ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಕಡಲ ತೀರದಲ್ಲಿ ಇಬ್ಬರು ಮಾತಾಡುತ್ತಿದ್ದರು
ಒಬ್ಬಾತ ಹೇಳಿದ, ʻಬಹಳ ಹಿಂದೆ, ಭರತದ ಹೊತ್ತಿನಲ್ಲಿ ಮರಳ ಮೇಲೆ ಒಂದು ಸಾಲು ಬರೆದೆ. ಜನ ಈಗಲೂ ಅದನ್ನು ನೋಡುತ್ತಾರೆ, ಅಳಿಸಿ ಹೋಗದ ಹಾಗೆ ಹುಷಾರಾಗಿದ್ದಾರೆ,ʼ ಅಂದ.
ಇನ್ನೊಬ್ಬ ಹೇಳಿದ. ಕಡಲ ನೀರು ಇಳಿದಿರುವ ಹೊತ್ತಿನಲ್ಲ ನಾನೂ ಒಂದು ಸಾಲು ಬರೆದೆ. ಆಮೇಲೆ ಕಡಲ ಅಲೆಗಳು ಬಂದು ನಾನು ಬರೆದದ್ದನ್ನು ಒರೆಸಿಕೊಂಡು ಹೋದವು. ಇರಲಿ, ನೀನೇನು ಬರೆದಿದ್ದೆ?ʼ
ʻನಾನು ಅಂದರೆ ನಾನೇʼ ಅಂತ ಬರೆದಿದ್ದೆ. ನೀನೇನು ಬರೆದಿದ್ದೆ?ʼ ಅಂತ ಕೇಳಿದ.
ಆಗ ಇನ್ನೊಬ್ಬ, ʻಈ ಕಡಲಿನ ಒಂದು ಹನಿ ನಾನು,ʼ ಅಂತ ಬರೆದಿದ್ದೆ ಅಂದ ಇನ್ನೊಬ್ಬನು.

