ನಮ್ಮೊಳಗೆ ಕೋಪ ಹುಟ್ಟಿಕೊಂಡಾಗ ನಾವು ನಮ್ಮ ಈ ಕೋಪದ ಹುಟ್ಟಿಗೆ ಕಾರಣರಾದವರನ್ನು ಶಿಕ್ಷಗೆ ಗುರಿಪಡಿಸಲು ಬಯಸುತ್ತೇವೆ. ಹೀಗೆ ಮಾಡುವುದರಿಂದ ನಾವು ಅನುಭವಿಸುವ ನೋವು ಕಡಿಮೆಯಾಗುತ್ತದೆ ಎಂದು ತಿಳಿದುಕೊಂಡಿರುತ್ತೇವೆ. ವಾಸ್ತವದಲ್ಲಿ ನಮ್ಮ ಕೋಪಕ್ಕೆ ನಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಕಾರಣವಲ್ಲ, ಇದು ನಮ್ಮ ವ್ಯವಹಾರ… । Thich Nhat Hanh; ಕನ್ನಡಕ್ಕೆ: ಚಿದಂಬರ ನರೇಂದ್ರ
ಕೋಪ ಒಂದು ಅಹಿತಕರ ಭಾವನೆ. ಇದು ನಮ್ಮ ಸ್ವ ನಿಯಂತ್ರಣವನ್ನು ಸುಟ್ಟು ಹಾಕುವ ಬೆಂಕಿಯ ಜ್ವಾಲೆ ಇದ್ದಂತೆ ಮತ್ತು ನಾವು ಮುಂದೆ ಪಶ್ಚಾತಾಪ ಪಡುವಂತೆ ನಮ್ಮಿಂದ ಆಡಿಸುವ ಹಾಗು ಮಾಡಿಸುವ ಸಂಗತಿ. ಯಾರಾದರೂ ಕೋಪದಲ್ಲಿರುವಾಗ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಅವರು ನರಕ ಅನುಭವಿಸುತ್ತಿರುವುದು. ನರಕ ಸೃಷ್ಟಿಯಾಗಿರೋದೇ ಕೋಪ ಮತ್ತು ದ್ವೇಷ ಎನ್ನುವ ಸಂಗತಿಗಳಿಂದ. ಕೋಪದಿಂದ ಹೊರತಾಗಿರುವ ಮೈಂಡ್ ಯಾವಾಗಲೂ ಫ್ರೇಶ್, ಪ್ರಶಾಂತ ಮತ್ತು ಮುಗ್ಧ. ಕೋಪದ ಗೈರು ಹಾಜರಿಯೇ ನಿಜವಾದ ಖುಶಿಯ, ಫ್ರೇಮದ ಮತ್ತು ಕಾರುಣ್ಯದ ಅಸ್ತಿತ್ವಕ್ಕೆ ಕಾರಣ.
ಯಾವಾಗ ನಾವು ಕೋಪವನ್ನು ಮೈಂಡ್ ಫುಲ್ ನೆಸ್ ಎನ್ನುವ ದೀಪದ ಕೆಳಗೆ ಇಟ್ಟು ನೋಡುತ್ತೇವೆಯೋ ಆ ಕೂಡಲೇ ಕೋಪ ತನ ಸಹಜವಾದ ವಿನಾಶಕಾರಿ ಸ್ವಭಾವವನ್ನು ಕಳೆದುಕೊಳ್ಳಲು ಶುರು ಮಾಡುತ್ತದೆ. ಆಗ ನಮಗೆ ನಾವೇ ಹೇಳಿಕೊಳ್ಳಬೇಕು.
Breathing in, I know that anger is in me.
Breathing out, I know that I am my anger
ಹೀಗೆ ನಮ್ಮ ಉಸಿರಾಟವನ್ನು ನಾವು ಹತ್ತಿರದಿಂದ ಫಾಲೋ ಮಾಡಿದಾಗ, ನಾವು ನಮ್ಮೊಳಗಿನ ಕೋಪವನ್ನು mindfully ಗಮನಿಸುತ್ತೇವೆ ಮತ್ತು ಗುರುತಿಸುತ್ತೇವೆ. ಮತ್ತು ಕೋಪ ನಮ್ಮ ಪ್ರಜ್ಞೆಯನ್ನು ತನ್ನ ಹತೋಟಿಗೆ ತೆಗುಕೊಳ್ಳುವುದನ್ನು ತಪ್ಪಿಸುತ್ತೇವೆ.
ನಮ್ಮೊಳಗೆ ಕೋಪ ಹುಟ್ಟಿಕೊಂಡಾಗ ನಾವು ನಮ್ಮ ಈ ಕೋಪದ ಹುಟ್ಟಿಗೆ ಕಾರಣರಾದವರನ್ನು ಶಿಕ್ಷಗೆ ಗುರಿಪಡಿಸಲು ಬಯಸುತ್ತೇವೆ. ಹೀಗೆ ಮಾಡುವುದರಿಂದ ನಾವು ಅನುಭವಿಸುವ ನೋವು ಕಡಿಮೆಯಾಗುತ್ತದೆ ಎಂದು ತಿಳಿದುಕೊಂಡಿರುತ್ತೇವೆ. ವಾಸ್ತವದಲ್ಲಿ ನಮ್ಮ ಕೋಪಕ್ಕೆ ನಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಕಾರಣವಲ್ಲ, ಇದು ನಮ್ಮ ವ್ಯವಹಾರ. ಈ ರೀತಿಯ ನಂಬಿಕೆಯನ್ನು ನಮ್ಮೊಳಗಿಂದ ಕಿತ್ತು ಹಾಕಬೇಕು ಏಕೆಂದರೆ ಕೋಪದಲ್ಲಿರುವಾಗ ನಾವು ಆಡುವ ಮಾತುಗಳಿಂದಾಗಿ ಮತ್ತು ಮಾಡುವ ಕ್ರಿಯೆಗಳಿಂದಾಗಿ ಸಂಬಂಧಗಳು ಮತ್ತಷ್ಟು ಬಿಗಡಾಯಿಸುತ್ತದೆ.
ಕೋಪ ನಮ್ಮ ಸಹಜ ಸ್ವಭಾವವಲ್ಲ, ಅದು ಹೊರಗಿನಿಂದ ಬಂದು ನಮ್ಮನ್ನು ಆವರಿಸಿಕೊಂಡಿರುವಂಥದು.
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.
“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “
ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.
ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?
ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?
ಶಿಷ್ಯ : ಅಯ್ಯೋ ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.
ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು?
ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.
Source: Thich Nhat Hanh, “Anger: Wisdom for Cooling the Flames”

