿಮಗೆ ಅನಿಸತೊಡಗಿದಾಗ ನೆನಪಿಸಿಕೊಳ್ಳಿ, ಕೆಲವರು ನಿಮ್ಮನ್ನು ಗಮನಿಸುತ್ತಿದ್ದಾರೆ.
ಸವಾಲುಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ ಎನ್ನುವುದನ್ನ ಗಮನಿಸುತ್ತಿದ್ದಾರೆ. ಬಿದ್ದ ಮೇಲೂ ನೀವು ಹೇಗೆ ಎದ್ದು ನಿಂತು ಮುಂದುವರೆಯುತ್ತೀರಿ, ಮತ್ತು ಪರಿಸ್ಥಿತಿ ಕಠಿಣವಾಗಿರುವಾಗಲೂ ಹೇಗೆ ನೀವು ಧೃತಿಗೆಡದೆ ಎಲ್ಲವನ್ನೂ ಸಹಿಸುತ್ತ ಮುಂದೆ ಹೆಜ್ಜೆ ಹಾಕುತ್ತಿದ್ದೀರಿ ಎನ್ನುವುದನ್ನ ಗಮನಿಸುತ್ತಿದ್ದಾರೆ.
ಅವರು ನಿಮ್ಮನ್ನು ಗಮನಿಸುತ್ತಿರುವುದು, ಅದು ನೀವು ನೀವು ಎನ್ನುವ ಕಾರಣಕ್ಕೆ ಮಾತ್ರ ಅಲ್ಲ, ನೀವು ತೋರುತ್ತಿರುವ ಸಾಮರ್ಥ್ಯದ ಕಾರಣಕ್ಕಾಗಿ ಅವರು ನಿಮ್ಮನ್ನು ಗಮನಿಸುತ್ತಿದ್ದಾರೆ.
ನೀವು ಅವರ ಮೊದಲ ಹೀರೋ, ಮೊದಲ ಆದರ್ಶ, ಮೊದಲ ದಾರಿದೀಪ.
ಎಷ್ಟೇ ಚಿಕ್ಕದಾಗಿರಲಿ, ನೀವು ಪ್ರತಿ ಹೆಜ್ಜೆ ಮುಂದಿಟ್ಟಾಗಲೂ ಅದು ಅವರ ಸಹನಶಕ್ತಿಯನ್ನು ಉತ್ತೇಜಿಸುತ್ತದೆ, ಪುಟಿದೇಳುವುದನ್ನು ಕಲಿಸುತ್ತದೆ.
ನೀವು ಹಿಂಬಾಲಿಸುವ ಪ್ರತಿ ಕನಸು ಅವರಿಗೆ ಧೈರ್ಯವನ್ನು ಕಲಿಸುತ್ತದೆ. ನೀವು ಸೋಲಲು ನಿರಾಕರಿಸುವ ಪ್ರತಿಕ್ಷಣ ಅವರಿಗೆ ಸ್ಥಾಯಿಯಾಗದಿರುವುದೆಂದರೆ ಏನು ಎನ್ನುವುದನ್ನ ತೋರಿಸಿಕೊಡುತ್ತದೆ.
ನೀವು ಕೇವಲ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಿಲ್ಲ, ನೀವು ಅವರ ಕನಸುಗಳನ್ನು ರೂಪಿಸುತ್ತಿದ್ದೀರಿ.
ಮುಂದೆ ಹೆಜ್ಜೆ ಹಾಕಿ, ಕೇವಲ ನಿಮಗಾಗಿ ಮಾತ್ರ ಅಲ್ಲ, ಆ ಪುಟ್ಟ ಜೀವಕ್ಕಾಗಿ, ಯಾರಿಗೆ ನಿಮ್ಮ ಮೇಲೆ ಜಗತ್ತಿನ ಯಾರಿಗೂ ಇರದಷ್ಟು ನಂಬಿಕೆ ಇದೆಯೋ ಆ ಜೀವಕ್ಕಾಗಿ.
ಅದು ನಿಮ್ಮ ಹಾಗೆ ಆಗಬಯಸುತ್ತಿದೆ. Unstoppable ಎನ್ನುವುದು ಏನು ಎಂದು ಅದಕ್ಕೆ ಗೊತ್ತಾಗಲಿ.

